ಲಕ್ನೋ : ಅರೇಬಿಯಾದಿಂದ ಚಿನ್ನ ಸಾಗಣಿ ಮಾಡುತ್ತಿದ್ದವರನ್ನು ಅಧಿಕಾರಿಗಳು ಸೆರೆ ಹಿಡಿದ್ದಾರೆ. ಈ ವೇಳೆಯಲ್ಲಿ ಅಂಡರ್‌ವೇರ್ ಜೇಬಿನಲ್ಲಿ ಬರೋಬ್ಬರಿ 9 ಕೆಜಿ ತೂಕದ, ಲಕ್ಷಾಂತರ ಮೌಲ್ಯದ ಚಿನ್ನ ಪತ್ತೆಯಾಗಿದ್ದು, ಡಿಆರ್‌ಡಿಐ ಅಧಿಕಾರಿಗಳೇ ಶಾಕ್ ಆಗಿದ್ದಾರೆ.
ಸೌದಿ ಅರೇಬಿಯಾದಿಂದ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೌದಿಯ ರಿಯಾದ್‌ನ ಇಬ್ಬರು ಪ್ರಯಾಣಿಕರು ಚಿನ್ನ ಸಾಗಾಣಿಕೆ ಮಾಡುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಡಿಆರ್‌ಡಿಐ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ತಪಾಸಣೆ ಮಾಡಿದ್ದರು. ಆದರೆ ಕಳ್ಳಸಾಗಾಣಿಕೆದಾರರು ವಿಮಾನದಿಂದ ಇಳಿದು ಕಾರಿನ ಮೂಲಕ ಮುಜಾಫರ್ ನಗರಕ್ಕೆ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ : ಶರ್ಟ್ ಬಟನ್ ಹಾಕಲು ಮರೆತ್ರಾ ಮೌನಿ ರಾಯ್?: ನಾಗಿನ್ ನಟಿಯ ಬೋಲ್ಡ್ ಅವತಾರ ವೈರಲ್
ಮಾಹಿತಿ ತಿಳಿಯುತ್ತಲೇ ಅಲರ್ಟ್ ಆದ ಅಧಿಕಾರಿಗಳು ಆಗ್ರಾ – ಲಕ್ನೋ ಎಕ್ಸ್‌ಪ್ರೆಸ್ ವೇನಲ್ಲಿ ಕಾರನ್ನು ಅಡ್ಡಗಟ್ಟಿದ ಅಧಿಕಾರಿಗಳು ಕಳ್ಳಸಾಗಾಣಿಕೆದಾರರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಕಳ್ಳಸಾಗಾಣಿಕೆದಾರರ ಅಂಡರ್‌ವೇರ್ ಜೇಬಿನಲ್ಲಿ ಸುಮಾರು 77 ಚಿನ್ನದ ಬಿಸ್ಕತ್‌ಗಳನ್ನುಅಡಗಿಸಿಟ್ಟಿದ್ದು, ಅಧಿಕಾರಿಗಳು ಒಳ ಉಡುಪಿನಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ : ಮಹಿಳೆಯರ ಮೇಲಿನ ದೌರ್ಜನ್ಯ ,ಅಪರಾಧಗಳ ಸಂಖ್ಯೆ ಶೇ.46ರಷ್ಟು ಹೆಚ್ಚಳ : ಮಹಿಳಾ ಆಯೋಗ
ಇದನ್ನೂ ಓದಿ : ದಿ.ಹಾಸ್ಯನಟ ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದೌರ್ಜನ್ಯ
( Lucknow : Underwear pocket was 9kg gold Cops captured two Saudi returned Passengers )