ದೆಹಲಿ : ದೇಶದಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ. ಬಾರಾಬಂಕಿಯ ಕಿಸಾನ್ ಪಥದ ಹೊರ ರಿಂಗ್ ರೋಡ್ ನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಬಸ್ ಹಾಗೂ ಟ್ರಕ್ ನಡುವೆ ಅಪಘಾತದಲ್ಲಿ12 ಮಂದಿ ಸಾವನ್ನಪ್ಪಿದ್ದು, 32 ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸ್ ದೆಹಲಿಯಿಂದ ಬಹ್ರೈಚ್ ಗೆ ತೆರಳುತ್ತಿತ್ತು. ಸುಮಾರು 60 ರಿಂದ 70 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು. ಈ ವೇಳೆಯಲ್ಲ ಬಸ್ ನಗರ ಕೊತ್ವಾಲಿಯ ಮಿಟ್ಟಿ ಪೊಲೀಸ್ ಪೋಸ್ಟ್ ನ ಬಬುರಿ ಗ್ರಾಮದ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.
ಹಸುವನ್ನು ಉಳಿಸಲು ಹೋದ ಬಸ್ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ನಡೆದಿದೆ. ಪೊಲೀಸರು ಸ್ಥಳೀಯರ ಸಹಕಾರೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಪಘಾತದಲ್ಲಿ 12 ಮಂದಿ ಸಾವನ್ನಪ್ಪಿದ್ದು, 32 ಮಂದಿ ಗಾಯಗೊಂಡಿರುವುದು ದೃಢಪಟ್ಟಿದೆ.
ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದಲ್ಲಿ ಬಸ್ಸಿ ಸಂಪೂರ್ಣ ನುಜ್ಜುಗುಜ್ಜಾಗಿದೆ. ಪೊಲೀಸ್ ಅಧಿಕಾರಿ ಯಮುನಾ ಪ್ರಸಾದ್ ಜಿಲ್ಲಾ ಆಸ್ಪತ್ರೆಗೆ ತಲುಪಿ ಸ್ಥಳಕ್ಕೆ ಆಗಮಿಸಿದ್ದಾರೆ.
ಇದನ್ನೂ ಓದಿ: Rahul Gandhi : ಉತ್ತರ ಪ್ರದೇಶ ಭೇಟಿಗೆ ರಾಹುಲ್ ಗಾಂಧಿಗೆ ಅವಕಾಶ ನೀಡಿದ ಉತ್ತರ ಪ್ರದೇಶ ಸರಕಾರ
ರಾಜ್ಯ ಸರಕಾರ ಮೃತರ ಕುಟುಂಬಕ್ಕೆ ಎರಡು ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50 ಸಾವಿರ ರೂಪಾಯಿ ಒದಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಆದರ್ಶ ಸಿಂಗ್ ತಿಳಿಸಿದ್ದಾರೆ.
(Bus-truck crash: 12 killed, 32 injured)