ಶ್ರೀಹರಿಕೋಟಾ: ISRO launches 9 Satellites : ಓಷ್ಯನ್ ಸ್ಯಾಟ್ ಸೇರಿ ಒಟ್ಟು 9 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 321 ಟನ್ ತೂಕವುಳ್ಳ ಉಪಗ್ರಹಗಳನ್ನು ಹೊತ್ತು PSLV-C54 ರಾಕೆಟ್ ನಭಕ್ಕೆ ಚಿಮ್ಮಿದ್ದು, ಉಪಗ್ರಹಗಳನ್ನು ಸನ್- ಸಿಂಕ್ರೋನಸ್ ಧ್ರುವಿಯ ಕಕ್ಷೆಗೆ ಸೇರಿಸಲಾಗಿದೆ.
ನಭಕ್ಕೆ ಹಾರಿದ ಕೇವಲ 17 ನಿಮಿಷದಲ್ಲಿಯೇ ರಾಕೆಟ್ ನಿಂದ ಬೇರ್ಪಟ್ಟ ಓಷ್ಯನ್ ಸ್ಯಾಟ್ ಉಪಗ್ರಹ ಸೇರಿದಂತೆ ಎಲ್ಲಾ 9 ಉಪಗ್ರಹಗಳು ಕಕ್ಷೆ ಸೇರ್ಪಡೆಗೊಂಡವು. 9 ಉಪಗ್ರಹಗಳಲ್ಲಿ ಓಷ್ಯನ್ ಸ್ಯಾಟ್ ಪ್ರಮುಖವಾಗಿದೆ. ಇದು ಭೂಮಿಯ ಪರಿವೀಕ್ಷಣೆ ಮಾಡಲಿದೆ. ಸಾಗರಶಾಸ್ತ್ರ ಹಾಗೂ ವಾತಾವರಣದ ಅಧ್ಯಯನವನ್ನು ಓಷ್ಯನ್ ಸ್ಯಾಟ್ ಉಪಗ್ರಹ ಮಾಡಲಿದೆ. ಅಲ್ಲದೇ ಉಪಗ್ರಹಗಳು ಸಮುದ್ರದ ಹವಾಮಾನವನ್ನು ಮುನ್ಸೂಚಿಸುವ ಸಾಮಥ್ರ್ಯವನ್ನು ಹೊಂದಿದೆ.
ಓಷ್ಯನ್ ಸ್ಯಾಟ್ ಹೊರತುಪಡಿಸಿದಂತೆ ಆನಂದ್, ಥೈಬೋಲ್ಡ್, ಐಎನ್ ಎಸ್ 2-ಬಿ, ಆಸ್ಟ್ರೋಕಾಸ್ಟ್ ಒಳಗೊಂಡ 8 ಉಪಗ್ರಹಗಳು ನ್ಯಾನೋ ಸ್ಯಾಟಲೈಟ್ಸ್ ಆಗಿವೆ. ಓಷ್ಯನ್ ಸ್ಯಾಟ್- 1 ಉಪಗ್ರಹವನ್ನು 1999ರಲ್ಲಿ ಉಡಾವಣೆ ಮಾಡಲಾಗಿತ್ತು. ಮತ್ತು ಓಷ್ಯನ್ ಸ್ಯಾಟ್ -2 ಉಪಗ್ರಹವನ್ನು 2009ರಲ್ಲಿ ಬಾಹ್ಯಾಕಾಶದಲ್ಲಿ ಸ್ಥಾಪಿಸಲಾಗಿತ್ತು. ಓಷ್ಯನ್ ಸ್ಯಾಟ್-2 ನ ಸ್ಕ್ಯಾನಿಂಗ್ ಸ್ಕ್ಯಾಟರೋಮೀಟರ್ ವಿಫಲವಾದ ನಂತರ ಸ್ಕ್ಯಾಟ್ ಸ್ಯಾಟ್- 1 ಅನ್ನು 2016ರಲ್ಲಿ ಪ್ರಾರಂಭಿಸಲಾಗಿತ್ತು.
ಇದನ್ನೂ ಓದಿ: South Korea Murder Case : ಸತ್ತ ಮಗುವನ್ನು 3 ವರ್ಷಗಳ ಕಾಲ ಕಂಟೇನರ್‌ನಲ್ಲಿ ಬಚ್ಚಿಟ್ಟ ದಂಪತಿ
ಆನಂದ್ ನ್ಯಾನೊ ಉಪಗ್ರಹ ಭೂಮಿಯ ಕೆಳಕಕ್ಷೆಯಲ್ಲಿ ಮೈಕ್ರೊಸ್ಯಾಟಲೈಟ್ ಬಳಸಿಕೊಂಡು ಭೂಮಿಯ ವೀಕ್ಷಣೆ ನಡೆಸಲಿದೆ. ಥೈಬೋಲ್ಟ್ ಉಪಗ್ರಹವು ಸಂವಹನಕ್ಕೆ ಸಂಬಂಧಿಸಿದ್ದಾಗಿದ್ದು, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಿದೆ.
Congratulations to @ISRO and NSIL on the successful launch of PSLV C54 mission. The EOS-06 satellite will help in optimizing utilization of our maritime resources.
— Narendra Modi (@narendramodi) November 26, 2022
ಇಸ್ರೋ ಮತ್ತೊಂದು ಮೈಲಿಗಲ್ಲು ನಿರ್ಮಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೋ ಅಧಿಕಾರಿಗಳ ಸಾಧನೆಯನ್ನು ಕೊಂಡಿದ್ದಾರೆ. ಈ ಕುರಿತು ನಮೋ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
ISRO: ISRO witnesses another milestone; it launches 9 Satellites including oceansat at once