ರಾಯಘಡ : ಗಾಳಿ ಸಹಿತ ಭಾರೀ ಮಳೆಯಿಂದಾಗಿ ಜನಪ್ರಿಯ ಗಿರಿಧಾಮದಲ್ಲಿ ಪಾರಂಪರಿಕ ಆಟಿಕೆ ರೈಲು ಹಳಿ ತಪ್ಪಿದ ಪರಿಣಾಮ ಮೂವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಮಾತ್ರವಲ್ಲದೇ 20 ಮಂದಿ ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಮಾಥೆರಾನ್ನಲ್ಲಿ ನಡೆದಿದೆ.
ಮಾರ್ಗದುದ್ದಕ್ಕೂ ಭೂಕುಸಿತ ಸಂಭವಿಸಿದ್ದರಿಂದ ರೈಲ್ವೆ ಕೋಚ್ಗಳು ಹಳಿ ತಪ್ಪಿದವು ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಮಾಥೆರಾನ್ ಜಿಲ್ಲಾ ಪರಿಷತ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೋಲಿನಲ್ಲಿ ಹೊಡೆದು ಮಗಳ ಹತ್ಯೆ ಮಾಡಿದ ತಂದೆ ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ
ಮುಂಬೈನಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ರಾಯಗಡ ಜಿಲ್ಲೆಯ ಮಾಥೆರಾನ್ ನಲ್ಲಿ ಈ ಘಟನೆ ಸಂಭವಿಸಿದ್ದು, ವಾರಾಂತ್ಯದಲ್ಲಿ ಮೋಜು – ಮಸ್ತಿ ಮಾಡಲು ಇಷ್ಟ ಪಡುವವರಿಗೆಂದೇ ಇರುವ ಜನಪ್ರಿಯ ತಾಣವಾಗಿದೆ. ಹಾಗೂ ಏಷ್ಯಾದ ಏಕೈಕ ಆಟೋಮೊಬೈಲ್ ರಹಿತ ಗಿರಿಧಾಮವಾಗಿದೆ.
ದುರಂತಕ್ಕೀಡಾದ ನ್ಯಾರೋ -ಗೇಜ್ ರೈಲು ಡೀಸೆಲ್ ಚಾಲಿತ ಇಂಜಿನ್ ಹಾಗೂ ಐದು ಬೋಗಿಗಳನ್ನು ಹೊಂದಿದೆ. ಮಾಥೆರಾನ್ ಹಾಗೂ ಅಮನ್ ಲಾಡ್ಜ್ ನಿಲ್ದಾಣಗಳ ನಡುವೆ ಹಳಿ ತಪ್ಪಿದೆ. ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಇಲಾಖೆಯ ಉನ್ನತಾಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಇದನ್ನೂ ಓದಿ: Crime News : ಗಣೇಶ ವಿಸರ್ಜನೆಯ ವೇಳೆಯಲ್ಲಿ ದುರಂತ, 10 ಮಂದಿ ದುರ್ಮರಣ
ಘಟನೆ ಕುರಿತು ತನಿಖೆಗೆ ಆದೇಶ ನೀಡಲಾಗಿದೆ. ಮೃತರನ್ನು ಡಾ.ಹಂಸರಾಜ್ ಹಥಿ ಹಾಗೂ ಜೈಕುಮಾರ್ ಎಂದು ಗುರುತಿಸಲಾಗಿದೆ. ಆದರೆ ಮತ್ತೊಂದು ಮೃತದೇಹದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
(Train derailment: 3 killed, 20 injured)