ಮಂಗಳವಾರ, ಏಪ್ರಿಲ್ 29, 2025
HomeNationalಗರ್ಲ್ ಫ್ರೆಂಡ್ ಗೆ ಖರ್ಚು ಮಾಡೋಕೆ ಸಾಲುತ್ತಿಲ್ಲ ಸಂಬಳ: ಸರ ಕಳ್ಳತನಕ್ಕೆ ಇಳಿದ ಸಿವಿಲ್ ಇಂಜಿನಿಯರ್

ಗರ್ಲ್ ಫ್ರೆಂಡ್ ಗೆ ಖರ್ಚು ಮಾಡೋಕೆ ಸಾಲುತ್ತಿಲ್ಲ ಸಂಬಳ: ಸರ ಕಳ್ಳತನಕ್ಕೆ ಇಳಿದ ಸಿವಿಲ್ ಇಂಜಿನಿಯರ್

- Advertisement -

ನಾಗ್ಪುರ : ಚಿಕ್ಕ ಪುಟ್ಟ ಕೆಲಸ ಮಾಡಿ ಕಡಿಮೆ ಸಂಬಳದಲ್ಲಿ ಇಡೀ ಸಂಸಾರವನ್ನು ನೋಡಿ‌ ಕೊಳ್ಳುವವರ  ಮುಂದೆ ಇಲ್ಲೊಬ್ಬ ಭೂಪ ತನ್ನ ಗರ್ಲ್ ಫ್ರೆಂಡ್ ಗೆ ಸುತ್ತಾಡಲು ಸಂಬಳ ಸಾಲುವುದಿಲ್ಲವೆಂದು ಸಿವಿಲ್‌ ಇಂಜಿನಿಯರಿಂಗ್‌ ಕೆಲಸ ಬಿಟ್ಟು ಸರ ಕಳ್ಳತನದ ದಂದೆಗೆ ಇಳಿದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

2015 ರಲ್ಲಿಯೇ ಸಿವಿಲ್‌ ಇಂಜಿನಿಯರಿಂಗ್‌ ಪದವಿ ಪಡೆದ ಉಮೇಶ್‌ ಪಾಟೀಲ್‌ (27 ವರ್ಷ) ನಂತರ ಕಾಂಟ್ರಾಕ್ಟರ್‌ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಕಾಂಟ್ರಾಕ್ಟರ್‌ ಕೆಲಸದಲ್ಲಿ ಬರುವ ಸಂಬಳದಲ್ಲಿ ತನ್ನ ಖರ್ಚು ಹಾಗೂ ತನ್ನ ಗೆಳತಿಯ ಖರ್ಚನ್ನು ನಿಭಾಯಿಸಲು ಆಗುತ್ತಿರಲಿಲ್ಲಾ. ಬೇರೆ ಕೆಲಸ ಮಾಡುವಂತ ಶ್ರಮಜೀವಿಯೂ ಇತನಲ್ಲ. ಈ ಕಾರಣದಿಂದ ಸುಲಭ ವಿಧಾನದಲ್ಲಿ ಆದಾಯ ಗಳಿಸಬೇಕೆಂಬುದು ಉಮೇಶ್‌ ಪಾಟೀಲ್‌ ಲೆಕ್ಕಾಚಾರ.

ಇದನ್ನೂ ಓದಿ: Intercast marriage : ದಲಿತನ ಹುಡುಗನನ್ನು ಮದ್ವೆಯಾಗಿದ್ದಕ್ಕೆ ಮಗಳನ್ನೇ ಅರೆ ನಗ್ನ ಗೊಳಿಸಿದ ತಂದೆ !

ಉಮೇಶ್‌ ಪಾಟೀಲ್‌, ತುಷಾರ್‌ ದಿಲ್ಕೆ ಎನ್ನುವ ವ್ಯಕ್ತಿಯ ಜೊತೆ ಸೇರಿಕೊಂಡು 20ಕ್ಕೂ ಹೆಚ್ಚು ಚಿನ್ನದ ಸರ ಎಳೆದು ಕಳ್ಳತನ ಮಾಡಿ ಹಣ ಸಂಪಾದನೆ ಮಾಡಿದ್ದಾರೆ. ಆದರೆ ಹಣವನ್ನು ಹಂಚಿಕೊಳ್ಳುವ ವಿಚಾರದಲ್ಲಿ ತುಷಾರ್‌ ಮತ್ತು ಉಮೇಶ್‌ ನಡುವೆ ಬಿರುಕು ಮೂಡಿದೆ. ಈ ಕಾರಣದಿಂದ ಉಮೇಶ್‌ ಒಬ್ಬನೇ ಕಳ್ಳತನ ಮಾಡಲು ಮುಂದಾಗಿದಾನೆ.

