ನವದೆಹಲಿ : ದಕ್ಷಿಣ ಆಫ್ರಿಕಾದಲ್ಲಿ ಕಂಡು ಬಂದಿರುವ ಆಫ್ರಿಕನ್ ವೈರಸ್ ಓಮಿಕ್ರಾನ್ ಆತಂಕ ವಿಶ್ವವನ್ನೇ ಕಾಡುತ್ತಿದೆ. ಇದೀಗ ವಿಶ್ವದ 13 ರಾಷ್ಟ್ರಗಳು ಓಮಿಕ್ರಾನ್ ಅಟ್ಟಹಾಸಕ್ಕೆ ನಲುಗಿವೆ. ಆಫ್ರಿಕಾ ರಾಷ್ಟ್ರಗಳಲ್ಲಿ ಓಮಿಕ್ರಾನ್ ಪತ್ತೆಯಾಗುತ್ತಲೇ ಹಲವು ರಾಷ್ಟ್ರಗಳು ನಿರ್ಬಂಧಗಳನ್ನು ಹೇರಿಕೊಳ್ಳುತ್ತಿವೆ. ಕೊರೊನಾ ವೈರಸ್ ಸೋಂಕು ಹಲವು ರೂಪಾಂತರ ಗಳನ್ನು ಕಂಡಿದೆ. ಇಷ್ಟು ದಿನ ಡೆಲ್ಟಾ ಫ್ಲಸ್ ಅಪಾಯಕಾರಿ (Omicron Vs Delta) ಎಂದು ಹೇಳಲಾಗುತ್ತಿತ್ತು. ಆದ್ರೀಗ ಡೆಲ್ಟಾ ಫ್ಲಸ್‌ಗಿಂತಲೂ ಆರು ಪಟ್ಟು ಹೆಚ್ಚು ಅಪಾಯಕಾರಿಯಾಗಿದ್ದು, ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆಯಂತೆ ಓಮಿಕ್ರಾನ್.
ಚೀನಾದಲ್ಲಿ ಕಾಣಿಸಿಕೊಂಡಿದ್ದ ಕೊರೊನಾ ವೈರಸ್ ಸೋಂಕು ನಂತರದಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳನ್ನು ಕಾಡಿತ್ತು. ವಿಶ್ವದಾದ್ಯಂತ ಲಕ್ಷಾಂತರ ಮಂದಿ ಹೆಮ್ಮಾರಿ ಕೊರೊನಾ ಸೋಂಕಿಗೆ ಬಲಿಯಾಗಿ ಹೋಗಿದ್ದಾರೆ. ಕೊರೊನಾ ಎರಡು, ಮೂರು, ನಾಲ್ಕನೇ ಅಲೆಗಳು ಈಗಾಗಲೇ ವಿಶ್ವವನ್ನು ಕಾಡಿದೆ. ಇದೀಗ ಕೊರೊನಾ ರೂಪಾಂತರ ಓಮಿಕ್ರಾನ್ ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ನಡುಕ ಹುಟ್ಟಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಂಡಿದ್ದ ದಕ್ಷಿಣ ಆಫ್ರಿಕಾ, ಚೀನಾ, ಯುನೈಟೆಡ್ ಕಿಂಗ್‌ಡಮ್, ಯುರೋಪಿಯನ್ ದೇಶಗಳು, ಬಾಂಗ್ಲಾದೇಶ, ಬ್ರೆಜಿಲ್, ಬೋಟ್ಸ್‌ವಾನಾ, ಮಾರಿಷಸ್, ನ್ಯೂಜಿಲೆಂಡ್, ಜಿಂಬಾಬ್ವೆ, ಹಾಂಗ್ ಕಾಂಗ್, ಸಿಂಗಾಪುರ್ ಮತ್ತು ಇಸ್ರೇಲ್ ರಾಷ್ಟ್ರಗಳು ಒಮಿಕ್ರಾನ್ ಆತಂಕದಲ್ಲಿವೆ.
ಕೊರೊನಾ ವೈರಸ್ ಸೋಂಕಿನ ರೂಪಾಂತರಗಳಲ್ಲಿಯೇ ಸದ್ಯ ಓಮಿಕ್ರಾನ್ ಹೆಚ್ಚು ಅಪಾಯಕಾರಿ ಎನ್ನಲಾಗುತ್ತಿದೆ. ಈ ವೈರಸ್ ಅತ್ಯಂತ ವೇಗವಾಗಿ ಹರಡುವ ಸಾಮರ್ಥ್ಯವನ್ನು ಹೊಂದಿದೆ. ಅದ್ರಲ್ಲೂ ಡೆಲ್ಟಾ ಫ್ಲಸ್ ಸೋಂಕಿನ ಹರಡುವಿಕೆಯ ಸಾಮರ್ಥ್ಯಕ್ಕಿಂತ ಬರೋಬ್ಬರಿ ಆರು ಪಟ್ಟು ಹೆಚ್ಚಿದೆ. ಓಮಿಕ್ರಾನ್ ವೈರಸ್ ಸೋಂಕಿನ ಲಕ್ಷಣಗಳು ಕೊರೊನಾ ಲಕ್ಷಣಗಳನ್ನೇ ಹೋಲಿಸುತ್ತಿದ್ದರೂ ಕೂಡ ಈ ವೈರಸ್ ಮಾನವನ ದೇಹದ ಮೇಲೆ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ. ಕೊರೊನಾ ವೈರಸ್ ಸೋಂಕಿನ ವಿರುದ್ದ ಹೋರಾಟ ನಡೆಸುವ ಸಲುವಾಗಿ ಈಗಾಗಲೇ ಲಸಿಕೆಯನ್ನು ನೀಡುವ ಕಾರ್ಯವನ್ನು ನಡೆಸಲಾಗಿದೆ. ಆದರೆ ಕೊರೊನಾ ಲಸಿಕೆ ಇದೀಗ ಓಮಿಕ್ರಾನ್ ತೆಡೆಗೆ ಸಹಕಾರಿಯಾಗಲಿದೆಯೇ ಅನ್ನೋ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ವಿಶ್ವ ಆರೋಗ್ಯ ಸಂಸ್ಥೆ ಈಗಾಗಲೇ ಹೊಸ ರೂಪಾಂತರದ ವಿರುದ್ದ ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆಯನ್ನು ನೀಡಿದೆ.
