ಸೋಮವಾರ, ಏಪ್ರಿಲ್ 28, 2025
HomeNationalಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ : ಯಾವಾಗಿಂದ ಜಾರಿಯಾಗುತ್ತೆ ಗೊತ್ತಾ ಹೊಸ ನಿಯಮ

ಚಿಕ್ಕ ಮಕ್ಕಳಿಗೂ ಹೆಲ್ಮೆಟ್ ಕಡ್ಡಾಯ : ಯಾವಾಗಿಂದ ಜಾರಿಯಾಗುತ್ತೆ ಗೊತ್ತಾ ಹೊಸ ನಿಯಮ

- Advertisement -

ನವದೆಹಲಿ : ದ್ವಿಚಕ್ರ ವಾಹನದಲ್ಲಿ ಚಿಕ್ಕ ಚಿಕ್ಕ ಮಕ್ಕಳನ್ನು ಇನ್ಮುಂದೆ ಸುಖಾ ಸುಮ್ಮನೆ ಕೂರಿಸಿಕೊಂಡು ಹೋಗುವಂತಿಲ್ಲ. ಅದ್ರಲ್ಲೂ ನಾಲ್ಕು ವರ್ಷದೊಳಗಿನ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕೂರಿಸಿಕೊಂಡು ಹೋಗುವ ವೇಳೆಯಲ್ಲಿ ಹಲವು ನಿಯಮಗಳನ್ನು ಪಾಲನೆ ಮಾಡಬೇಕು. ಅಪಘಾತದಿಂದ ಮಕ್ಕಳ ಸಾವಿನ ಪ್ರಕರಣ ಹೆಚ್ಚುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ಚಿಕ್ಕ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ ಅನ್ನೋ ರೂಲ್ಸ್‌ ಜಾರಿಗೆ ತಂದಿದೆ.

ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ  9 ತಿಂಗಳಿನಿಂದ  4 ವರ್ಷ ವಯಸ್ಸಿನ ಒಳಗಿನ ಮಕ್ಕಳು ದ್ವಿಚಕ್ರ ವಾಹನದ ಹಿಂದಿನ ಸವಾರರಾಗಿದ್ದಲ್ಲಿ ಕ್ರಾಶ್ ಹೆಲ್ಮೆಟ್ ಧರಿಸುವ ಬಗ್ಗೆ ರಸ್ತೆ ಸಾರಿಗೆ ಸಚಿವಾಲಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಮೋಟಾರು ಕಾಯ್ದೆಯಡಿಯಲ್ಲಿ ತಿದ್ದುಪಡಿಯನ್ನು ತರಲು ಸಚಿವಾಲಯವು ಕರಡು ಅಧಿಸೂಚನೆಯನ್ನು  ಹೊರಡಿಸಿದೆ.

ಇದನ್ನೂ ಓದಿ : Air India -Tata :18,000 ಕೋಟಿಗೆ ಏರ್ ಇಂಡಿಯಾ ಮಾರಾಟ : ಟಾಟಾ ಸನ್ಸ್‌ ಜೊತೆ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ ಕೇಂದ್ರ

ಕರಡು ಅಧಿಸೂಚನೆಯ ಪ್ರಕಾರ 4 ವರ್ಷ ದೊಳಗಿನ ಹಿಂದಿನ ದ್ವಿಚಕ್ರವಾಹನ ಸವಾರ ಇರುವ ಚಾಲಕ  ಮಗುವನ್ನು ಸುರಕ್ಷಾ  ಸರಂಜಾಮುಗಳನ್ನು ಬಳಸಿ ಜೋಡಿಸಿಕೊಳ್ಳಬೇಕು. ಸುರಕ್ಷಾ ಸರಂಜಾಮು ಎಂದರೆ ಮಗು ಧರಿಸ ಬೇಕಾದ ಹೊಂದಾಣಿಕೆಯ ಉಡುಗೆ. ಜೊತೆಗೆ ಒಂದು ಜೋಡಿ ಪಟ್ಟಿಯನ್ನು ಆ ಉಡುಪಿನ ಮಧ್ಯೆ ಜೋಡಿಸಲಾಗಿದೆ ಹಾಗೂ ಡ್ರೈವರ್ ಧರಿಸಲು ಭುಜದ ಕಾಣಿಕೆಗಳನ್ನು ರಚಿಸಲಾಗಿದೆ.

ಈ ನಿಯಮವನ್ನು ಜಾರಿಗೆ ತರಲು 1 ವರ್ಷ ಹಿಡಿಯುತ್ತದೆ ಎಂದು ಸಚಿವಾಲಯ ಇಳಿಸಿದೆ. ಕೆಲ ಪೋಷಕರು ಮಕ್ಕಳನ್ನು ರಸ್ತೆಯಲ್ಲಿ ಅಸುರಕ್ಷಿತವಾಗಿ ಸಾಗಿಸುವುದನ್ನು ತಡೆಗಟ್ಟಲು  ಈ ನಿಯಮವನ್ನು ಸರ್ಕಾರ  ಜಾರಿಗೆ ತಂದಿದೆ. ಅಲ್ಲದೇ  ಈ ನಿರ್ಧಾರ ಮಕ್ಕಳ ರಕ್ಷಣೆಯ ದೃಷ್ಟಿಯಿಂದ ಎಂದು ಸಚಿವಾಯ ತಿಳಿಸಿದೆ.

ಇದನ್ನೂ ಓದಿ : ಸಬ್‌ ಮರೀನ್‌ ಡೇಟಾ ಲೀಕ್‌ : ಕಮಾಂಡರ್‌ ಸೇರಿ 5 ಮಂದಿಯ ಬಂಧನ

(Helmet mandatory for young children: Do you know when it will be implemented?)

RELATED ARTICLES

Most Popular