ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೇ ಬೋರ್ಡ್ ರೈಲುಗಳ ದೇಶದಾದ್ಯಂತ ಇಂದಿನಿಂದ ಅಗಸ್ಟ್ 12ರ ವರೆಗೆ ರೈಲುಗಳ ಸಂಚಾರವನ್ನು ರದ್ದು ಮಾಡಿದೆ. ನಿತ್ಯದ ಮೇಲ್, ಇಎಂಯು, ಫ್ಯಾಸೆಂಜರ್ ರೈಲುಗಳು, ಎಕ್ಸಪ್ರೆಸ್, ಸರ್ಬಬನ್ ರೈಲುಗಳ ಸಂಚಾರವೂ ಸ್ಥಗಿತಗೊಳ್ಳಲಿದೆ.

ಕೊರೊನಾ ಲಾಕ್ ಡೌನ್ ತೆರವಾಗುತ್ತಿದ್ದಂತೆಯೇ ದೇಶದಾದ್ಯಂತ ರೈಲು ಸಂಚಾರ ಆರಂಭವಾಗಿತ್ತು. ಆದರೆ ರೈಲು ಸಂಚಾರ ಆರಂಭದ ಬೆನ್ನಲ್ಲೇ ಕೊರೊನಾ ಸೋಂಕು ಹೆಚ್ಚಳವಾಗಿತ್ತು. ಈ ಹಿನ್ನೆಲೆಯಲ್ಲಿ ಜೂನ್ 30ರ ವರೆಗೆ ರೈಲುಗಳ ಸಂಚಾರವನ್ನು ಬಂದ್ ಮಾಡಲಾಗಿತ್ತು. ಇದೀಗ ರೈಲ್ವೆ ಬೋರ್ಡ್ ಆದೇಶವನ್ನು ಅಗಸ್ಟ್ 12ರ ವರೆಗೂ ಮುಂದುವರಿಸಿದೆ. ರೈಲು ಸಂಚಾರ ಬಂದ್ ಆಗಲಿರುವ ಹಿನ್ನೆಲೆಯಲ್ಲಿ ಆಗಸ್ಟ್ 12ವರೆಗೆ ಸೀಟು ಕಾಯ್ದಿರಿಸಿದ್ದ ಹಣ ಶೇ.100ರಷ್ಟು ರಿಫಂಡ್ ಆಗಲಿದೆ.

ರೈಲ್ವೇ ನಿಯಮಗಳ ಪ್ರಕಾರ, ಪ್ರಯಾಣಿಕರು 120 ದಿನಗಳ ಮುಂಚೆಯೇ ಟಿಕೆಟ್ ಬುಕ್ ಮಾಡಬಹುದು. ಏಪ್ರಿಲ್ ನಲ್ಲಿ ಪ್ರಯಾಣಿಕರು ಬುಕ್ ಮಾಡಿದ ಟಿಕೆಟ್ ಹಣ ಹಿಂದಿರುಗಿಸಲಾಗಿದೆ. ಜುಲೈನಲ್ಲಿ ಬುಕ್ ಮಾಡಿದ ಟಿಕೆಟ್ ಮೊತ್ತ ರಿಫಂಡ್ ಆಗಲಿದೆ ಎಂದು ಭಾರತೀಯ ರೈಲ್ವೇ ಬೋರ್ಡ್ ಬಂದ್ ಹೇಳಿದೆ. ಇನ್ನು ಮೇ 12ರಿಂದ ಆರಂಭವಾಗಿರುವ ರಾಜಧಾನಿ ಸೇರಿದಂತೆ ವಿಶೇಷ ರೈಲುಗಳ ಸಂಚಾರ ಎಂದಿನಂತೆ ಇರಲಿದೆ.