lpg cylinder price increased : ದೇಶದಲ್ಲಿ ದಿನದಿಂದ ದಿನಕ್ಕೆ ದಿನ ಬಳಕೆಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕಾಣುತ್ತಲೇ ಇದೆ. ತರಕಾರಿ, ಪೆಟ್ರೋಲ್,ಡೀಸೆಲ್ ಅಷ್ಟೇ ಏಕೆ ವಿದ್ಯುತ್ ದರದಲ್ಲಿಯೂ ಭಾರೀ ಏರಿಕೆಯನ್ನು ಗಮನಿಸಿದ್ದೇವೆ. ಕೆಲವು ದಿನಗಳ ಹಿಂದಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರದಲ್ಲಿಯೂ ಏರಿಕೆ ಮಾಡಿತ್ತು. ಪರಿಣಾಮವಾಗಿ ಇದೀಗ ಗೃಹ ಸಾಲ,ವಾಹನ ಸಾಲ ಹಾಗೂ ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಕೂಡ ಹೆಚ್ಚಾಗಿದೆ. ಇದೀಗ ಶ್ರೀ ಸಾಮಾನ್ಯನಿಗೆ ಮತ್ತೊಂದು ಶಾಕ್ ಎಂಬಂತೆ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿಯೂ ಏರಿಕೆ ಕಂಡಿದೆ.
ಇಂದಿನಿಂದಲೇ ಜಾರಿಗೆ ಬರುವಂತೆ ಗೃಹ ಬಳಕೆಯ ಸಿಲಿಂಡರ್ಗಳ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಲಾಗಿದೆ. ಈಗಾಗಲೇ ಹಣದುಬ್ಬರದಿಂದ ಕಂಗಾಲಾಗಿರುವ ಶ್ರೀ ಸಾಮಾನ್ಯನ ಜೇಬಿಗೆ ಇಂದು ಮತ್ತೊಂದು ಬರೆ ಎಳೆದಂತಾಗಿದೆ.
ಮಾರ್ಚ್ 22ನೇ ತಾರೀಖಿನಂದು ಅಡುಗೆ ಅನಿಲದ ಬೆಲೆಯನ್ನು 50 ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಇದಾಗಿ ಒಂದು ತಿಂಗಳ ಬಳಿಕ ಇದೀಗ ಮತ್ತೆ ಪ್ರತಿ ಎಲ್ಪಿಜಿ ಸಿಲಿಂಡರ್ಗಳ ದರವು 50 ರೂಪಾಯಿಗೆ ಏರಿಕೆ ಕಂಡಿದೆ. ಪ್ರತಿಯೊಂದು ವಸ್ತುಗಳ ದರ ಏರಿಕೆ ಕಾಣುತ್ತಿರುವುದು ಶ್ರೀ ಸಾಮಾನ್ಯನಿಗೆ ತಲೆ ತಿರುಗಿಸುವಂತಿದೆ. ಪ್ರಸ್ತುತ ಗೃಹ ಬಳಕೆಯ ಸಿಲಿಂಡರ್ಗಳು 995.50 ರೂಪಾಯಿಗಳಿಗೆ ಸಿಗುತ್ತಿದ್ದವು. ಆದರೆ ಇಂದಿನಿಂದ ಅಡುಗೆ ಅನಿಲದ ಬೆಲೆಯಲ್ಲಿ ಮತ್ತೆ 50 ರೂಪಾಯಿ ಏರಿಕೆ ಕಂಡ ಪರಿಣಾಮ ಎಲ್ಪಿಜಿ ಸಿಲಿಂಡರ್ಗಳ ಬೆಲೆಯು 1000 ರೂಪಾಯಿ ಗಡಿ ದಾಟಿದೆ.
ಇದನ್ನು ಓದಿ : Mohan Juneja : ಸ್ಯಾಂಡಲ್‌ವುಡ್ ಖ್ಯಾತ ಹಾಸ್ಯನಟ ಮೋಹನ್ ಜುನೇಜ ಇನ್ನಿಲ್ಲ
ಇದನ್ನೂ ಓದಿ : MI vs GT IPL 2022 : ಮುಂಬೈ ಇಂಡಿಯನ್ಸ್ ಪರ ಕಣಕ್ಕೆ ಇಳಿಯಲಿದ್ದಾರೆ ಅರ್ಜುನ್ ತೆಂಡೂಲ್ಕರ್
lpg cylinder price increased by rs 50 with effect from today