ದೆಹಲಿ : ಭಾರತ ಸರ್ವ ಧರ್ಮಗಳ ನಾಡು, ಭಾವೈಕ್ಯತೆಯ ದೇಶ. ಆದರೂ ಹಿಂದೂ – ಮುಸ್ಲೀಮರ ನಡುವೆ ಒಂದಿಲ್ಲೊಂದು ವಿವಾದ ನಡೆಯುತ್ತಲೇ ಇದೆ. ಆದ್ರೆ ಸಮುದಾಯದ ನಡುವೆ ದ್ವೇಷ ವಿಷ ಬೀಜ ಬಿತ್ತುವವರ ನಡುವಲ್ಲೇ ದೆಹಲಿಯಲ್ಲಿ ನಡೆದಿರುವ ಈ ಘಟನೆ ಎರಡೂ ಧರ್ಮಗಳ ನಡುವಿನ ಬಾಂಧವ್ಯಕ್ಕೆ ಉತ್ತಮ ನಿದರ್ಶನವಾಗಿದೆ.
ದೆಹಲಿಯ ಜಾಮಿಯಾ ನಗರದಲ್ಲಿರುವ ಜಾಗವೊಂದರಲ್ಲಿ ಬಿಲ್ಡರ್ ಓರ್ವರು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದರು. ಧರ್ಮಶಾಲಾದ ಒಂದು ಭಾಗವನ್ನು ನೆಲಸಮಗೊಳಿಸಲಾಗಿದೆ. ಆದ್ರೆ ಆ ಜಾಗದಲ್ಲೊಂದು ಹಿಂದೂ ದೇವಾಲಯವಿದೆ. ಆದ್ರೀಗ ಹಿಂದೂ ದೇವಾಲಯವನ್ನು ಉಳಿಸಲು ಮುಸ್ಲೀಂ ಕುಟುಂಬಗಳು ಮುಂದಾಗಿವೆ.
ದೆಹಲಿಯ ಜಾಮಿಯಾ ನಗರ ವಾರ್ಡ್ ಸಂಖ್ಯೆ 206 ಸಮಿತಿಯ ಅಧ್ಯಕ್ಷ ಸೈಯದ್ ಫೌಜುಲ್ ಅಜೀಂ (ಆರ್ಶಿ) ಅವರು ನೆಲಸಮ ಗೊಳಿಸುವ ಪ್ರದೇಶದಲ್ಲಿರುವ ದೇವಾಲಯದ ಅತಿಕ್ರಮಣ ಹಾಗೂ ಧ್ವಂಸ ಮಾಡಿರುವ ಕುರಿತು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಕಳೆದ ವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ:Datta Peeta Contravercy : ದತ್ತಪೀಠ ಪೂಜೆಗೆ ಮೌಲ್ವಿ ನೇಮಕ ರದ್ದು : ಹೈಕೋರ್ಟ್ ಮಹತ್ವದ ಆದೇಶ
ನಗರಾಭಿವೃದ್ಧಿ ಇಲಾಖೆಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವಿನ್ಯಾಸ ಯೋಜನೆ ದೇವಾಲಯದ ಆವರಣವನ್ನು ಸ್ಪಷ್ಟವಾಗಿ ಗುರುತಿಸಿದೆ. ಧರ್ಮಶಾಲಾ ಭೂಮಿ 1970 ರಲ್ಲಿ ದೇವಸ್ಥಾನವನ್ನು ನಿರ್ಮಿಸಿದ ಮಖನ್ ಲಾಲ್ ಅವರ ಮಗ ಜೋಹ್ರಿ ಲಾಲ್ ಗೆ ಸೇರಿದ್ದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದೀಗ ತಕರಾರು ಅರ್ಜಿಯನ್ನು ವಿಚಾರಣೆ ಮಾಡಿರುವ ನ್ಯಾಯಾಲಯ ಮಧ್ಯಪ್ರವೇಶ ಮಾಡಿದೆ. ಅಲ್ಲದೇ ದೇವಾಲಯ ಧ್ವಂಸಕ್ಕೆ ತಡೆ ನೀಡಿದೆ. ಈ ಮೂಲಕ ಹಿಂದೂ ದೇವಾಲಯದ ಉಳಿವಿಗೆ ಮುಸ್ಲೀಂ ಶ್ರಮಿಸುತ್ತಿರುವ ಮುಸ್ಲೀಂ ಕುಟುಂಬಗಳ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
(Muslim families stand guarding Hindu temple: Hindu, Muslim harmony)