ಸೋಮವಾರ, ಏಪ್ರಿಲ್ 28, 2025
HomeNationalಮದುವೆಯಾದ್ರೂ ಪ್ರಿಯಕರನ ನೆನಪಲ್ಲೇ ಇದ್ದ ಪತ್ನಿ : ಪ್ರಿಯಕರನ ಜೊತೆ ಪತ್ನಿಯ ಮದುವೆ ಮಾಡಿದ ಪತಿ...

ಮದುವೆಯಾದ್ರೂ ಪ್ರಿಯಕರನ ನೆನಪಲ್ಲೇ ಇದ್ದ ಪತ್ನಿ : ಪ್ರಿಯಕರನ ಜೊತೆ ಪತ್ನಿಯ ಮದುವೆ ಮಾಡಿದ ಪತಿ !

- Advertisement -

ಕಾನ್ಪುರ : ಒಬ್ಬರನ್ನು ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾಗುವ ಅನಿವಾರ್ಯ ಸಂದರ್ಭ ಒದಗಿ ಬಂದಾಗ ಮದುವೆಯಾಗಿ ನಂತರ ಪ್ರಿಯಕರನ ಜೊತೆಗೆ ಮದುವೆಯಾಗೋದನ್ನು ಸಿನಿಮಾದಲ್ಲಿ ನೋಡಿದ್ದೇವೆ. ಆದ್ರೆ ಇಂತಹ ಘಟನೆ ನಿಜ ಜೀವನದಲ್ಲಿಯೇ ಸಂಭವಿಸಿದೆ, ಪ್ರಿಯಕರನ ನೆನಪಲ್ಲೇ ಇದ್ದ ಪತ್ನಿಯನ್ನು ಪತಿಯೊಬ್ಬ ಪ್ರಿಯಕರನಿಗೆ ನೀಡಿ ಮದುವೆ ಮಾಡಿಸಿದ ಘಟನೆ ನಡೆದಿದೆ.

ಉತ್ತರ ಪ್ರದೇಶದ ಗುರುಗ್ರಾಮದಲ್ಲಿ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಪಂಕಜ್‌ ಎಂಬಾತ ಕಳೆದ ಮೇ ತಿಂಗಳಿನಲ್ಲಿ ಕೋಮಲ್‌ ಎಂಬಾಕೆಯನ್ನು ವಿವಾಹವಾಗಿದ್ದಾನೆ. ಮದುವೆಯಾದ ದಿನದಿಂದ ಪತಿಯ ಜೊತೆ ಪತ್ನಿ ಕೋಮಲ್‌ ಸರಿಯಾಗಿ ಮಾತನಾಡುತ್ತಿರಲಿಲ್ಲ. ಇದರಿಂದ ಆತಂಕ ಗೊಂಡ ಪತಿ ಪಂಕಜ್‌ ಕಾರಣವೇನು ಎಂದು ಕೇಳಿದ್ದಾನೆ.

ಇದನ್ನೂ ಓದಿ: Puneeth Rajkumar : 2 ಕಣ್ಣುಗಳ ಮೂಲಕ ನಾಲ್ಕು ಮಂದಿಗೆ ದೃಷ್ಟಿ ನೀಡಿದ ಪುನೀತ್‌ ರಾಜ್‌ ಕುಮಾರ್‌

ಪತ್ನಿ ಇದ್ದ ಸತ್ಯ ಸಂಗತಿಯನ್ನು ತಿಳಿಸಿದ್ದಾಳೆ. ನಿಜಾಂಶವನ್ನು ಅರಿತ ಪತಿ ಪಂಕಜ್‌ ತನ್ನ ಪತ್ನಿ ಕೋಮಲ್‌ ಮನೆಯವರಿಗೆ ತಿಳಿಸಿ ಬುದ್ದಿವಾದ ಹೇಳಿದ್ದಾನೆ ಆದರೂ ತನ್ನ ಪಟ್ಟು ಬಿಡದ ಪತ್ನಿ ತನ್ನ ಹಠವನ್ನೇ ಸಾದಿಸಿದ್ದಾಳೆ. ನಂತರ ಈ ವಿಷಯವು ಕೌಟುಂಬಿಕ ದೌರ್ಜನ್ಯ ವಿರೋಧಿ ಕೋಶ ಮತ್ತು ಆಶಾಜ್ಯೋತಿ ಕೇಂದ್ರಕ್ಕೆ ತಲುಪಿದೆ.

ಅಲ್ಲಿ ಮಹಿಳೆ ಆಕೆಯ ಪತಿ ಹಾಗೂ ಪ್ರಿಯಕರ ಮತ್ತು ಸಂಬಂಧಿಕರ ನಡುವೆ ಕೂರಿಸಿ ಮಾತುಕತೆ ನಡೆಸಲಾಯಿತ್ತು. ಈ ವೇಳೆ ಕೋಮಲ್‌ ತನ್ನ ಪ್ರಿಯಕರನ ಜೊತೆ ಇರುವುದಾಗಿ ಹೇಳಿದ್ದಾಳೆ. ಕೋನೆಗೆ ಇದಕ್ಕೆ ಒಪ್ಪಿದ ಪತಿ ಪಂಕಜ್‌ ಎಲ್ಲರ ಸಮ್ಮುಖದಲ್ಲಿ ತನ್ನ ಪತ್ನಿ ಹಾಗೂ ಪ್ರಿಯಕರನ ಜೊತೆ ಮದುವೆ ಮಾಡಿಸಿದ್ದಾನೆ.

ಇದನ್ನೂ ಓದಿ: Agumbe Accident : ಆಗುಂಬೆ ಘಾಟಿಯಲ್ಲಿ ಭೀಕರ ಅಪಘಾತ : ನಾಲ್ವರು ಸ್ಥಳದಲ್ಲೇ ಸಾವು

(The wife who remembered the lover at least for the wedding: The husband who married his wife with a lover!)

RELATED ARTICLES

Most Popular