PM Modi New Car : ಪ್ರಧಾನಿ ಮೋದಿ ತಮ್ಮ ಭದ್ರತಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಮಾಡಿದ್ದಾರೆ. ಹೌದು..! ಪ್ರಧಾನಿ ಮೋದಿ ಬಳಕೆ ಮಾಡುತ್ತಿದ್ದ ರೇಂಜ್ ರೋವರ್ ವೋಗ್ ಹಾಗೂ ಟೊಯೋಟಾ ಲ್ಯಾಂಡ್ ಕ್ರೂಸರ್ಗಿಂತಲೂ ಹೆಚ್ಚು ಭದ್ರತಾ ವ್ಯವಸ್ಥೆಗಳನ್ನು ಹೊಂದಿರುವ ಐಷಾರಾಮಿ ಮರ್ಸಿಡಿಸ್ ಮೇ ಬ್ಯಾಕ್ ಎಸ್ 650 ಕಾರನ್ನು ಬಳಕೆ ಮಾಡಲು ಆರಂಭಿಸಿದ್ದಾರೆ.
ಮರ್ಸಿಡೀಸ್ ಬೆಂಜ್ ಕಂಪನಿಯ ಈ ಕಾರನ್ನು ಪ್ರಧಾನಿ ಮೋದಿಗಾಗಿ ಇನ್ನಷ್ಟು ಮಾರ್ಪಾಡು ಮಾಡಲಾಗಿದೆ. ಕೆಲ ದಿನಗಳ ಹಿಂದಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿಟರ್ ಪುಟಿನ್ ಭಾರತಕ್ಕೆ ಭೇಟಿ ನೀಡಿದ ವೇಳೆಯಲ್ಲಿಯೂ ಪ್ರಧಾನಿ ಮೋದಿ ಇದೇ ಕಾರಿನಲ್ಲಿ ಹೈದರಾಬಾದ್ ಹೌಸ್ಗೆ ಭೇಟಿ ನೀಡಿದ್ದರು. ಈ ಕಾರು ಇದೀಗ ಪ್ರಧಾನಿ ಮೋದಿಯ ಕ್ಯಾನ್ ವೇನಲ್ಲಿ ಕಾಣಿಸಿಕೊಳ್ಳುತ್ತಿದೆ.
ಪ್ರಧಾನಿ ಮೋದಿ ಅವರ ಭದ್ರತೆಯನ್ನೇ ಗಮನದಲ್ಲಿಟ್ಟುಕೊಂಡು ಈ ಕಾರನ್ನು ಮಾರ್ಪಾಡು ಮಾಡಲಾಗಿದೆ. ಮರ್ಸಿಡಿಸ್ ಮೇ ಬ್ಯಾಕ್ ಕಾರು ವಿಆರ್ 10 ಶ್ರೇಣಿಯ ರಕ್ಷಾ ಕವಚವನ್ನು ಹೊಂದಿದೆ.ಅತ್ಯುನ್ನತ ರಕ್ಷಣಾ ಸಾಮರ್ಥ್ಯವನ್ನು ಹೊಂದಿರುವ ಈ ಕಾರು ಎಕೆ 47 ರೈಫಲ್ನ ನಿರಂತರ ಗುಂಡಿನ ದಾಳಿ, ಸ್ಫೋಟಗಳನ್ನೇ ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನ ಕಿಟಕಿಗಳನ್ನು ಪಾಲಿಕಾರ್ಬೋನೇಟ್ನಿಂದ ರಚಿಸಲಾಗಿದೆ. ಕಳೆದ ವರ್ಷ ಈ ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಆರಂಭದಲ್ಲಿ 10.5 ಕೋಟಿ ರೂಪಾಯಿ ಮೌಲ್ಯ ಹೊಂದಿರುವ ಈ ಕಾರಿನ ಬೆಲೆಯು ಪ್ರಸ್ತುತ 12 ಕೋಟಿ ರೂಪಾಯಿ ಆಗಿದೆ. ಭಾರತದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಬೆಂಜ್ ಕಾರು ಇದಾಗಿದ್ದು ಇದನ್ನು ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ಖರೀದಿ ಮಾಡಿದ್ದಾರೆ.
ಈ ಕಾರಿನ ಸಾಮರ್ಥ್ಯ ಯಾವ ರೀತಿ ಇದೆ ಅಂದರೆ ಕಾರಿನಿಂದ 2 ಮೀಟರ್ ಅಂತರದಲ್ಲಿ 15 ಕೆಜಿ ತೂಕದ ಸ್ಫೋಟಕವನ್ನು ಸಿಡಿಸಿದರೂ ಸಹ ಕಾರಿನ ಒಳಗೆ ಇರುವವರು ಸೇಫ್ ಆಗಿಯೇ ಇರಲಿದ್ದಾರೆ. ಈ ದೇಶದ ಪ್ರಧಾನಿ ರಕ್ಷಣೆಯ ಹೊಣೆ ವಿಶೇಷ ರಕ್ಷಣಾ ದಳಕ್ಕೆ ಸೇರಿದೆ. ಇದೇ ಎಸ್ಪಿಜಿ ಇದೀಗ ಪ್ರಧಾನಿ ಮೋದಿಗೆ ಈ ಕಾರನ್ನು ನಿರ್ಧರಿಸಿದೆ.
ಈ ಮರ್ಸಿಡೀಸ್ ಮೇ ಬ್ಯಾಕ್ ಎಸ್ 650 ಕಾಡು ಅವಳಿ ಟರ್ಬೋ ವಿ 12 ಇಂಜಿನ್ಗಳನ್ನು ಹೊಂದಿದೆ. ಅನಿಲ್ ದಾಳಿ ಸಂದರ್ಭಗಳಲ್ಲಿ, ಟಿಎನ್ಟಿ ಸ್ಫೋಟದ ಸಂದರ್ಭಗಳಲ್ಲಿ ಈ ಕಾರಿನ ಒಳಗೆ ಇರುವವರು ಸೇಫ್ ಆಗಿ ಇರಲಿದ್ದಾರೆ. ವಿಷಾನಿಲ ಸ್ಫೋಟವಾದರೂ ಸಹ ಈ ಕಾರಿನ ಒಳಗೆ ಇರುವವರಿಗೆ ಬೇಕಾದ ಶುದ್ಧ ಗಾಳಿ ಪೂರೈಕೆ ಆಗಲಿದೆ. ಬೋಯಿಂಗ್ ವಿಮಾನ ಹಾಗೂ ಎಎಸ್ 64 ಹೆಲಿಕಾಪ್ಟರ್ಗಳಿಗೆ ಇರುವ ವಿಶೇಷ ಕೋಟಿಂಗ್ನ್ನು ಈ ಕಾರಿಗೂ ನೀಡಲಾಗಿದೆ.
Indian PM Modi gets armoured Mercedes-Maybach Car that can survive bullets and blasts
ಇದನ್ನು ಓದಿ :Ahmedabad IPL 2022 : ಗ್ಯಾರಿ ಕ್ರಿಸ್ಟನ್, ಆಶಿಶ್ ನೆಹ್ರಾ, ವಿಕ್ರಮ್ ಸೋಲಂಕಿ ಸೆಳೆಯಲು ಮುಂದಾದ ಅಹಮದಾಬಾದ್
ಇದನ್ನೂ ಓದಿ : Gujarat Gang Rape : ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ : ಅಪ್ರಾಪ್ತರು ಸೇರಿ 9 ಮಂದಿಯ ಬಂಧನ