ಬುಧವಾರ, ಏಪ್ರಿಲ್ 30, 2025
HomeNationalಶ್ರೀ ಕೃಷ್ಣನ ಜನ್ಮಸ್ಥಳದ 10 ಕಿ.ಮೀ ಪ್ರದೇಶ ʼತೀರ್ಥಕ್ಷೇತ್ರʼವೆಂದು ಘೋಷಣೆ: ಯೋಗಿ ಮಹತ್ವದ ನಿರ್ಧಾರ

ಶ್ರೀ ಕೃಷ್ಣನ ಜನ್ಮಸ್ಥಳದ 10 ಕಿ.ಮೀ ಪ್ರದೇಶ ʼತೀರ್ಥಕ್ಷೇತ್ರʼವೆಂದು ಘೋಷಣೆ: ಯೋಗಿ ಮಹತ್ವದ ನಿರ್ಧಾರ

- Advertisement -

ಲಕ್ನೋ : ಮಥುರಾ ವೃಂದಾವನದಲ್ಲಿ ಕೃಷ್ಣನ ಜನ್ಮಸ್ಥಳಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಯೋಗಿ ಸರ್ಕಾರ, ಶುಕ್ರವಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಜನ್ಮಸ್ಥಳದ 10 ಕಿಲೋಮೀಟರ್ ಪ್ರದೇಶವನ್ನ ತೀರ್ಥಕ್ಷೇತ್ರವೆಂದು ಘೋಷಿಸಿದೆ. ಕಳೆದ ತಿಂಗಳು, ಸಿಎಂ ಯೋಗಿ ಆದಿತ್ಯನಾಥ್ ಅವ್ರು ಮಥುರಾದಲ್ಲಿ ಜನ್ಮಾಷ್ಟಮಿಯನ್ನ ಆಚರಿಸಿದ್ದರು.

ಜನ್ಮಾಷ್ಟಮಿಯ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯೋಗಿ ಆದಿತ್ಯನಾಥರು ಕೃಷ್ಣನ ಜನ್ಮಸ್ಥಳವನ್ನ ತಲುಪಿ ಶ್ರೀಕೃಷ್ಣನ ದರ್ಶನ ಪಡೆದಿದ್ದರು. ನಂತ್ರ ಮಾತನಾಡಿದ ಅವ್ರು, ‘ಮಥುರಾದಲ್ಲಿ ಮುಖ್ಯಮಂತ್ರಿಗಳು ಹಿಂದಿನ ಶಾಸಕರು, ಮುಖ್ಯಮಂತ್ರಿಗಳು ಹಬ್ಬವನ್ನ ಸ್ವಾಗತಿಸಲು ಇಲ್ಲಿಗೆ ಬಂದಿರಲಿಲ್ಲ ಮತ್ತು ಹಿಂದೆ ದೇವಸ್ಥಾನಗಳಿಗೆ ಹೋಗಲು ಹೆದರುತ್ತಿದ್ದವರು ಈಗ ರಾಮ ನನ್ನವರು, ಕೃಷ್ಣ ಕೂಡ ನನ್ನವರು ಎಂದು ಹೇಳುತ್ತಿದ್ದಾರೆ’ ಎಂದರು.

ಇದನ್ನೂ ಓದಿ: ಅಯ್ಯಪ್ಪನ ಭಕ್ತರು ಶಬರಿಮಲೆ ದರ್ಶನಕ್ಕೆ ತಯಾರಾಗಿ ! ʼಆನ್​ಲೈನ್​ʼ ಬುಕ್ಕಿಂಗ್​ ಆರಂಭ !

ಯುಪಿಯಲ್ಲಿ ತೀರ್ಥಕ್ಷೇತ್ರಗಳ ಅಭಿವೃದ್ಧಿಯ ಕೆಲಸ ನಡೆಯುತ್ತಿದೆ. ಅಯೋಧ್ಯೆ, ವಾರಣಾಸಿ, ಮಥುರಾ ಇತ್ಯಾದಿಗಳಲ್ಲಿ ಸೌಲಭ್ಯಗಳು ಮೊದಲಿಗಿಂತ ಉತ್ತಮವಾಗುತ್ತಿವೆ. ಒಂದೂವರೆ ವರ್ಷದ ಹಿಂದೆ ಅಯೋಧ್ಯೆಯಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ, ರಾಮಮಂದಿರ ನಿರ್ಮಾಣ ಕಾರ್ಯವು ವೇಗವಾಗಿ ನಡೆಯುತ್ತಿದೆ.

ಇದನ್ನೂ ಓದಿ: ತಿರುಪತಿ ಭಕ್ತರಿಗೆ ಗುಡ್‌ ನ್ಯೂಸ್‌ : ಇಂದಿನಿಂದ ಉಚಿತ ಸರ್ವ ದರ್ಶನ ಟೋಕನ್‌ ವಿತರಣೆ

(10 km from the birthplace of Sri Krishna Declaration as ʼ Pilgrimage Field ')

RELATED ARTICLES

Most Popular