ನವದೆಹಲಿ : ಭಾರತ – ಚೀನಾದ ನಡುವೆ ಯುದ್ದ ಕಾರ್ಮೋಡದ ಕವಿದಿದೆ. ಚೀನಾ ಸದ್ದಿಲ್ಲದೇ ತನ್ನ ಗಡಿಯಲ್ಲಿ ತನ್ನ ಸೇನೆಯನ್ನು ಜಮಾವಣೆ ಮಾಡುತ್ತಿದೆ. ಈ ಮಾಹಿತಿಯ ಬೆನ್ನಲ್ಲೇ ಭಾರತ ಕೂಟ ಅಲರ್ಟ್ ಆಗಿದ್ದು, ಗಾಲ್ವಾನ್ ಗಡಿಗೆ ಭಾರತ ಹೆಚ್ಚುವರಿಯಾಗಿ 50 ಸಾವಿರ ಯೋಧರನ್ನ ನಿಯೋಜನೆ ಮಾಡಿದೆ.

ಗಲ್ವಾನ್ ಸಂಘರ್ಷದ ಮೂಲಕ ಚೀನಾ ತನ್ನ ನರಿ ಬುದ್ದಿಯನ್ನು ತೊರಿಸಿದ್ದು, ಭಾರತ ಗಡಿಯಲ್ಲಿ ತನ್ನ ಸಾಮರ್ಥ್ಯವನ್ನು ವೃದ್ದಿಸಿ ಕೊಳ್ಳಲು ಸಿದ್ದತೆ ನಡೆಸಿದೆ. ಒಂದೊಮ್ಮೆ ಚೀನಾ ಭಾರತದ ಮೇಲೆ ದಾಳಿ ಮಾಡಿದ್ರೆ ಪ್ರತಿದಾಳಿ ನಡೆಸಲು ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಗಾಲ್ವಾನ್ ಗಡಿಯಲ್ಲಿ ಶೇ. 40 ರಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಲಾಗಿದೆ. ಚೀನಾ ಸೇನೆ ಮುನ್ನುಗ್ಗದಂತೆ ಕಟ್ಟೆಚ್ಚರ ವಹಿಸಿದೆ. ಗಡಿಯಲ್ಲಿ ನಿರಂತರವಾಗಿ ಕಾವಲನ್ನು ಮುಂದುವರಿಸಿದೆ.

ಯೋಧರ ಜೊತೆಗೆ ಜೆಟ್ ವಿಮಾನ, ಲಘು ಹೆಲಿಕಾಪ್ಟರ್, ಎಂ7777 ಹೊವಿಟ್ಜರ್ ಫಿರಂಗಿ ಗಳನ್ನು ಕೂಡ ಕೇಂದ್ರ ಸರ್ಕಾರ ಚೀನಾ ಗಡಿ ಯಲ್ಲಿ ನಿಯೋಜನೆ ಮಾಡಿದೆ. ಒಂದೊಮ್ಮೆ ಚೀನಾ ದಾಳಿ ಮಾಡಿದ್ರೆ ಪ್ರತಿದಾಳಿ ನಡೆಸಿ ಚೀನಾದ ವಶದಲ್ಲಿರುವ ಇನ್ನಷ್ಟು ಪ್ರದೇಶಗಳನ್ನು ಭಾರತ ತನ್ನ ವಶಕ್ಕೆ ಪಡೆಯಲು ಸಕಲ ರೀತಿಯಲ್ಲಿ ಯೂ ಸಜ್ಜಾಗಿದೆ.

ಇನ್ನೊಂದೆಡೆ ಚೀನಾ ಕೂಡ ಹಿಮಾಲಯ ಪ್ರದೇಶ ಮತ್ತು ವಿವಾದಿತ ಪ್ರದೇಶಗಳಲ್ಲಿ ಕಾವಲು ಕಾಯುವ ಕ್ಸಿನ್ ಜಿಯಾಂಗ್ ಮಿಲಿಟರಿ ಕಮಾಂಡ್‌ಗೆ ಕಳುಹಿಸಿಕೊಟ್ಟಿದೆ. ಟಿಬೆಟ್‌ನ ವಿವಾದಿತ ಗಡಿಯಲ್ಲಿ ಚೀನಾ ಬಾಂಬ್ ನಿರೋಧಕ ಬಂಕರ್‌ಗಳು, ಯುದ್ಧ ವಿಮಾನ ಸ್ಕಾರ್ಡನ್‌ಗಳನ್ನು ಮತ್ತು ಹೊಸ ವಾಯು ನೆಲೆಗಳನ್ನು ನಿರ್ಮಾಣ ಮಾಡಿಕೊಂಡಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.