ಗುರುವಾರ, ಮೇ 1, 2025
HomeNationalಆಹಾರ ಪ್ಯಾಕೆಟ್ʼ ಮೇಲೆ ʼಸುರಕ್ಷತಾ ಲೇಬಲ್ʼ ಕಡ್ಡಾಯ : FSSAI ನಿಂದ ಮಹತ್ವದ ನಿರ್ಧಾರ

ಆಹಾರ ಪ್ಯಾಕೆಟ್ʼ ಮೇಲೆ ʼಸುರಕ್ಷತಾ ಲೇಬಲ್ʼ ಕಡ್ಡಾಯ : FSSAI ನಿಂದ ಮಹತ್ವದ ನಿರ್ಧಾರ

- Advertisement -

ನವದೆಹಲಿ : ಭಾರತದ ಆಹಾರ ಸುರಕ್ಷತಾ ಪ್ರಾಧಿಕಾರವು ಮಾನವನ ಆರೋಗ್ಯಕ್ಕೆ ಹಾನಿಯಾದ ಕೊಬ್ಬು, ಸಕ್ಕರೆ ಮತ್ತು ಉಪ್ಪಿನ ಕಾರಣವನ್ನ ಅವಲಂಬಿಸಿ ಪ್ಯಾಕೇಜ್ ಮಾಡಿದ ಆಹಾರದ ಮುಂಭಾಗದಲ್ಲಿ ಆಹಾರ ಸುರಕ್ಷತಾ ಲೇಬಲ್ʼಗಳನ್ನು ಹಾಕಬೇಕೆಂದು ಆದೇಶಿಸಿದೆ.

ಆಹಾರ ಉದ್ಯಮವು ಆಹಾರ ಪ್ಯಾಕೆಟ್ʼನಲ್ಲಿರುವ ಉಪ್ಪು, ಸಕ್ಕರೆ, ಸೋಡಿಯಂ ಮತ್ತು ಕೊಬ್ಬುಗಳ ಪ್ರಮಾಣವನ್ನು ಗ್ರಾಹಕರಿಗೆ ತಿಳಿಸುವ ಮಾರ್ಗಸೂಚಿಯಾಗಿರಬೇಕು ಎಂದು ಸೂಚಿನೆಯನ್ನು ನೀಡಿದೆ.

ಇದನ್ನೂ ಓದಿ: GOOD NEWS : ಗೃಹಿಣಿಯರಿಗೆ ಗುಡ್‌ನ್ಯೂಸ್‌ : ಶೀಘ್ರವೇ ಇಳಿಕೆಯಾಗಲಿದೆ ಅಡುಗೆ ಎಣ್ಣೆಯ ದರ !

ಆರೋಗ್ಯ ಎಚ್ಚರಿಕೆಯನ್ನು ನೀಡದೇ, ಗ್ರಾಹಕರುರಿಗೆ ಸರಿಯಾದ ಮಾಹಿತಿಯನ್ನು ನೀಡುವುದು ಹಾಗೂ ಪ್ಯಾಕೇಟ್ ಮಾಡಿದ ಆಹಾರವನ್ನ ಧೈರ್ಯದಿಂದ ಸೇವಿಸಲು ಅನುಕೂಲ ಮಾಡಿಕೊಡುವುದು ಇದರ ಉದ್ದೇಶವಾಗಿದೆ. ಆಹಾರವು ಮಾನವ ಬಳಕೆಗೆ ಆರೋಗ್ಯಕರವಾಗಿದೆಯೇ ಅಥವಾ ಇಲ್ಲವೇ ಎನ್ನುವುದನ್ನ ಲೇಬಲ್ಗಳು ಸ್ಪಷ್ಟವಾಗಿ ತಿಳಿಸಬೇಕೆಂದು ತಿಳಿಸಲಾಗಿದೆ.

ಹೆಚ್ಚಿನ ಗ್ರಾಹಕರಿಗೆ ಸಕ್ಕರೆ, ಉಪ್ಪು ಅಥವಾ ಕೊಬ್ಬು ತಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಥವಾ ಕೆಟ್ಟದು ಎಂದು ತಿಳಿದಿರುವುದಿಲ್ಲ. ಅಹ್ಮದಾಬಾದ್ʼನ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ʼನಿಂದ ಜನರು ಯಾವ ರೀತಿಯ ಲೇಬಲ್‌ ಬಯಸುತ್ತಾರೆ ಅನ್ನೋ ಬಗ್ಗೆ ಅಧ್ಯಯನ ನಡೆಯುತ್ತಿದೆ.

ಇದನ್ನೂ ಓದಿ: Good News : ಬಿಪಿ, ಶುಗರ್, ಕ್ಯಾನ್ಸರ್ ಸೇರಿ 39 ಔಷಧಿಗಳ ಬೆಲೆ ಕಡಿತಗೊಳಿಸಿದ ಕೇಂದ್ರ ಸರ್ಕಾರ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್ ಎಸ್ ಎಸ್ ಎಐ) ಮುಖ್ಯ ಕಾರ್ಯನಿರ್ವಾಹಕ ಅರುಣ್ ಸಿಂಘಾಲ್ ಹೇಳಿದ್ದಾರೆ. ಆ ಅಧ್ಯಯನ ಬಂದ ನಂತರ, ಪ್ಯಾಕೇಜ್ ಲೇಬಲ್ (ಎಫ್ ಒಪಿಎಲ್) ಮುಂದೆ ಕರಡು ಮತ್ತು ಅಂತಿಮ ಮಾರ್ಗಸೂಚಿಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.

 (Safety Label ʼ Mandatory on Food Packetʼ: Significant Decision by FSSAI)
RELATED ARTICLES

Most Popular