ಭಾನುವಾರ, ಏಪ್ರಿಲ್ 27, 2025
HomeNationalBhawanipur Election Result : ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಭರ್ಜರಿ ಗೆಲುವು

Bhawanipur Election Result : ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಭರ್ಜರಿ ಗೆಲುವು

- Advertisement -

ಕೊಲ್ಕತ್ತಾ : ಪಶ್ವಿಮ ಬಂಗಾಲದ ಭವಾನಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭರ್ಜರಿ ಗೆಲುವು ದಾಖಲಿಸಿದ್ದಾರೆ. ಭವಾನಿಪುರ ವಿಧಾನಸಭಾ ಉಪಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಬಿಜೆಪಿ ಪ್ರತಿಸ್ಪರ್ಧಿ ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು 58,000 ಮತಗಳಿಂದ ಸೋಲಿಸಿದ್ದಾರೆ.

ಭವಾನಿಪುರ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ 84,709 ಮತಗಳನ್ನು ಪಡೆದರೆ, ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ 26,320 ಮತಗಳನ್ನು ಪಡೆದಿದ್ದಾರೆ. ಸಿಎಂಪಿ ಅಭ್ಯರ್ಥಿ ಶ್ರೀಜಿಬ್ ಬಿಸ್ವಾಸ್ 4,201 ಮತಗಳನ್ನು ಗಳಿಸಿದ್ದಾರೆ.

ಕಳೆದ ಮೇನಲ್ಲಿ ನಡೆದಿದ್ದ ಬಂಗಾಳ ಸಾರ್ವತ್ರಿಕ ಚುನಾವಣೆಯಲ್ಲಿ ಸಿಎಂ ಆಗಿದ್ದ ಮಮತಾ ಬ್ಯಾನರ್ಜಿ ಸೋಲನ್ನು ಅನುಭವಿಸಿದ್ದರು. ಹೀಗಾಗಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ರಾಜ್ಯ ಸಚಿವ ಶೋಭಂದೇಬ್ ಚಟ್ಟೋಪಾಧ್ಯಾಯ ಅವರು ಮಮತಾ ಬ್ಯಾನರ್ಜಿಗೆ ಅವರು ಶಾಸಕರಾಗುವ ಸಲುವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು.

ಇದನ್ನೂ ಓದಿ : ಮಮತಾ ಬ್ಯಾನರ್ಜಿ ಎಡವಟ್ಟು : ಗಾಯಗೊಂಡ ಕಾಲನ್ನು ಅಲುಗಾಡಿಸಿದ ವೀಡಿಯೋ ವೈರಲ್..!!!

ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದಮಮತಾ ಬ್ಯಾನರ್ಜಿ ಸೋತಿದ್ದರು. ಸಿಎಂ ಕುರ್ಚಿ ಉಳಿಸಿಕೊಳ್ಳಲು ವಿಧಾನಸಭೆಗೆ ಚುನಾಯಿತರಾಗಲು ಮಮತಾ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿತ್ತು. ಇದೇ ಕಾರಣಕ್ಕೆ ನಡೆದ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ಮಮತಾ ಬ್ಯಾನರ್ಜಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

ಇದನ್ನೂ ಓದಿ : ಅಧಿಕಾರಿಗಳು ಮಾಧ್ಯಮಗಳ ಮುಂದೆ ಬಾಯ್ಬಿಡುವಂತಿಲ್ಲ : ಸಚಿವ ಆರ್. ಅಶೋಕ್ ತಾಕೀತು

( Bhawanipur Election Result : Big Win for Mamata Banerjee Beats BJP Priyanka By more than 58000 votes )

Arun Gundmi | ಅರುಣ್ ಗುಂಡ್ಮಿ
Arun Gundmi Editor In Chief News Next Kannada. Working in more than 20 Years in Kannada Media (Print, Digital and News Channels. Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular