ನೆಲ್ಲೂರು : ತೆಲುಗು ನಟ, ಬಿಗ್ ಬಾಸ್ ತೆಲುಗು ಸೀಸನ್ 1 ಖ್ಯಾತಿ ಯ ಕ್ಯಾಥಿ ಮಹೇಶ್ ಅವರು ಚಲಿಸುತ್ತಿದ್ದ ಕಾರು ಅಪಘಾತ ಕ್ಕೀಡಾಗಿದ್ದು, ಅವರನ್ನು ನೆಲ್ಲೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಂಧ್ರಪ್ರದೇಶದ ನಲ್ಲೂರು ಬಳಿಯಲ್ಲಿ ಮಹೇಶ್ ಅವರು ಚಲಿಸುತ್ತಿದ್ದ ಕಾರು ಟ್ರಕ್ ಗೆ ಢಿಕ್ಕಿ ಹೊಡೆದಿದೆ. ಅಪಘಾತ ದಲ್ಲಿ ಮಹೇಶ್ ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ವೈದ್ಯರು ತಪಾಸಣೆ ನಡೆಸುತ್ತಿದ್ದಾರೆ. ಯಾವುದೇ ಗಂಭೀರ ಸ್ವರೂಪದ ಗಾಯಗಳು ಆಗಿಲ್ಲ ಎಂದು ತಿಳಿದು ಬಂದಿದೆ.
ಪತ್ರಕರ್ತರಾಗಿ, ವಿಮರ್ಶಕರಾಗಿದ್ದು ಚಲನಚಿತ್ರ ನಿರ್ಮಾಪಕ ರಾಗಿಯೂ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ತೆಲುಗು ಸೀಸನ್ 1 ರಲ್ಲಿ ಪಾಲ್ಗೊಳ್ಳುವ ಮೂಲಕ ಜನರಿಗೆ ಹೆಚ್ಚು ಹತ್ತಿರವಾಗಿದ್ದಾರೆ. ವಿವಾದಾತ್ಮಕ ಬರಹಗಳಿಂದಲೂ ಮಹೇಶ್ ಅವರು ಖ್ಯಾತಿ ಪಡೆದುಕೊಂಡಿದ್ದಾರೆ.
.