ಮಧ್ಯಪ್ರದೇಶ : ಮಳೆಗಾಗಿ ದೇವರ ಮೊರೆ ಹೋಗುವುದು ಮಾಮೂಲು. ಆದ್ರೆ ಇಲ್ಲಿನ ಗ್ರಾಮಸ್ಥರು ಮಳೆ ಸುರಿಸುವಂತೆ ದೇವರನ್ನು ಮೆಚ್ಚಿಸಲು ಅನಿಷ್ಟ ಪದ್ದತಿಯ ಮೊರೆ ಹೋಗಿದ್ದಾರೆ. ಅಪ್ತಾಪ್ತ ಬಾಲಕಿಯರ ಬೆತ್ತಲೆ ಮೆರವಣಿಗೆ ನಡೆಸಿದ್ದಾರೆನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ( NCPCR) ಜಿಲ್ಲಾಡಳಿತದಿಂದ ವರದಿ ಕೇಳಿದೆ.
ಈ ಘಟನೆ ನಡೆದಿರೋದು ಮಧ್ಯಪ್ರದೇಶದ ದಮೂಹ್ ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿಮೀ ದೂರದಲ್ಲಿರುವ ಜಬೇರಾ ಪೊಲೀಸ್ ಠಾಣೆ ವ್ಯಾಪ್ತಿಯ ಬನಿಯಾ ಗ್ರಾಮದಲ್ಲಿ. ಇಲ್ಲಿನ ಗ್ರಾಮಸ್ಥರು ದೇವರನ್ನು ಮೆಚ್ಚಿಸುವ ಸಲುವಾಗಿ ಆರು ಅಪ್ರಾಪ್ತ ಬಾಲಕಿಯರನ್ನು ಬೆತ್ತಲೆಯಾಗಿ ಮೆರವಣಿಗೆ ನಡೆದಿದೆ. ಬರಗಾಲದ ಸಂದರ್ಭದಲ್ಲಿ ಇಂತಹ ಅನಿಷ್ಠ ಆಚರಣೆಯನ್ನು ಗ್ರಾಮಸ್ಥರು ಹಲವು ವರ್ಷಗಳಿಂದಲೂ ಆಚರಿಸಿಕೊಂಡು ಬಂದಿದ್ದಾರೆ ಎನ್ನಲಾಗುತ್ತಿದೆ.
ಗ್ರಾಮಸ್ಥರು ಸಣ್ಣ ಪ್ರಾಯದ ಹುಡುಗಿಯರನ್ನು ನಗ್ನವಾಗಿಸಿ, ನಂತರ ಅವರ ಭುಜದ ಮೇಲೆ ಮರದ ಕಂಬವನ್ನು ಇಟ್ಟು, ಅದಕ್ಕೆ ಕಪ್ಪೆಯನ್ನು ಕಟ್ಟಿ ಮೆರವಣಿಗೆಯನ್ನು ನಡೆಸಲಾಗುತ್ತದೆ. ಹುಡುಗಿಯರ ಜೊತೆಯಲ್ಲಿ ಮಕ್ಕಳ ತಾಯಿ, ಮಹಿಳೆಯರು ಭಜನೆಯನ್ನು ಮಾಡುತ್ತಾ ಮೆರವಣಿಗೆ ನಡೆಸುತ್ತಾರೆ.
ಗ್ರಾಮಸ್ಥರ ಅನಿಷ್ಠ ಪದ್ದತಿಯ ಕುರಿತು ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ವಿಡಿಯೋದಲ್ಲಿ ಹುಡುಗಿಯರು (ಸುಮಾರು 5 ವರ್ಷ ವಯಸ್ಸಿನವರಂತೆ ಕಾಣುತ್ತಾರೆ) ಬಟ್ಟೆಯಿಲ್ಲದೆ ಪಕ್ಕದಲ್ಲಿ ನಡೆಯುತ್ತಿರುವಂತೆ ಮರದ ದಂಡವು ಭುಜದ ಮೇಲೆ ಕಪ್ಪೆ ಕಟ್ಟಿಕೊಂಡು ನಿಂತಿದೆ. ಭಜನೆ ಹಾಡುವ ಮಹಿಳೆಯರ ಗುಂಪು ಮೆರವಣಿಗೆಯನ್ನು ಅನುಸರಿಸುತ್ತದೆ.
