ಸೋಮವಾರ, ಏಪ್ರಿಲ್ 28, 2025
HomeNationalNorovirus : ಕೇರಳದ ವಯನಾಡಿನಲ್ಲಿ ನೊರೊವೈರಸ್ ಪತ್ತೆ

Norovirus : ಕೇರಳದ ವಯನಾಡಿನಲ್ಲಿ ನೊರೊವೈರಸ್ ಪತ್ತೆ

- Advertisement -

ವಯನಾಡು : ಕೊರೊನಾ ವೈರಸ್‌ ಸೋಂಕಿನ ಆರ್ಭಟದ ನಡುವಲ್ಲೇ ಕೇರಳದಲ್ಲಿ ನೊರೊ ವೈರಸ್‌ (Norovirus) ಪ್ರಕರಣದ ದೃಢಪಟ್ಟಿದೆ. ವಯನಾಡಿನ ವೈತಿರಿ ಜಿಲ್ಲೆಯ ಪೊಕೋಡ್‌ನಲ್ಲಿರುವ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ಮಾರಣಾಂತಿಕ ವೈರಸ್‌ ಸೋಂಕು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರ ಪ್ರತ್ಯೇಕ ಮಾರ್ಗಸೂಚಿಯನ್ನು ಹೊರಡಿಸಿದೆ.

ನೊರೊವೈರಸ್, ಕಲುಷಿತ ನೀರು ಮತ್ತು ಆಹಾರದಿಂದ ಹರಡುವ ಪ್ರಾಣಿಗಳಿಂದ ಹರಡುವ ರೋಗ, ಎರಡು ವಾರಗಳ ಹಿಂದೆ ವಯನಾಡ್ ಜಿಲ್ಲೆಯ ವೈತಿರಿ ಬಳಿಯ ಪೂಕೋಡ್‌ ನಲ್ಲಿರುವ ಪಶುವೈದ್ಯಕೀಯ ಕಾಲೇಜಿನ 13 ವಿದ್ಯಾರ್ಥಿಗಳಲ್ಲಿ ದೃಢಪಟ್ಟಿದೆ. ಈ ಕುರಿತು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ ದೃಢಪಡಿಸಿದ್ದಾರೆ. ಅಪರೂಪದ ವೈರಸ್‌ ಪತ್ತೆಯಾಗುತ್ತಿದ್ದಂತೆಯೇ ಅಧಿಕಾರಿಗಳ ಜೊತೆಗೆ ಸಭೆಯನ್ನು ನಡೆಸಿದ್ದಾರೆ. ನೊರೊವೈರಸ್ ಸೋಂಕು ಪತ್ತೆಯಾದ್ರೆ ವ್ಯಕ್ತಿಯ ಜಠರ, ಕರುಳಿನ ಕಾಯಿಲೆಯನ್ನು ಉಂಟುಮಾಡುತ್ತದೆ, ಇದರಲ್ಲಿ ಹೊಟ್ಟೆ ಮತ್ತು ಕರುಳಿನ ಒಳಪದರದ ಉರಿಯೂತ, ತೀವ್ರ ವಾಂತಿ, ಅತಿಸಾರವನ್ನು ಉಂಟು ಮಾಡುತ್ತದೆ, ಕುಡಿಯುವ ನೀರಿನ ಮೂಲಕವೇ ಈ ವೈರಸ್‌ ಸೋಂಕು ಅತಿಯಾಗಿ ಹರಡುತ್ತದೆ ಎಂದು ಸಚಿವೆ ವೀಣಾ ಜಾರ್ಜ್‌ ತಿಳಿಸಿದ್ದಾರೆ.

ನೊರೊ ವೈರಸ್‌ ಸೋಂಕು ದೃಢಪಟ್ಟರೆ ವ್ಯಕ್ತಿಯನ್ನು ಶೀಘ್ರದಲ್ಲಿಯೇ ಗುಣಪಡಿಸಬಹುದಾಗಿದೆ. ಹೀಗಾಗಿ ಯಾರೂ ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಜನರು ನೊರೊ ವೈರಸ್‌ ಸೋಂಕಿನ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕಾಗಿದೆ. ಕೇರಳದ ಆರೋಗ್ಯ ಸಚಿವಾಲಯ ನೊರೊ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನು ಹೊರಡಿಸಿದೆ. ಸೋಂಕಿಗೆ ಒಳಗಾದವರು ಮನೆಯಲ್ಲಿಯೇ ಚಿಕಿತ್ಸೆಯನ್ನು ಪಡೆಯಬೇಕಾಗಿದೆ. ಹೆಚ್ಚು ವಿಶ್ರಾಂತಿ ಪಡೆಯಬೇಕು, ಮೌಖಿಕ ಪುನರ್ಜಲೀಕರಣ ದ್ರಾವಣಗಳು (ORS) ಮತ್ತು ಬೇಯಿಸಿದ ನೀರನ್ನು ಕುಡಿಯಬೇಕು ಎಂದು ಹೇಳಿದೆ.

ಜನರು ಆಹಾರ ಸೇವನೆಯ ಮೊದಲು ಕೈಗಳನ್ನು ಶುಚಿಯಾಗಿ ತೊಳೆಯಬೇಕು. ಅಲ್ಲದೇ ಶೌಚಾಲಯಕ್ಕೆ ತೆರಳಿದ ವೇಳೆಯಲ್ಲಿ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು. ಪ್ರಾಣಿಗಳು ಸಂಪರ್ಕಕ್ಕೆ ಬಂದ ಸಂದರ್ಭದಲ್ಲಿ ವಿಶೇಷ ಕಾಳಜಿಯನ್ನು ವಹಿಸಬೇಕಾಗಿದೆ. ಕುಡಿಯುವ ನೀರಿನ ಮೂಲಗಳು, ಬಾವಿಗಳು ಮತ್ತು ಶೇಖರಣಾ ಟ್ಯಾಂಕ್‌ಗಳನ್ನು ಬ್ಲೀಚಿಂಗ್ ಪೌಡರ್‌ನೊಂದಿಗೆ ಕ್ಲೋರಿನೇಷನ್ ಮಾಡಬೇಕು ಎಂದು ಮಾರ್ಗಸೂಚಿಗಳಲ್ಲಿ ತಿಳಿಸಲಾಗಿದೆ. ಜನರು ಗೃಹ ಬಳಕೆಗಾಗಿ ಕ್ಲೋರಿನೇಟೆಡ್ ನೀರನ್ನು ಬಳಸಬೇಕು ಮತ್ತು ಬೇಯಿಸಿದ ನೀರನ್ನು ಮಾತ್ರ ಕುಡಿಯಬೇಕು ಎಂದು ಹೇಳಿದೆ.

ಇದನ್ನೂ ಓದಿ : Delta Plus AY.4.2 : 2 ಡೋಸ್ ಲಸಿಕೆ ಪಡೆದ 6 ಜನರಲ್ಲಿ ಡೆಲ್ಟಾ ಪ್ಲಸ್‌ AY.4.2 ರೂಪಾಂತರಿ ಪತ್ತೆ

ಇದನ್ನೂ ಓದಿ : No vaccine No Treatment : ವಾಕ್ಸಿನ್ ಗುರಿ ತಲುಪಲು ಸರ್ಕಾರದ ಹೊಸ ಅಸ್ತ್ರ: ನೋವಾಕ್ಸಿನ್ ನೋ ಟ್ರೀಟ್ಮೆಂಟ್

(Norovirus Confirmed in Kerala’s Wayanad)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular