ಕಾಶ್ಮೀರ : ಭಯೋತ್ಪಾದನೆ ಎಂಬ ಭೂತ ಇಡಿ ಪ್ರಪಂಚವನ್ನೇ ಕಿತ್ತುತಿನ್ನುತ್ತಿದೆ. ಉಗ್ರಗಾಮಿಗಳ ಕಾಟ ಹೆಚ್ಚುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಪಾಕಿಸ್ತಾನ ನುಸುಳುಕೋರರ ಪೈಕಿ ಓರ್ವನನ್ನು ಹತ್ಯೆ ಮಾಡಿರುವ ಭಾರತೀಯ ಸೇನೆ ಮೂವರನ್ನು ಸೆರೆ ಹಿಡಿದಿದೆ. ಉರಿಯಲ್ಲಿ ಪಾಕಿಸ್ತಾನದ ಭಯೋತ್ಪಾದಕನನ್ನು ಸೆರೆಹಿಡಿಯಲಾಗಿದೆ ಎಂದು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಸೆರೆಹಿಡಿಯಲ್ಪಟ್ಟಿರುವ ಪಾಕಿಸ್ತಾನಿ ಭಯೋತ್ಪಾದಕ ಸೆಪ್ಟೆಂಬರ್ 18-19 ರಿಂದ ನಡೆಯುತ್ತಿರುವ ಇತ್ತೀಚಿನ ಒಳನುಸುಳುವಿಕೆ ಪ್ರಯತ್ನದ ಭಾಗವಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಗಡಿ ನಿಯಂತ್ರಣ ರೇಖೆಯ (LoC) ಉರಿ ಸೆಕ್ಟರ್ ನಲ್ಲಿ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಸೈನಿಕರಿಗೆ ಗುಂಡು ತಗುಲಿ ಗಾಯಗಳಾಗಿವೆ.
ಕಳೆದ ಎರಡು ದಿನಗಳಲ್ಲಿ ಮೂರು ವಿಭಿನ್ನ ಸ್ಥಳಗಳಲ್ಲಿ ನುಸುಳುಕೋರರ ಜೊತೆಗೆ ಸಂಪರ್ಕ ಸ್ಥಾಪಿಸಲು ಸೇನೆಗೆ ಸಾಧ್ಯವಾಯಿತು ಎಂದು ಮೂಲಗಳು ತಿಳಿಸಿವೆ. ಸೇನೆ ಶೋಧಕಾರ್ಯ ನಡೆಸುತ್ತಿರುವಾಗ ಪಾಕಿಸ್ತಾನದ ನುಸುಳುಕೋರರೊಬ್ಬ ನನ್ನಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ಪಂಜಾಬ್ ನಲ್ಲಿ ಮೂವರು ಶಂಕಿತ ಉಗ್ರರು ಅರೆಸ್ಟ್ : ಸ್ಪೋಟಕ, ಶಸ್ತ್ರಾಸ್ತ್ರ ವಶಕ್ಕೆ
(Indian Army captures Pakistani infiltrators)