ಮಂಗಳವಾರ, ಏಪ್ರಿಲ್ 29, 2025
HomeNationalUttharakhand : ಉತ್ತರಾಖಂಡದಲ್ಲಿ ದಿಢೀರ್ ಮೇಘಸ್ಪೋಟ : 17 ಜನ ಸಾವು, ಹಲವರು ನಾಪತ್ತೆ

Uttharakhand : ಉತ್ತರಾಖಂಡದಲ್ಲಿ ದಿಢೀರ್ ಮೇಘಸ್ಪೋಟ : 17 ಜನ ಸಾವು, ಹಲವರು ನಾಪತ್ತೆ

- Advertisement -

ಉತ್ತರಾಖಂಡ : ನಿರಂತರವಾಗಿ ಕಳೆದ 3 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಂದು ಪ್ರವಾಹ ಪರಿಸ್ಥಿತಿ ಎದುರಾಗಿದೆ. ಭಾರೀ ಮಳೆಯಿಂದಾಗಿ 16 ಜನ ಸಾವಿಗೀಡಾಗಿದ್ದಾರೆ. ಅಲ್ಲಿನ ಮನೆಗಳು ಸಂಪೂರ್ಣ ಜಲಾವೃತವಾಗಿದ್ದು, ಹಲವು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.

ಈ ಕುರಿತಂತೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಾಹಿತಿ ನೀಡಿದ್ದು. ಪ್ರಧಾನಮಂತ್ರಿ ಮತ್ತು ಗೃಹ ಸಚಿವರಿಗೆ ರಾಜ್ಯದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವಿವರಿಸಲಾಗಿದೆ. ಅನೇಕ ಸ್ಥಳಗಳಲ್ಲಿ ಮನೆಗಳು, ಸೇತುವೆಗಳು ಇತ್ಯಾದಿಗಳು ಹಾನಿಗೊಳಗಾಗಿವೆ. ರಕ್ಷಣಾ ಕಾರ್ಯಾಚರಣೆಗೆ ಮೂರು ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗುವುದಾಗಿ ಎಂದಿದ್ದಾರೆ.

ಇದನ್ನೂ ಓದಿ: Kerala Rain Alert : ದೇವರ ನಾಡಲ್ಲಿ ಮತ್ತೆ ವರುಣನ ಆರ್ಭಟ : ನಾಳೆಯಿಂದ ಕೇರಳದ 11 ಜಿಲ್ಲೆಗಳಲ್ಲಿ ಭಾರಿ ಮಳೆ

ರಕ್ಷಣಾ ಮತ್ತು ಪರಿಹಾರ ಕಾರ್ಯದಲ್ಲಿ ರಾಜ್ಯ ಸಂಸ್ಥೆ ಸಹಾಯ ಮಾಡುತ್ತಿದ್ದಾರೆ.” ಮುಕ್ತೇಶ್ವರದಲ್ಲಿ ಕಾಲೇಜಿನ ಗೋಡೆಯೊಂದು ಗುಡಿಸಲಿನ ಮೇಲೆ ಕುಸಿದು ಬಿದ್ದ ನಂತರ ಐದು ಜನರು ಮೃತಪಟ್ಟರೆ, ಒಬ್ಬನನ್ನು ರಕ್ಷಿಸಲಾಗಿದೆ ಹಾಗೂ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಯಿತು. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಿಂದ ಒಟ್ಟು 17 ಜನರು ಈ ಪ್ರವಾಹದಿಂದಾಗಿ ಸಾವನ್ನಪ್ಪಿದ್ದಾರೆ ಮತ್ತು 915 ಜನರನ್ನು ರಕ್ಷಿಸಲಾಗಿದೆ.

ಅಲ್ಲಿನ ಸುಮಾರು ರೆಸ್ಟೋರೆಂಟ್​ಗಳು ಕೂಡ ಜಲಾವೃತವಾಗಿದ್ದು ಸಾಕಷ್ಟು ಹಾನಿಯಾಗಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಶೀಘ್ರದಲ್ಲೇ ಭಾರತೀಯ ಸೇನೆಯ ಮೂರು ಹೆಲಿಕಾಪ್ಟರ್‌ಗಳು ಬರಲಿವೆ ಎಂದು ಮುಖ್ಯಮಂತ್ರಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.

ಈ ಮಳೆಯಿಂದಾಗಿ ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ಪಟ್ಟಣದ ಬಳಿಯ ಗೋಲಾ ನದಿಯ ಮೇಲಿನ ಸೇತುವೆ ಮಂಗಳವಾರ ಬೆಳಿಗ್ಗೆ ಕೊಚ್ಚಿಹೋಗಿದೆ. ಹಲ್ದ್ವಾನಿ-ಸಿತಾರ್ ಗಂಜ್ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಕಥ್ಗೊಡಮ್-ಹೋಗುವ ರೈಲುಗಳನ್ನು ಸಹ ರದ್ದುಗೊಳಿಸಲಾಗಿದೆ. ದುರಸ್ತಿ ಕಾರ್ಯಗಳ ನಂತರ ರೈಲ್ವೆ ಸಂಚಾರ ಪುನರಾರಂಭವಾಗಲಿದೆ” ಎಂದು ನಿಲ್ದಾಣದ ಅಧೀಕ್ಷಕ ಛಾಯಾನ್ ರಾಯ್ ಹೇಳಿದರು.

ಇದನ್ನೂ ಓದಿ: Kerala : ಕೇರಳದಲ್ಲಿ ವರುಣನ ಆರ್ಭಟಕ್ಕೆ ಕೊಚ್ಚಿ ಹೋದ ಮನೆ : ಸಾವಿನ ಸಂಖ್ಯೆ 26 ಏರಿಕೆ

ನೈನಿತಾಲ್ ಸರೋವರದ ನೀರು ಮಾಲ್ ರಸ್ತೆಗೆ ಉಕ್ಕಿ ಬಂದು ನೈನಾ ದೇವಿ ದೇವಾಲಯದ ಆವರಣವನ್ನು ಕೂಡ ಪ್ರವೇಶಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಮಿ ಅವರೊಂದಿಗೆ ರಾಜ್ಯದ ಪರಿಸ್ಥಿತಿಯ ಬಗ್ಗೆ ಮಾಹಿತಿ ತೆಗೆದುಕೊಂಡು ಕೇಂದ್ರದಿಂದ ಸಾಧ್ಯವಿರುವ ಎಲ್ಲ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದ್ದಾರೆ.

(17 died, several missing in Uttarakhand sudden cloudburst)

RELATED ARTICLES

Most Popular