ಬುಧವಾರ, ಜೂನ್ 18, 2025
HomeNationalKshama Bindu : 2 ದಿನ ಮುಂಚಿತವಾಗಿ ತನ್ನನ್ನು ತಾನೇ ವಿವಾಹವಾದ ಕ್ಷಮಾ ಬಿಂದು

Kshama Bindu : 2 ದಿನ ಮುಂಚಿತವಾಗಿ ತನ್ನನ್ನು ತಾನೇ ವಿವಾಹವಾದ ಕ್ಷಮಾ ಬಿಂದು

- Advertisement -

Kshama Bindu : ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಸ್ವಯಂ ವಿವಾಹವಾಗುತ್ತೇನೆಂದು ಘೋಷಣೆ ಮಾಡುವ ಮೂಲಕ ಭಾರೀ ವಿವಾದ ಸೃಷ್ಟಿಸಿದ್ದ ಗುಜರಾತ್​ ಮಹಿಳೆ ಕ್ಷಮಾ ಬಿಂದು ತಮ್ಮ ನಿರ್ಧಾರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ನಿಗದಿತ ದಿನಾಂಕಕ್ಕಿಂತ ಎರಡು ದಿನ ಮುಂಚಿತವಾಗಿಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಹಿಂದೆ ಅವರು ತಾನು ಜೂನ್​ 11ರಂದು ತನ್ನೊಂದಿಗೆ ತಾನು ವಿವಾಹವಾಗುತ್ತೇನೆಂದು ಘೋಷಣೆ ಮಾಡಿದ್ದರು. ಆದರೆ ಕ್ಷಮಾ ಬಿಂದು ಸ್ವಯಂ ವಿವಾಹಕ್ಕೆ ವಿರೋಧ ವ್ಯಕ್ತವಾಗಿತ್ತು. ಹೀಗಾಗಿ ಬುಧವಾರದಂದು ಕ್ಷಮಾ ಬಿಂದು ತಮ್ಮ ನಿವಾಸದಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದಾರೆ. ಈ ಮದುವೆ ಕಾರ್ಯಕ್ರಮದಲ್ಲಿ ಯಾವುದೇ ಪುರೋಹಿತರು ಹಾಜರಿರಲಿಲ್ಲ ಎಂದು ತಿಳಿದು ಬಂದಿದೆ .

ಇದಕ್ಕೂ ಮುನ್ನ ಕ್ಷಮಾ ಬಿಂದು ಎಲ್ಲಾ ವಿಧಿ ವಿಧಾನಗಳನ್ನು ಅನುಸರಿಸಿ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗುತ್ತೇನೆಂದು ಹೇಳಿದ್ದರು. ಆದರೆ ಇದಕ್ಕೆ ಸ್ಥಳೀಯ ಬಿಜೆಪಿ ನಾಯಕಿ ಸುನೀತಾ ಶುಕ್ಲಾ ವಿರೋಧ ವ್ಯಕ್ತಪಡಿಸಿದ್ದರು. ಹಿಂದೂ ಧರ್ಮದಲ್ಲಿ ತನ್ನನ್ನು ತಾನು ಮದುವೆಯಾಗಲು ಅನುಮತಿಯಿಲ್ಲದ ಕಾರಣ ದೇವಸ್ಥಾನದಲ್ಲಿ ಮದುವೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದರು. ಸ್ವಯಂ ವಿವಾಹಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದಂತೆಯೇ ಕ್ಷಮಾ ಬಿಂದುವಿಗೆ ಮದುವೆ ಮಾಡಿಸಿಕೊಡಲು ಒಪ್ಪಿದ್ದ ಅರ್ಚಕ ಕೂಡ ಹಿಂದೆ ಸರಿದಿದ್ದರು. ಹೀಗಾಗಿ ಕ್ಷಮಾ ತಮ್ಮ ನಿವಾಸದಲ್ಲಿ ಯಾವುದೇ ಪುರೋಹಿತ ಹಾಗೂ ವರನಿಲ್ಲದೇ ಮದುವೆಯಾಗಿದ್ದಾರೆ.


ಕ್ಷಮಾ ಬಿಂದು ಮೆಹಂದಿ ಕಾರ್ಯಕ್ರಮವನ್ನೂ ಮಾಡಿಕೊಂಡಿದ್ದಾರೆ. ಆದರೆ ತಮ್ಮ ಕೈ ಮೇಲೆ ವರನ ಹೆಸರನ್ನು ಬರೆಸಿಕೊಳ್ಳುವ ಜಾಗದಲ್ಲಿ ಏನಕ್ಕಾದರೂ ಪ್ರಯತ್ನಿಸುವ ಹುಡುಗಿ ಎಂದು ಬರೆದುಕೊಂಡಿದ್ದಾರೆ.
ಈ ವಿಚಾರವಾಗಿ ಮಾತನಾಡಿದ ಬಿಜೆಪಿ ನಾಯಕಿ ಸುನೀತಾ ಶುಕ್ಲಾ, ಮದುವೆ ಸ್ಥಳದ ಆಯ್ಕೆ ಬಗ್ಗೆ ನನಗೆ ವಿರೋಧವಿದೆ. ಆಕೆಯನ್ನು ದೇವಸ್ಥಾನದಲ್ಲಿ ಮದುವೆಯಾಗಲು ನಾವು ಬಿಡೋದಿಲ್ಲ. ಈ ರೀತಿಯ ಮದುವೆಗಳು ಹಿಂದೂ ಧರ್ಮಕ್ಕೆ ವಿರುದ್ಧವಾಗಿದೆ. ಇದರಿಂದ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತದೆ. ಧರ್ಮಕ್ಕೆ ವಿರುದ್ಧವಾಗಿ ಏನಾದರೂ ನಡೆದರೆ ಅದನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನು ಓದಿ : ಕನ್ನಡಿಗ ಕೆ.ಎಲ್ ರಾಹುಲ್‌ಗೆ ಇದೆಂಥಾ ದೌರ್ಭಾಗ್ಯ..? ದಕ್ಷಿಣ ಆಫ್ರಿಕಾ ಸರಣಿಯಿಂದ ಔಟ್‌

ಇದನ್ನೂ ಓದಿ : krishna pandey : 6 ಎಸೆತ 6 ಸಿಕ್ಸ್‌ : 15 ವರ್ಷದ ಕ್ರಿಕೆಟಿಗನ ವಿಶಿಷ್ಟ ಸಾಧನೆ : ಯುವರಾಜ್‌ ಸಿಂಗ್‌ ದಾಖಲೆ ಸರಿಗಟ್ಟಿದ ಕೃಷ್ಣ ಪಾಂಡೆ

Kshama Bindu gets married to self in ‘1st sologamy in India’ , steers clear of row

RELATED ARTICLES

Most Popular