ವಿಶ್ವದಾದ್ಯಂತ ಓಮಿಕ್ರಾನ್ ಭೀತಿ ಎದುರಾಗುತ್ತಿದ್ದಂತೆಯೇ ಕೇಂದ್ರ ಸರಕಾರ ಎಚ್ಚೆತ್ತುಕೊಂಡಿದೆ. ಭಾರತ ದಲ್ಲಿ ಹೊಸ ಕೋವಿಡ್ ರೂಪಾಂತರವಾದ ಓಮಿಕ್ರಾನ್‌ನ ಹೆಚ್ಚುತ್ತಿರುವ ಬೆದರಿಕೆಗಳ ನಡುವೆ, ಕೇಂದ್ರ ಆರೋಗ್ಯ ಸಚಿವಾಲಯವು ಭಾನುವಾರದಂದು ಭಾರತಕ್ಕೆ ಅಂತರಾಷ್ಟ್ರೀಯ ಆಗಮನದ ಮಾರ್ಗಸೂಚಿ ಡಿಸೆಂಬರ್ 1 ರಿಂದ ಜಾರಿಗೆ ತರುವಂತೆ ಪರಿಷ್ಕರಿಸಿದೆ. ಓಮಿಕ್ರಾನ್ ಅಪಾಯಕಾರಿ ದೇಶಗಳಿಂದ ಭಾರತಕ್ಕೆ ಮರಳುವ ಪ್ರಯಾಣಿಕರಿಗೆ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ವಿಧಿಸಲಾಗಿದೆ. ಅಲ್ಲದೇ ಪ್ರಯಾಣಕ್ಕೆ ಮೊದಲು ಆರ್‌ಟಿಪಿಸಿಆರ್ ಟೆಸ್ಟ್ ಜೊತೆಗೆ ಹದಿನಾಲ್ಕು ದಿನಗಳ ಟ್ರಾವೆಲ್ ಹಿಸ್ಟರಿಯನ್ನು ಏರ್ ಸುವಿಧಾ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡುವಂತೆ ತಿಳಿಸಿದೆ. ಇನ್ನು ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರವನ್ನು ವಹಿಸಲಾಗುತ್ತಿದ್ದು, ವಿದೇಶಗಳಿಂದ ಆಗಮಿಸುವ ಪ್ರಯಾಣಿಕ ಮೇಲೆ ಹದ್ದಿನಕಣ್ಣು ಇರಿಸಲಾಗುತ್ತಿದೆ.
ಕೇಂದ್ರ ಸರಕಾರ ಓಮಿಕ್ರಾನ್ ವೈರಸ್ ತಡೆಗೆ ಆರೋಗ್ಯ ಇಲಾಖೆಯ ಸಿಬ್ಬಂಧಿಗಳಿಗೆ ಬೂಸ್ಟರ್ ಡೋಸ್ ನೀಡುವ ಕುರಿತು ಚಿಂತನೆಯನ್ನು ನಡೆಸುತ್ತಿದೆ. ಇನ್ನೊಂದೆಡೆ ಯಲ್ಲಿ ತಾಂತ್ರಿಕ ಸಮಿತಿಯ ಸಭೆಯನ್ನು ಶೀಘ್ರದಲ್ಲಿಯೇ ನಡೆಸಲಾಗುತ್ತಿದ್ದು, ಸಭೆಯಲ್ಲಿ ಮಹತ್ವದ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆಯಿದೆ. ಜೊತೆಗೆ ಲಾಕ್‌ಡೌನ್ ಹೊರತು ಪಡಿಸಿ ಇತರ ಕಠಿಣ ನಿರ್ಬಂಧಗಳನ್ನು ಹೇರುವ ಸಾಧ್ಯತೆಯೂ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ : omicron alert : ಉಡುಪಿಯಲ್ಲಿ ಓಮಿಕ್ರಾನ್ ಕಟ್ಟೆಚ್ಚರ : ಕೊರೊನಾ ಟೆಸ್ಟ್ ಹೆಚ್ಚಳಕ್ಕೆ ಡಿಸಿ ಕೂರ್ಮರಾವ್ ಸೂಚನೆ
ಇದನ್ನೂ ಓದಿ : ಪಾವಂಜೆ ಮೇಳ ಕಟ್ಟಿ ಗೆದ್ದ ಪಟ್ಲ, ಹೊಸ ಮೇಳ ಕಟ್ತಾರಾ ಜನ್ಸಾಲೆ
( Omicron Vs Delta : New variant Omicron is 6 times more transmissible than Delta: Details)