ತಿರುವನಂತಪುರಂ : ಕಳೆದ ಎರಡು ದಿನಗಳ ಹಿಂದೆ ಸುರಿದ ಭಾರಿ ಮಳೆ ದೇವರನಾಡು ಕೇರಳದಲ್ಲಿ ಇನ್ನಿಲ್ಲದ ಅವಾಂತರವನ್ನು ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ನಾಳೆ ಯಿಂದ ಕೇರಳ ರಾಜ್ಯದಲ್ಲಿ ಭಾರೀ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ರಾಜ್ಯದಾದ್ಯಂತ ಜಿಲ್ಲೆಗಳಲ್ಲಿ ಪ್ರತ್ಯೇಕ ಮಳೆಯಾಗುವ ಸಾಧ್ಯತೆಯಿದೆ. ನಾಳೆಯಿಂದ ಅಕ್ಟೋಬರ್ 24 ರವರೆಗೆ ಭಾರೀ ಮಳೆಯಾಗುವ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ನಾಳೆ ಕಾಸರಗೋಡು, ಕಣ್ಣೂರು ಮತ್ತು ಆಲಪ್ಪುಳ ಹೊರತುಪಡಿಸಿ 11 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಿಸಲಾಗಿದೆ. ಅಕ್ಟೋಬರ್ 21 ಕಾಸರಗೋಡು ಮತ್ತು ಕಣ್ಣೂರು ಹೊರತುಪಡಿಸಿ 12 ಜಿಲ್ಲೆಗಳಲ್ಲಿ ಮತ್ತು ಅಕ್ಟೋಬರ್ 22 ರಂದು ಕಾಸರಗೋಡು ಹೊರತುಪಡಿಸಿ 13 ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ನೀಡಲಾಗಿದೆ. ಅರಬ್ಬಿ ಸಮುದ್ರ ಅಥವಾ ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡವಿಲ್ಲದಿದ್ದರೂ, ಪೂರ್ವ ಗಾಳಿಯ ಪ್ರಭಾವದಿಂದಾಗಿ ಮಳೆ ಮತ್ತೆ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಬಂಗಾಳ ಮತ್ತು ಒಡಿಶಾದಲ್ಲಿ ಹೊಸದಾಗಿ ಕಡಿಮೆ ಒತ್ತಡ ಉಂಟಾಗಿದೆ. ಆದರೆ, ಇದು ಕೇರಳದ ಮೇಲೆ ಗಮನಾರ್ಹ ಪರಿಣಾಮ ಬೀರುವುದಿಲ್ಲ ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ನಾಳೆಯಿಂದ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಹೋಗುವುದನ್ನು ನಿರ್ಬಂಧಿಸಲಾಗಿದೆ.

ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಯಿಂದಾಗಿ ಇಡುಕ್ಕಿ ಹಾಗೂ ಕೊಟ್ಟಾಯಂ ಜಿಲ್ಲೆಗಳಲ್ಲಿ ಭೂ ಕುಸಿಯ ಉಂಟಾಗಿತ್ತು. ಇದರಿಂದಾಗಿ ಸುಮಾರು ಮೂವತ್ತಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಹಲವರು ನಾಪತ್ತೆಯಾಗಿದ್ದರು. ಇನ್ನು ಮನೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಸಾವಿರಾರು ಮಂದಿ ನಿರಾಶ್ರಿತರಾಗಿದ್ದು, ಪರಿಹಾರ ಕಾರ್ಯವನ್ನು ನಡೆಸುತ್ತಿದೆ. ಕೇಂದ್ರ ಸರಕಾರ ಈಗಾಗಲೇ ಸೇನಾ ಸಹಕಾರವನ್ನು ನೀಡುತ್ತಿದೆ. ಈ ನಡುವಲ್ಲೇ ಮತ್ತೆ ಕೇರಳದಲ್ಲಿ ಮಳೆ ಆರ್ಭಟಿಸುವ ಎಚ್ಚರಿಕೆ ಲಭ್ಯವಾದ ಬೆನ್ನಲ್ಲೇ ಕೇರಳ ಸರಕಾರ ಅಲರ್ಟ್ ಆಗಿದೆ. ಗುಡ್ಡ ಪ್ರದೇಶ ಹಾಗೂ ನದಿ ಪಾತ್ರದಲ್ಲಿ ವಾಸಿಸುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆಯನ್ನು ನೀಡಿದ್ದಾರೆ.
ಇದನ್ನೂ ಓದಿ : ಗೋವಾದಲ್ಲಿ ದೇಶದ ಮೊದಲ ಮದ್ಯದ ಮ್ಯೂಸಿಯಂ : ಇಲ್ಲಿ ಸಿಗದ ಬ್ರ್ಯಾಂಡ್‌ಗಳೇ ಇಲ್ಲಾ !
ಇದನ್ನೂ ಓದಿ : ಕೇರಳದಲ್ಲಿ ವರುಣನ ಆರ್ಭಟಕ್ಕೆ ಕೊಚ್ಚಿ ಹೋದ ಮನೆ : ಸಾವಿನ ಸಂಖ್ಯೆ 26 ಏರಿಕೆ
( Heavy rains in 11 districts of Kerala tomorrow )