ಅಲ್ಲದೇ ಇನ್ನೊಂದು ವಿಡಿಯೋದಲ್ಲಿ ಮಳೆಯ ಕೊರತೆಯಿಂದ ಭತ್ತದ ಬೆಳೆ ಒಣಗುತ್ತಿರುವುದರಿಂದ ಈ ಆಚರಣೆಯನ್ನು ಮಾಡಲಾಗುತ್ತಿದೆ ಎಂದು ಕೆಲವು ಮಹಿಳೆಯರು ಹೇಳಿದ್ದಾರೆ. ಅಲ್ಲದೇ ಮೆರವಣಿಗೆಯ ನಂತರದಲ್ಲಿ ಗ್ರಾಮಸ್ಥರಿಂದ ಹಸಿ ಆಹಾರ ಧಾನ್ಯವನ್ನು ಸಂಗ್ರಹಿಸಿ ನಂತರ ಸ್ಥಳೀಯ ದೇವಸ್ಥಾನದಲ್ಲಿ ಭಂಡಾರ (ಗುಂಪು ಹಬ್ಬ) ಕ್ಕೆ ಅಡುಗೆ ಮಾಡುವುದಾಗಿ ಈ ಮಹಿಳೆಯರು ಹೇಳಿದ್ದಾರೆ ಎಂದು ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈಗಾಗಲೇ ವರದಿಯನ್ನು ಕೇಳಿದೆ. ಈ ಹಿನ್ನೆಲೆಯಲ್ಲಿ ವರದಿಯನ್ನು ಸಲ್ಲಿಸಲಾಗುವುದು ಎಂದು ದಾಮೋಹ್ ಪೊಲೀಸ್ ವರಿಷ್ಠಾಧಿಕಾರಿ ಡಿಆರ್ ಟೆನಿವಾರ್ ತಿಳಿಸಿದ್ದಾರೆ. ಅಲ್ಲದೇ ಗ್ರಾಮದಲ್ಲಿ ಈ ಅನಿಷ್ಠ ಪದ್ದತಿ ಜಾರಿಯಲ್ಲಿದೆ. ಮಳೆಗಾಗಿ ದೇವರನ್ನು ಮೆಚ್ಚಿಸಲು ಕೆಲವು ಯುವತಿಯರನ್ನು ಬೆತ್ತಲೆ ಮೆರವಣಿಗೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಪೊಲೀಸ್ ಇಲಾಖೆ ಈ ಕುರಿತು ತನಿಖನೆಯನ್ನು ನಡೆಸುತ್ತಿದೆ. ಆದರೆ ಈ ಕುರಿತು ಗ್ರಾಮಸ್ಥರಿಂದ ಯಾವುದೇ ದೂರುಗಳು ಬಂದಿಲ್ಲ ಎಂದಿದ್ದಾರೆ.
ದಾಮೋಹ್ ಕಲೆಕ್ಟರ್ ಎಸ್ ಕೃಷ್ಣ ಚೈತನ್ಯ ಅವರು ಸ್ಥಳೀಯ ಆಡಳಿತವು ಎನ್‌ಸಿಪಿಸಿಆರ್‌ಗೆ ವರದಿಯನ್ನು ಸಲ್ಲಿಸಲಿದೆ ಎಂದಿದ್ದಾರೆ. ಈ ಘಟನೆಯಲ್ಲಿ ಈ ಹುಡುಗಿಯರ ಪೋಷಕರು ಸಹ ಭಾಗಿಯಾಗಿದ್ದಾರೆ. ಅಂತಹ ಅನಿಷ್ಠ ನಂಬಿಕೆಗಳ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಲಾಗುವುದು ಎಂದಿದ್ದಾರೆ.
ಇದನ್ನೂ ಓದಿ : ಕೊರೊನಾ ಹಿನ್ನೆಲೆ ವಿಮಾನ ರದ್ದು : ಪ್ರಯಾಣಿಕರಿಗೆ ಏರ್ ಇಂಡಿಯಾ ಪಾವತಿಸಲು ಬಾಕಿ ಇದೆ 250 ಕೋಟಿ !
ಇದನ್ನೂ ಓದಿ : ಕೇರಳದಲ್ಲಿ ನಿಫಾ ವೈರಸ್ ಆರ್ಭಟ : ದ.ಕ ಜಿಲ್ಲೆ ಗಡಿ ಭಾಗದಲ್ಲಿ ಕಟ್ಟೆಚ್ಚರ
(Girls Paraded Naked During Ritual For Rain In Drought Hit Madhya Pradesh Village)