ಭಾನುವಾರ, ಏಪ್ರಿಲ್ 27, 2025
HomeNationalChennai Rain Live : ಚೆನ್ನೈಯಲ್ಲಿ ಮಹಾಮಳೆ : ಎರಡು ದಿನ ಶಾಲೆಗಳಿಗೆ ರಜೆ, ನಗರಗಳೇ...

Chennai Rain Live : ಚೆನ್ನೈಯಲ್ಲಿ ಮಹಾಮಳೆ : ಎರಡು ದಿನ ಶಾಲೆಗಳಿಗೆ ರಜೆ, ನಗರಗಳೇ ಜಲಾವೃತ

- Advertisement -

ಚೆನ್ನೈ: ಮಹಾಮಳೆಗೆ ತಮಿಳುನಾಡು ತತ್ತರಿಸಿ ಹೋಗಿದೆ. ರಾತ್ರಿ ಇಡೀ ಸುರಿದ ಭಾರೀ ಮಳೆಗೆ ಚೆನ್ನೈ ಸೇರಿದಂತೆ ಹಲವು ನಗರಗಳು ಜಲಾವೃತವಾಗಿದೆ. ತಮಿಳುನಾಡಿನ ರಾಜಧಾನಿಯಾದ ಚೆನ್ನೈನಲ್ಲಿ 2015 ರ ನಂತರ ಇದೇ ಮೊದಲ ಭಾರಿಗೆ ಅತೀ ಹೆಚ್ಚು ಮಳೆಯಾಗಿದೆ. ಅಲ್ಲದೇ ಶಾಲಾ, ಕಾಲೇಜುಗಳಿಗೆ ಎರಡು ದಿನಗಳ ಕಾಲ ರಜೆ ಘೋಷಿಸಲಾಗಿದೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಪರಿಸ್ಥಿತಿಯನ್ನು ವಿಚಾರಿಸಿ ಪರಿಹಾರ ಕಾರ್ಯಗಳಿಗೆ ಸಹಾಯ ಮಾಡುವಂತೆ ತಮ್ಮ ಸಂಸದರು ಮತ್ತು ಶಾಸಕರಿಗೆ ಸೂಚಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಟಾಲಿನ್, “ನಾನು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಆಯಾ ಪ್ರದೇಶಗಳಿಗೆ ಕಳುಹಿಸಲಾಗಿದೆ.

ಇದನ್ನೂ ಓದಿ : ಚಿನ್ನ ಕಳ್ಳ ಸಾಗಾಣಿಕೆ ಆರೋಪಿ ಸ್ವಪ್ನಾ ಸುರೇಶ್‌ ಬಿಡುಗಡೆ : ಕೇರಳ ಸಿಎಂಗೆ ಉರುಳಾಗುತ್ತಾ ಪ್ರಕರಣ ?

ಪುನರ್ವಸತಿ ಕಾರ್ಯದಲ್ಲಿ ಭಾಗಿಯಾಗುವಂತೆ ಎಲ್ಲ ಶಾಸಕರು, ಸಂಸದರಿಗೆ ಸೂಚನೆ ನೀಡಲಾಗಿದೆ. “ಚೆನ್ನೈ ಮತ್ತು 11 ಜಿಲ್ಲೆಗಳು 20 ಸೆಂ.ಮೀ ಮತ್ತು ಅದಕ್ಕಿಂತ ಹೆಚ್ಚಿನ ಮಳೆಯಾಗಿದೆ. ಸಿರುಕಲತ್ತೂರು, ಕಾವನೂರು, ಕುಂದ್ರಾತೂರ್, ತಿರುವ್ಮುಡಿವಕ್ಕಂ, ವಜುತಿಗಿಮೈಡು, ತಿರುನೀರ್ಮಲೈ, ಅಡ್ಯಾರ್ ಮತ್ತು ಅಂಬತ್ತೂರು, ಅಶೋಕ್ ಪಿಲ್ಲರ್ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ.

ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್ ಡಿಆರ್ ಎಫ್) ತಂಡಗಳನ್ನು ಪ್ರವಾಹ ಪ್ರದೇಶಗಳಿಗಾಗಿ ಮೀಸಲು ಇಡಲಾಗಿದೆ ಮತ್ತು ರಾಜ್ಯ ಕಂದಾಯ ಇಲಾಖೆ ನೀರಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಚಂಡಮಾರುತದ ಪರಿಚಲನೆಯಿಂದಾಗಿ ಚೆನ್ನೈ ನಗರದಲ್ಲಿ ಇಂದು ಭಾರಿ ಮಳೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆಯ (ಐಎಂಡಿ) ಆರ್ ಕೆ ಜೆನಮಣಿ ದೃಢಪಡಿಸಿದ್ದಾರೆ.

ಇದನ್ನೂ ಓದಿ: Civil hospital Fire : ಕೋವಿಡ್‌ ಆಸ್ಪತ್ರೆಯಲ್ಲಿ ಅಗ್ನಿದುರಂತ : 10 ಮಂದಿ ಸಾವು

(Heavy rains in Chennai: Two days off schools, cities waterlogged)

RELATED ARTICLES

Most Popular