ದೆಹಲಿ : ಯುವಕರನ್ನು ಉಗ್ರ ಸಂಘಟನೆಗೆ ಸೇರುವಂತೆ ಪ್ರಚೋದನೆ ನೀಡುತ್ತಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ದಂತ ವೈದ್ಯನಾಗಿದ್ದ ಮೊಹಮ್ಮದ್ ತಾಕೀರ್ ಎಂಬಾತನನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರಿನ ಶಿವಾಜಿನಗರದಲ್ಲಿ ವಾಸವಾಗಿದ್ದ ಮೊಹಮ್ಮದ್ ತಾಕೀರ್ ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದ. 2020 ರಲ್ಲಿ ನೇತ್ರ ವೈದ್ಯ ಅಬ್ದುಲ್ ರೆಹಮಾನನ್ನು ಬೆಂಗಳೂರಿನ ಬಸವನಗುಡಿಯ ಅಪಾರ್ಟ್ ಮೆಂಟ್ ಪ್ಲಾಟ್ ನಲ್ಲಿ ಎನ್ ಐಎ ಬಂಧಿಸಿತ್ತು.
ಇದನ್ನೂ ಓದಿ: Amith Sha : ಜಮ್ಮು -ಕಾಶ್ಮಿರದಲ್ಲಿ ಬುಲೆಟ್ ಫ್ರೂಪ್ ಜಾಕೆಟ್ ತೆಗೆದು ಭಾಷಣ ಮಾಡಿದ ಅಮಿತ್ ಶಾ
ಅಬ್ದುರ್ ರೆಹೆಮಾನ್ ಜೊತೆಗೆ ಮೊಹಮ್ಮದ್ ತಾಕೀರ್ ಲಿಂಕ್ ಇರುವ ಮಾಹಿತಿ ಪಡೆದ ಎನ್‌ಐಎ ಗೆ ದೊರಕಿತು. ಈ ಅಲ್ಲದೇ ಮೊಹಮ್ಮದ್ ತಾಕೀರ್ ಹಾಗೂ ಅಬ್ದುರ್ ರೆಹೆಮಾನ್ ಸೇರಿಕೊಂಡು ಐವರನ್ನು ಸಿರಿಯಾಗೆ ಕಳಿಸಿದ್ದರು. ವಿದ್ಯಾವಂತರನ್ನೇ ಟಾರ್ಗೇಟ್ ಮಾಡಿ ಅವರನ್ನು ಐಸಿಸ್ ಗೆ ಸೇರಿಸುತ್ತಿದ್ದರು ಅನ್ನೋದು ತನಿಖೆಯಿಂದ ದೃಢಪಟ್ಟಿದೆ.
ವಿಡೀಯೋವನ್ನು ತೋರಿಸಿ ಯುವಕರ ಬ್ರೇನ್ ವಾಶ್ ಮಾಡುತ್ತಿದ್ದು, ನಂತರ ಐಸಿಸ್ ಗೆ ಟೆಕ್ನಿಕಲ್ ಟೀಮ್ ಆಗಿ ಐಸಿಸ್ ಗೆ ನೆರವಾಗಲು ಮೊಹಮ್ಮದ್ ತಾಕೀರ್ ಈ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅಲ್ಲದೇ ಉಗ್ರ ಮೊಹಮ್ಮದ್ ತಾಕೀರ್ ತನ್ನದೇ ಸ್ವಂತ ಟೆಕ್ನಿಕಲ್ ಟೀಮ್ ಕಟ್ಟಲು ಪ್ಲಾನ್ ಮಾಡುತ್ತಿದ್ದ ಎನ್ನಲಾಗಿದೆ.
ಮೊಹಮ್ಮದ್ ತಾಕೀರ್ ಅಮೇರಿಕದಲ್ಲಿ ಮತ್ತು ಸಿರಿಯಾದಲ್ಲಿ ನಡೆಯುತ್ತಿದ್ದ ವಾರ್ ನ ವಿಡಿಯೋ ವನ್ನು ತೋರಿಸಿ ಯುವಕರನ್ನು ಪ್ರಚೋದಿಸುತ್ತಿದ್ದ. ಅಲ್ಲದೇ ದೇಶದಾದ್ಯಂತ ತನ್ನ ನೆಟ್ವರ್ಕ್ ಬಿಲ್ಡ್ ಮಾಡುವ ಯೋಜನೆಯನ್ನು ಮೊಹಮ್ಮದ್ ತಾಕೀರ್ ಹಾಕಿದ್ದ ಎನ್ನಲಾಗಿದೆ. ಸದ್ಯ ಮೊಹಮ್ಮದ್ ತಾಕೀರ್ ಅರೆಸ್ಟ್ ಆಗಿದ್ದು, ನಾಪತ್ತೆಯಾಗಿರುವ ಜುಬೈದ್ ಹಮೀದ್ ಎಂಬಾತನಿಗಾಗಿ ಶೋಧಕಾರ್ಯ ನಡೆಯುತ್ತಿದೆ.
(Bengaluru-based militant Mohammad Takir Arrested)