ಕಣ್ಣೂರು : ಐಸ್ ಕ್ರೀಂ ಬಾಂಬ್ ಸ್ಪೋಟಗೊಂಡು 12 ವರ್ಷದ ಬಾಲಕನೊರ್ವ ಗಂಭೀರವಾಗಿ ಗಾಯಗೊಂಡಿರುವ (Ice Cream Bomb Blast) ಘಟನೆ ಕೇರಳದ ಕಣ್ಣೂರಿನ ನರಿವಾಯಲ್ ಎಂಬಲ್ಲಿ ನಡೆದಿದೆ. ಬಾಲಕ ಐಸ್‌ಕ್ರೀಂ ಕಂಟೇನರ್‌ನಲ್ಲಿ ಆಟವಾಡುತ್ತಿದ್ದ ವೇಳೆಯಲ್ಲಿ ಬಾಲಕ ಕೈಯಲ್ಲಿದ್ದ ಚೆಂಡು ಸ್ಪೋಟಗೊಂಡಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.
ಗಾಯಾಳು ಬಾಲಕ ತನ್ನ ಸ್ನೇಹಿತರ ಜೊತೆಯಲ್ಲಿ ಆಟವಾಡುತ್ತಿದ್ದ. ಈ ವೇಳೆಯಲ್ಲಿ ಐಸ್ ಕ್ರೀಂ ಚೆಂಡುಗಳು ಪತ್ತೆಯಾಗಿತ್ತು. ಆದರೆ ಇತರ ಮಕ್ಕಳಿಗೆ ಯಾವುದೇ ಗಾಯವಾಗಿಲ್ಲ ಎಂದು ತಿಳಿದು ಬಂದಿದೆ. ಘಟನಾ ಸ್ಥಳದಲ್ಲಿ ಎರಡು ಐಸ್ ಕ್ರೀಂ ಚೆಂಡುಗಳು ಪತ್ತೆಯಾಗಿವೆ. ಆದರೆ ಬಾಂಬ್‌ಗಳು ಎಲ್ಲಿಂದ ಬಂದವು ಮತ್ತು ಐಸ್‌ಕ್ರೀಂ ಕಂಟೈನರ್‌ಗಳಲ್ಲಿ ಯಾರು ಇಟ್ಟಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳು ಕ್ರಿಕೆಟ್ ಆಡುತ್ತಿದ್ದ ವೇಳೆಯಲ್ಲಿ ಚೆಂಡು ಪಕ್ಕದ ಜಾಗದಲ್ಲಿ ಬಿದ್ದಿತ್ತು. ತಮ್ಮ ಚೆಂಡನ್ನು ಹುಡುಕುತ್ತಿರುವಾಗ, ಮಕ್ಕಳು ಅಲ್ಲಿ ಬಿದ್ದಿದ್ದ ಮೂರು ಐಸ್- ಕ್ರೀಮ್ ಚೆಂಡುಗಳನ್ನು ಕಂಡು ಅವುಗಳನ್ನು ಎತ್ತಿಕೊಂಡರು. 12 ವರ್ಷದ ಬಾಲಕ ಆಟವಾಡುತ್ತಿದ್ದಾಗ ಚೆಂಡು ಎಸೆದಾಗ ಅದರಲ್ಲಿ ಒಂದು ಚೆಂಡು ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವರ್ಷ ಕಣ್ಣೂರು ಜಿಲ್ಲೆಯಲ್ಲಿ ವರದಿಯಾದ ಎರಡನೇ ಘಟನೆ ಇದಾಗಿದೆ. ಈ ಹಿಂದೆ ಮೇ ತಿಂಗಳಿನಲ್ಲಿ ಇದೇ ರೀತಿಯ ಸ್ಫೋಟದಲ್ಲಿ ಇಬ್ಬರು ಮಕ್ಕಳು ಗಾಯಗೊಂಡಿದ್ದರು.
ಇದನ್ನೂ ಓದಿ : Airtel New Plan : ಏರ್‌ಟೆಲ್ ಗ್ರಾಹಕರಿಗೆ ಬಿಗ್ ಶಾಕ್ : ದುಬಾರಿಯಾಗಲಿದೆ ಪ್ರಿಪೇಯ್ಡ್ ಫ್ಲ್ಯಾನ್
ಇದನ್ನೂ ಓದಿ : PUBG ಆಡುತ್ತಿದ್ದಾಗ ಹರಿದ ರೈಲು : ಇಬ್ಬರು ಬಾಲಕರು ಸಾವು
(Kerala Ice Cream Bomb Blast in CM’s constituency, 12-Year-Old Injured)