ಕುವೈತ್ : ಗಲ್ಫ್ ರಾಷ್ಟ್ರಗಳಲ್ಲಿ ಕೊರೊನಾ ವೈರಸ್ ಹರಡುತ್ತಿರೋ ಹಿನ್ನೆಲೆಯಲ್ಲಿ ಕುವೈತ್ ತನ್ನ ದೇಶಕ್ಕೆ ಬರುವ ಹಾಗೂ ಹೊರ ಹೋಗುವ ಎಲ್ಲಾ ವಿಮಾನ ಸೇವೆಗಳನ್ನು ಸಂಪೂರ್ಣ ಬಂದ್ ಮಾಡಿದೆ.

ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಸಿರಿಯಾ, ಲಬ್ನಾಮ್, ಈಜಿಫ್ಟ್, ಫಿಲಿಫೈನ್ಸ್ ದೇಶಗಳಿಗೆ ವಿಮಾನ ಸೇವೆಯನ್ನು ರದ್ದು ಮಾಡಿ ಕುವೈತ್ ಸಚಿವಾಲಯ ಆದೇಶ ಹೊರಡಿಸಿದೆ. ಕಳೆದೊಂದು ವಾರದ ಹಿಂದೆಯೇ ನ್ಯೂಸ್ ನೆಕ್ಸ್ಟ್ ಕುವೈತ್ ಸಚಿವಾಲಯ ವಿಮಾನಯಾನ ರದ್ದುಗೊಳಿಸೋ ಕುರಿತು ವಿಸ್ತ್ರತ ವರದಿಯನ್ನು ಪ್ರಕಟಿಸಿತ್ತು.

ಆದರೆ ಕುವೈತ್ ಸಚಿವಾಲಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿತ್ತು. ಆದರೂ ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ. ಕುವೈತ್ ನಲ್ಲಿ 56 ಮಂದಿ ಕೊರೊನಾ ಶಂಕಿತರಿದ್ದು, ದಿನೇ ದಿನೇ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದೆ. ಈ ಹಿಂದೆಯೇ ಕುವೈತ್ ತನ್ನ ನಿವಾಸಿಗಳಿಗೆ ಟ್ರಾವೆಲ್ ಬ್ಯಾನ್ ಮಾಡಿತ್ತು. ಇದೀಗ ವಿಮಾನಯಾನವನ್ನೇ ಸಂಪೂರ್ಣವಾಗಿ ರದ್ದುಗೊಳಿಸಿದೆ.

ಸದ್ಯ ಒಂದು ವಾರಗಳ ಕಾಲ ವಿಮಾನಗಳನ್ನು ರದ್ದು ಮಾಡಿದ್ದು, ಕೊರೊನಾ ನಿಯಂತ್ರಣಕ್ಕೆ ಬಾರದಿದ್ರೆ ನಿಷೇಧದ ಅವಧಿ ಇನ್ನಷ್ಟು ಹೆಚ್ಚಳವಾಗೋ ಸಾಧ್ಯತೆಯಿದೆ. ಕುವೈತ್ ಮತ್ತು ಭಾರತ ನಡುವಿನ ವಿಮಾನ ಸೇವೆ ರದ್ದಾಗಿರುವುದರಿಂದ ಭಾರತೀಯರು ತಾಯ್ನಾಡಿನ ಸಂಪರ್ಕದಿಂದ ಸಂಪೂರ್ಣವಾಗಿ ಕಡಿತಗೊಂಡಂತಾಗಿದೆ.