2020 ರಲ್ಲಿ ತುಷಾರ್‌ ಅನು ಬಿಟ್ಟು ಉಮೇಶ್‌ ಒಬ್ಬನೆ ಸರ ಕಳ್ಳತನವನ್ನು ಆರಂಭಿಸಿದ್ದಾನೆ. ಇದಾದ ಬಳಿಕ ಉಮೇಶ್‌ ಒಬ್ಬನೇ 36 ಸರಗಳನ್ನು ಕಳ್ಳತನ ಮಾಡಿ ಸುಲಭವಾಗಿ ಹಣ ಸಂಪಾದಿಸುತ್ತಿದ್ದ. ಇದರಿಂದ ಲಕ್ಷ ಲಕ್ಷ ಆದಾಯ ಪಡೆದ ಉಮೇಶ್‌ ಪಾಟೀಲ್‌ ನಾಮಕಾವಸ್ತೆಗೆ ಮಾತ್ರ ಸಿವಿಲ್‌ ಇಂಜಿನಿಯರಿಂಗ್‌ ಕಾಂಟ್ರಾಕ್ಟರ್‌ ಕೆಲಸವೊಂದನ್ನು ಮಾಡುತ್ತಿದ್ದ.

ಅಕ್ಟೋಬರ್‌ ತಿಂಗಳಿನಲ್ಲಿ ಎಂದಿನಂತೆ ಉಮೇಶ್‌ ಸರಕಳ್ಳತನದ ಕೆಲಸದಲ್ಲಿ ತೊಡಗಿದ್ದ ಈ ಸಂದರ್ಭದಲ್ಲಿ ಪೋಲಿಸರ ಅತಿಥಿಯಾಗಿದ್ದಾನೆ. ಸರ ಕಳ್ಳತನ ಮಾಡುತ್ತಿರುವಾಗಲೇ ಉಮೇಶ್‌ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ನಂತರ ಪೋಲಿಸರು ಉಮೇಶ್‌ ಪಾಟೀಲ್‌ ಮನೆಗೆ ತೆರಳಿ ಶೋಧರ್ಯ ನಡೆಸಿದ್ದಾರೆ. ಪೋಲಿಸರಿಗೆ ಉಮೇಶ್‌ ಮನೆಯಲ್ಲಿ 2.5 ಲಕ್ಷ ನಗದು, 27 ಚಿನ್ನದ ಸರ ಪತ್ತೆಯಾಗಿದೆ.

ಇದನ್ನೂ ಓದಿ: Viral News : ಹೆಣ್ಣು ಮಕ್ಕಳ ಎದೆ ಮುಟ್ಟಿ ಮಾಯವಾಗ್ತಾನೆ ವಿಕೃತ ಕಾಮಿ : ಬೆಚ್ಚಿ ಬೀಳಿಸಿದೆ ವೈದ್ಯಕೀಯ ವಿದ್ಯಾರ್ಥಿಯ ಪೋಸ್ಟ್‌

ಇಷ್ಟೇ ಅಲ್ಲದೇ ಉಮೇಶ್‌ ಪಾಟೀಲ್‌ ಸರಕಳ್ಳತನ ಮಾಡಿದ 45 ಲಕ್ಷ ಹಣದಿಂದ ಫ್ಲಾಟ್‌ ಖರೀದಿಸಿದ್ದಾನೆ. ಅಲ್ಲದೇ ಉಮೇಶ್‌ ಪಾಟೀಲ್‌ ಬ್ಯಾಂಕ್‌ ಅಕೌಂಟ್‌ ನಲ್ಲಿ 20 ಲಕ್ಷ ರೂಪಾಯಿ ಬ್ಯಾಲೆನ್ಸ್‌ ಕೂಡ ಪತ್ತೆಯಾಗಿದೆ. ಗೆಳತಿ ಜೊತೆ ಸುತ್ತಾಡಲು ಹಾಗೂ ಐಷಾರಾಮಿ ಜೀವನ ನಡೆಸಲು ತನ್ನ ವೇತನ ಸಾಲುತ್ತಿರಲಿಲ್ಲಾ ಹೀಗಾಗಿ ಸರಕಳ್ಳತನಕ್ಕೆ ಇಳಿದಿರುವುದಾಗಿ ಪೋಲಿಸರ ಮುಂದೆ ಉಮೇಶ್‌ ಪಾಟೀಲ್‌ ಬಾಯಿ ಬಿಟ್ಟಿದ್ದಾನೆ.

(Civil Engineer Who Stole A Chain For Girlfriend)

RELATED ARTICLES

Most Popular