ಸೋಮವಾರ, ಏಪ್ರಿಲ್ 28, 2025
HomeNationalPetrol-Diesel:ವಾಹನ ಸವಾರರಿಗೆ ಸಿಹಿಸುದ್ದಿ: ದೇಶದಾದ್ಯಂತ ಇಳಿಕೆಯಾಯ್ತು ಇಂಧನ ದರ

Petrol-Diesel:ವಾಹನ ಸವಾರರಿಗೆ ಸಿಹಿಸುದ್ದಿ: ದೇಶದಾದ್ಯಂತ ಇಳಿಕೆಯಾಯ್ತು ಇಂಧನ ದರ

- Advertisement -

ಸದಾ ಏರುಮುಖದಲ್ಲಿದ್ದ ಇಂಧನ ದರ ದೇಶದಾದ್ಯಂತ ಕೊಂಚ ಇಳಿಮುಖವಾಗಿದ್ದು, ಲೀಟರ್ ಮೇಲೆ 19 ಪೈಸೆಯಷ್ಟು ದರ ಇಳಿಕೆ ಕಂಡಿದೆ. ಕಳೆದ ಬುಧವಾರ ದಂದು 15 ಪೈಸೆಯಷ್ಟು ಇಳಿಕ ಕಂಡಿದ್ದ ದರ ಇಂದು ಮತ್ತೆ ಕೊಂಚ ಇಳಿಕೆಯಾಗಿದೆ.  

ಸೆ.5 ರಂದು ಪೆಟ್ರೋಲ್, ಡಿಸೇಲ್ ದರ ಪರಿಷ್ಕರಿಸಲಾಗಿದೆ ಎಂದು ಭಾರತದ ಮೂರು ಪ್ರಮುಖ ತೈಲ ಕಂಪನಿಗಳು ಹೇಳಿವೆ. ತಮಿಳುನಾಡಿನಲ್ಲಿ ಪೆಟ್ರೋಲ್ ದರ 3 ರೂಪಾಯಿಗಳಷ್ಟು ಇಳಿಕೆಯಾಗಿದ್ದನ್ನು ಬಿಟ್ಟರೇ ಉಳಿದ ರಾಜ್ಯಗಳಲ್ಲಿ ಈಗಲೂ ಪೆಟ್ರೋಲ್  ದರ ಶತಕದ ಗಡಿ ದಾಟಿದೆ.

ಮೇ 4 ರಿಂದ ಇಲ್ಲಿಯ ತನಕ ಪೆಟ್ರೋಲ್ ದರ ಒಟ್ಟು 40 ಬಾರಿ ಏರಿಕೆಯಾಗಿದ್ದರೇ, ಡಿಸೇಲ್ ದರ ಒಟ್ಟು 37 ಬಾರಿ ಏರಿಕೆಯಾಗಿದೆ. ಮಹಾರಾಷ್ಟ್ರ, ದೆಹಲಿ,ಪಶ್ಚಿಮಬಂಗಾಳ,ತಮಿಳುನಾಡು,ಆಂಧ್ರಪ್ರದೇಶ,ತೆಲಂಗಾಣ,ರಾಜಸ್ಥಾನ,ಮಧ್ಯಪ್ರದೇಶ,ಉತ್ತರ ಪ್ರದೇಶ,ಹರಿಯಾಣಾ,ಜಮ್ಮುಕಾಶ್ಮಿಕ,ಒರಿಸ್ಸಾ,ಲಡಾಕ್,ಕೇರಳ,ಪಂಜಾಬ್,ಸಿಕ್ಕಿಂ ರಾಜ್ಯಗಳಲ್ಲಿ ಪೆಟ್ರೋಲ್ ದರ ಈಗಾಗಲೇ 100 ರ ಗಟಿ ದಾಟಿ ಸಾಗಿದೆ.

ದೆಹಲಿಯಲ್ಲಿ ರವಿವಾರ ಪೆಟ್ರೋಲ್ ದರ 101.19 ರೂಪಾಯಗಳಷ್ಟಿದ್ದರೇ, ಡಿಸೇಲ್ ದರ 88.62 ರಷ್ಟಿದೆ.

ನವದೆಹಲಿ: ಪೆಟ್ರೋಲ್ 101.19ರೂ- ಡೀಸೆಲ್ 88.62ರೂ

ಕೋಲ್ಕತಾ: ಪೆಟ್ರೋಲ್ 101.62ರೂ- ಡೀಸೆಲ್ 91.71 ರೂ

ಮುಂಬೈ: ಪೆಟ್ರೋಲ್ 107.26ರೂ- ಡೀಸೆಲ್ 96.19ರೂ

ಚೆನ್ನೈ: ಪೆಟ್ರೋಲ್ 99.12ರೂ- ಡೀಸೆಲ್ 93.40ರೂ

ಬೆಂಗಳೂರು: ಪೆಟ್ರೋಲ್ 104.70 ರೂ- ಡೀಸೆಲ್ 94.04ರೂ

 ತಿರುವನಂತಪುರಂ: ಪೆಟ್ರೋಲ್ 103.42ರೂ- ಡೀಸೆಲ್ 95.38ರೂ

 ಪಾಟ್ನಾ: ಪೆಟ್ರೋಲ್ 104.12ರೂ- ಡೀಸೆಲ್ 94.86ರ ರೂ

ಹೈದರಾಬಾದ್: ಪೆಟ್ರೋಲ್ 105.26 ರೂ- ಡೀಸೆಲ್ 96.69ರೂ

ನೋಯ್ಡಾ: ಪೆಟ್ರೋಲ್ 98.49ರೂ- ಡೀಸೆಲ್ 89.18ರೂ

ಜೈಪುರ: ಪೆಟ್ರೋಲ್ 108.08 ರೂ- ಡೀಸೆಲ್ 97.72ರೂ


Petrol and diesel rate changed in india

RELATED ARTICLES

Most Popular