ಕನ್ನಡ ಮಾಧ್ಯಮ ಲೋಕ ಸದಾ ಚಲನಶೀಲವಾದದ್ದು. ಇಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಹತ್ತು ಹಲವು ಐಡಿಯಾಗಳನ್ನ ಇಟ್ಕೊಂಡು ಹೊಸಬರು ಆಗಾಗ ಪ್ರಯೋಗಗಳನ್ನ ಮಾಡ್ತಾನೆ ಇರ್ತಾರೆ. ಇದೀಗ ಕನ್ನಡ ಸುದ್ದಿಲೋಕಕ್ಕೆ ಎಂಟ್ರಿಯಾಗೋಕೆ ಮತ್ತೊಂದು ವಾಹಿನಿ ಸಿದ್ದವಾಗುತ್ತಿದೆ.

ಕನ್ನಡ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಈಗಾಗ್ಲೇ 10 ನ್ಯೂಸ್ ಚಾನೆಲ್ ಗಳಿವೆ. ಇಲ್ಲಿ ಕೆಲವರು ಗೆದ್ದು ಬೀಗಿದ್ರೆ ಇನ್ನು ಕೆಲವರು ತಮ್ಮ ಚಾನೆಲ್ ಗಳನ್ನ ಉಳಿಸಿಕೊಳ್ಳೊದಕ್ಕೆ ಒದ್ದಾಡ್ತಿದ್ದಾರೆ. ಇಂತಹ ಹೊತ್ತಲ್ಲಿ ಎಲೆಕ್ಟ್ರಾನಿಕ್ ಮೀಡಿಯಾ ಅಂದ್ರೆ ದೂರ ಸರಿಯೋರೆ ಜಾಸ್ತಿಯಾಗಿದ್ದಾರೆ. ಇಲ್ಲಿ ಬಂಡವಾಳ ಹೂಡೋದು ಅಂದ್ರೆ ಹೊಳೆಲಿ ಹುಣಸೆ ಹಣ್ಣು ಕರಡಿದ ಹಾಗೆ ಅನ್ನೋದು ಎಲ್ಲರಿಗೂ ಗೊತ್ತು. ಆದ್ರೂ ತೆರೆಮರೆಯಲ್ಲಿ ಹೊಸ ಚಾನೆಲ್ ಗಳು ಬರೋದಕ್ಕೆ ಕಸರತ್ತು ನಡೆಸ್ತಿರೋದು ಮಾತ್ರ ಸುಳ್ಳಲ್ಲ.

ಮಾರ್ಕೆಟ್ ಹೇಗೆ ಇದ್ರು ನಾವು ಒಂದು ಕೈ ನೋಡಿ ಬಿಡೋಣಾ ಜನರಿಗೆ ಹೊಸ ರೀತಿಯ ಸುದ್ದಿ ಕೊಡೋಣ ಅಂತ ಸೃಜನಶೀಲ ಮನಸ್ಸುಗಳು ಆಗಾಗ ಕಾಣಿಸಿಕೊಳ್ಳುತ್ತಲೇ ಇರುತ್ತವೆ. ಇದೀಗ ಒಂದಿಷ್ಟು ಯುವಪತ್ರಕರ್ತರು ಸೇರಿ ಹೊಸ ನ್ಯೂಸ್ ಚಾನಲ್ ಆರಂಭಿಸೋದಕ್ಕೆ ಅಡಿಪಾಯ ಹಾಕ್ತಿದ್ದಾರೆ. ನವೀರು ಕಲ್ಪನೆ ಮತ್ತು ಹೊಸ ಧ್ಯೇಯದೊಂದಿಗೆ ಚಾನೆಲ್ ಆರಂಭಿಸುವ ಕನಸು ಹೊತ್ತು ಬರ್ತಿದ್ದಾರೆ.

ಸುದ್ದಿ ಕೊಡುವ ಭರದಲ್ಲಿ ಅಪಹಾಸ್ಯಕ್ಕೊಳಗಾಗದೆ, ಜನರ ತಿಳಿ ಭಾವನೆಯನ್ನ ಕದಡದೆ, ಸುದ್ದಿಯ ರಸದೌತಣವನ್ನ ಕೊಡೋದಕ್ಕೆ ಯುವಕರ ತಂಡ ಹಗಲಿರುಳು ಶ್ರಮಿಸ್ತಿದೆ. ಈಗಾಗ್ಲೇ ಚಾನೆಲ್ ಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನ ಕೂಡಾ ಮಾಡಿಕೊಳ್ತಿದ್ದಾರೆ. ಮಾರ್ಕೆಟ್ ನಲ್ಲಿ ಸುದೀರ್ಘ ಪ್ರಯಾಣ ಆರಂಭಿಸೋದಕ್ಕೆ ಈಗಾಗ್ಲೇ ಮೊದಲ ಹೆಜ್ಜೆ ಇಡ್ತಿದ್ದಾರೆ.

ಅಲ್ಲದೆ ಆರಂಭದಲ್ಲೇ ಕಾರ್ಪೊರೇಟ್ ಕಲ್ಚರ್ ಅಳವಡಿಸಿಕೊಂಡು ಎಲೆಕ್ಟ್ರಾನಿಕ್ ಮಾಧ್ಯಮ ವಲಯದಲ್ಲಿ ಹೊಸ ತಂಗಾಳಿ ತರೋದಕ್ಕೆ ಶ್ರಮಿಸ್ತಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಚಾನೆಲ್ ಎಲ್ಲಾ ಅಂತಿಮ ರೂಪರೇಷೆಗಳು ಹೊರಗೆ ಬರಲಿವೆ. ಜೊತೆಗೆ ಒಂದಿಷ್ಟು ಮಂದಿಗೆ ಕೆಲಸ ಸಿಗುವ ಭರವಸೆಯು ಕಾಣಿಸ್ತಿದೆ. ಹೊಸ ಟೀಂ ಯಂಗ್ ಅಂಡ್ ಎನರ್ಜಿಟಿಕ್ ಟೀಂಗೆ ನಮ್ಮ ಕಡೆಯಿಂದ ಗುಡ್ ಲಕ್.