ಲಡಾಖ್ : ಭಾರತೀಯ ಸೈನಿಕರು ಪ್ರಯಾಣಿಸುತ್ತಿದ್ದ ವಾಹನವು ಸ್ಕಿಡ್ (Indian Army vehicle accident ) ಆಗಿ ಕಮರಿಗೆ ಉರುಳಿದ ಪರಿಣಾಮ ಏಳು ಸೇನಾ ಯೋಧರು ಸಾವನ್ನಪ್ಪಿ( 7 Soldiers dead ) ಹಲವು ಗಂಭೀರವಾಗಿ ಗಾಯಗೊಂಡಿರುವ ಘಟನೆ ಲಡಾಖ್‌ನ ತುರ್ತುಕ್ ಸೆಕ್ಟರ್‌ನ ಶಯೋಕ್ ನದಿಯ ಬಳಿಯಲ್ಲಿ ನಡೆದಿದೆ.
26 ಸೈನಿಕರ ತಂಡವು ಪರ್ತಾಪುರ್ ಟ್ರಾನ್ಸಿಟ್ ಕ್ಯಾಂಪ್‌ನಿಂದ ವಾಹನದ ಮೂಲಕ ತುರ್ತುಕ್‌ಗೆ ತೆರಳುತ್ತಿತ್ತು. ವಾಹನ ಲಡಾಖ್‌ನ ತುರ್ತುಕ್ ಸೆಕ್ಟರ್‌ನ ಶಯೋಕ್ ನದಿಯ ಬಳಿಗೆ ಬರುತ್ತಿದ್ದಂತೆಯೇ ಸ್ಕಿಡ್ ಆಗಿ ಕಮರಿಗೆ ಉರುಳಿದೆ. ಇದರಿಂದಾಗಿ ವಾಹನದಲ್ಲಿದ್ದ 7 ಭಾರತೀಯ ಸೇನಾ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ, ಇತರರಿಗೂ ಗಂಭೀರ ಗಾಯ ಗಳಾಗಿವೆ. ಗಾಯಗೊಂಡವರಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅಲ್ಲದೇ ವಾಯುಸೇನೆ ( IAF ) ಅಗತ್ಯ ಸೇವೆಯನ್ನು ಒದಗಿಸಲಾಗುತ್ತಿದೆ.
7 Indian Army soldiers lost their lives so far in a vehicle accident in Turtuk sector (Ladakh), grievous injuries to others too. Efforts on to ensure best medical care for injured, incl requisition of air effort from IAF to shift more serious ones to Western Command: Army Sources
— ANI (@ANI) May 27, 2022
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರನ್ನು ಪಶ್ಚಿಮ ಕಮಾಂಡ್‌ಗೆ ಸ್ಥಳಾಂತರಿಸಲು ಭಾರತೀಯ ವಾಯುಪಡೆಯಿಂದ (IAF) ವಾಯು ಬೆಂಬಲವನ್ನು ಸಹ ಕೋರಲಾಗಿದೆ. 26 ಸೈನಿಕರ ತಂಡವು ಪಾರ್ತಾಪುರದ ಟ್ರಾನ್ಸಿಟ್ ಕ್ಯಾಂಪ್‌ನಿಂದ ಉಪ ವಲಯದ ಹನೀಫ್‌ನ ಮುಂದಿನ ಸ್ಥಳಕ್ಕೆ ತೆರಳುತ್ತಿತ್ತು. ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಶ್ಯೋಕ್ ನದಿಯಲ್ಲಿ ಬಿದ್ದಿತು, ಇದರ ಪರಿಣಾಮವಾಗಿ ಎಲ್ಲಾ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ಭಾರತೀಯ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ : ವೇಶ್ಯಾವಾಟಿಕೆ ಕಾನೂನು ಬದ್ಧ:ವೇಶ್ಯೆಯರಿಗೆ ಸಮಾಜದಲ್ಲಿ ಗೌರವ ಸಿಗಬೇಕು : ಸುಪ್ರೀಂ ಕೋರ್ಟ್
ಇದನ್ನೂ ಓದಿ : Love Jihad Shilpa Suicide : ಲವ್ ಸೆಕ್ಸ್ ಜಿಹಾದ್ : ಶಿಲ್ಪಾ ಆತ್ಮಹತ್ಯೆ ಬೆನ್ನಲ್ಲೇ ಕವನ ರೂಪದ ಪತ್ರ ಪತ್ತೆ
Indian Army vehicle accident 7 Soldiers dead and several injured