ರಾಂಚಿ, ಝಾರ್ಖಂಡ್: ಝಾರ್ಖಂಡ್‌ದ ರಾಂಚಿಯ ವಿಶೇಷ ಸಿಬಿಐ ನ್ಯಾಯಾಲಯವು (CBI Court) ಮೇವು ಹಗರಣಕ್ಕೆ ಸಂಬಂಧಿಸಿದ ಡೊರಾಂಡಾ ಖಜಾನೆಯಿಂದ ₹ 139.35 ಕೋಟಿ ಅಕ್ರಮ ಹಿಂಪಡೆದ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರನ್ನು (Lalu Prasad Yadav) ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಈಗಾಗಲೇ ಇದೇ ಪ್ರಕರಣದ 36 ಆರೋಪಿಗಳು ದೋಷಿಯೆಂದು ನ್ಯಾಯಾಲಯ ತೀರ್ಪು ನೀಡಿದ್ದು ಅವರಿಗೆ ಮೂರು ವರ್ಷಗಳ ಶಿಕ್ಷೆಯನ್ನು ಪ್ರಕಟಿಸಿದೆ.
ಇದೀ ಫೆಬ್ರವರಿ 15, ಮಂಗಳವಾರ ಲಾಲು ಪ್ರಸಾದ್ ಯಾದವ್ ಅವರು ದೋಷಿಗಳೆಂದು ಪ್ರಕಟಿಸಿರುವ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಫೆಬ್ರವರಿ 18ರಂದು ಘೋಷಿಸುವುದಾಗಿ ತಿಳಿಸಿದೆ. ₹950 ಕೋಟಿ ಮೊತ್ತದ ಮೇವು ಹಗರಣ ಅವಿಭಜಿತ ಬಿಹಾರದಲ್ಲಿ ನಡೆದಿತ್ತು. ವಿವಿಧ ಜಿಲ್ಲೆಗಳಲ್ಲಿನ ಸರ್ಕಾರಿ ಖಜಾನೆಗಳಿಂದ ಹಣವನ್ನು ಅಕ್ರಮವಾಗಿ ಪಡೆದುಕೊಂಡ ಆರೋಪದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ಹಲವರ ವಿರುದ್ಧ ಆರೊಪ ಕೇಳಿಬಂದಿತ್ತು. ಡೊರಂಡ ಜಿಲ್ಲಾ ಸರ್ಕಾರಿ ಖಜಾನೆಯಿಂದ ₹139 ಕೋಟಿಗಳನ್ನು ಅಕ್ರಮವಾಗಿ ಪಡೆದಿರುವ ಆರೋಪ ಇದೀಗ ಸಾಬೀತಾಗಿದ್ದು ಲಾಲೂ ಪ್ರಸಾದ್ ಯಾದವ್‌ಗೆ ಶಿಕ್ಷೆಯ ಪ್ರಮಾಣವನ್ನು ಕೋರ್ಟ್ ಇನ್ನೇನು ಪ್ರಕಟಿಸಬೇಕಿದೆ.
RJD chief Lalu Prasad Yadav reaches CBI Special Court in Ranchi, Jharkhand
— ANI (@ANI) February 15, 2022
The court will today pronounce its verdict in a case related to the fodder scam pic.twitter.com/lWidpuofT0
ಅನಾರೋಗ್ಯದ ಹಿನ್ನೆಲೆಯಲ್ಲಿ ಲಾಲು ಪ್ರಸಾದ್ ಯಾದವ್ ಅವರನ್ನು ರಿಮ್ಸ್‌ಗೆ (ರಾಂಚಿಯ ರಾಜೇಂದ್ರ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ಸ್ಥಳಾಂತರಿಸಲು ಸೂಚನೆ ಕೋರಿ ನಾವು ಅರ್ಜಿಯನ್ನು ನೀಡಿದ್ದೇವೆ. ನ್ಯಾಯಾಲಯವು ಮಧ್ಯಾಹ್ನ 2 ಗಂಟೆಗೆ ಅರ್ಜಿಯ ವಿಚಾರಣೆ ನಡೆಸಲಿದೆ ಎಂದು ಆರ್‌ಜೆಡಿ ಮುಖ್ಯಸ್ಥರ ವಕೀಲ ಪ್ರಭಾತ್ ಕುಮಾರ್ ಅವರು ಸುದ್ದಿ ಸಂಸ್ಥೆ ಎಎನ್‌ಐ ತಿಳಿಸಿದ್ದಾರೆ.
ಕುಖ್ಯಾತ ₹ 950 ಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದ ಇತರ ನಾಲ್ಕು ವಿಷಯಗಳಲ್ಲಿ ಲಾಲು ಯಾದವ್ ಅವರು ಈಗಾಗಲೇ ದೋಷಿ ಎಂದು ಸಾಬೀತಾಗಿದೆ – ₹ 37.7 ಕೋಟಿ ಮತ್ತು ಚೈಬಾಸಾ ಖಜಾನೆಯಿಂದ ₹ 33.13 ಕೋಟಿ, ದಿಯೋಘರ್ ಖಜಾನೆಯಿಂದ ₹ 89.27 ಕೋಟಿ ಮತ್ತು ₹ 3.76 ಕೋಟಿ ವಂಚನೆ ಪ್ರಕರಣದಲ್ಲಿ ಈ ತೀರ್ಪನ್ನು ಕೋರ್ಟ್ ನೀಡಿದೆ.
ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!
ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 3
(Lalu Prasad Yadav convicted in 5th fodded scam case CBI Court)