ಹುಬ್ಬಳ್ಳಿ : ಕರ್ನಾಟಕದಲ್ಲಿ ಲಾಕ್‌ಡೌನ್ ಮುಂದುವರಿಸಬೇಕೋ ಬೇಡವೋ ಎಂಬುದನ್ನು ತಜ್ಞರ ಸಮಿತಿಯ ಸಲಹೆ ಮೇರೆಗೆ ಮುಖ್ಯಮಂತ್ರಿ ನಿರ್ಧರಿಸುತ್ತಾರೆ. ಆದರೆ ಲಾಕ್ ಡೌನ್ ಮುಂದುವರಿ ಸುವ ಕುರಿತು ಕೇಂದ್ರ ಸರಕಾರದಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದ್ದಾರೆ.
ರಾಜ್ಯದಲ್ಲಿ ಸದ್ಯ ಜೂನ್ 7 ರವರೆಗೆ ಲಾಕ್ ಡೌನ್ ಆದೇಶ ಜಾರಿಯಲ್ಲಿ ದೆ. ಲಾಕ್‌ಡೌನ್ ಮುಕ್ತಾಯ ವಾಗುವ ಒಂದೆರಡು ದಿನಗಳ ಮುಂಚಿತ ವಾಗಿ ತೀರ್ಮಾನಿಸಲಾಗುತ್ತದೆ. ಅಲ್ಲಿವರೆಗೂ ಸೋಂಕಿನ ಪರಿಸ್ಥಿತಿ ಏನಿರುತ್ತದೆ. ಆದರೆ ಕೇಂದ್ರದ ಕಠಿಣ ಮಾರ್ಗಸೂಚಿ ಜೂನ್ 30ರ ವರೆಗೂ ಮುಂದುವರಿಯಲಿದೆ ಎಂದು ಅವಲೋಕಿಸಲಾಗುತ್ತದೆ ಎಂದರು.
ಸದ್ಯ ಕೊರೊನಾ ವೈರಸ್ ಸೋಂಕು ಕಂಟ್ರೋಲ್‌ಗೆ ಬರುತ್ತಿದೆ. ಪಾಸಿಟಿವಿಟಿ ದರ ಕಡಿಮೆಯಾಗುತ್ತಿದೆ. ಇನ್ನು, ಧಾರವಾಡದಲ್ಲಿ ಪಾಸಿಟಿವಿಟಿ ದರ ಶೇ. 32ಕ್ಕೂ ಹೆಚ್ಚಿತ್ತು. ಅದೀಗ ಶೇ. 16ಕ್ಕೆ ಇಳಿದಿದೆ. ಇದಕ್ಕೆ ಕಾರಣ ಕಠಿಣ ಲಾಕ್‌ಡೌನ್. ಇದೇ ರೀತಿ ರಾಜ್ಯದಲ್ಲೂ ಆಗಿದೆ. ಕೇಂದ್ರ ಸರ್ಕಾರ ಕೊರೋನಾ ಸೋಂಕಿನ ಪರಿಸ್ಥಿತಿ ಸುಧಾರಿಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಹೇಳಿದೆ ಎಂದರು.