ಉತ್ತರಪ್ರದೇಶ : mahakumbh 2025 : ಸದಾ ಕೊಲೆ, ಸುಲಿಗೆ, ಅತ್ಯಾಚಾರ ಸೇರಿದಂತೆ ಪಾತಕ ಕೃತ್ಯಗಳಿಂದಲೇ ತನ್ನ ಅಸಲಿ ಪಾವಿತ್ರ್ಯತೆಯನ್ನು ಮರೆಮಾಚಿಕೊಂಡಿದ್ದ ಉತ್ತರ ಪ್ರದೇಶದ ಗ್ರಹಣ ಕಳೆದಿದೆ. ಮೋಡದಿಂದ ಹೊರಬಂದ ಸೂರ್ಯನಂತೆ ಪ್ರಕಾಶಿಸುತ್ತಿದೆ. ಇದರ ಹಿಂದಿನ ಶಕ್ತಿ ಬೇರಾರೂ ಅಲ್ಲ ಉತ್ತರ ಪ್ರದೇಶದ ಮುಖ್ಯಮಂತ್ರಿ,ಬಿಜೆಪಿಯ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥ್. ಎರಡು ಅವಧಿಗೆ ಮುಖ್ಯಮಂತ್ರಿಯಾಗಿ ರಾಜ್ಯದ ಕಾನೂನು ಸುವ್ಯವಸ್ಥೆ ಗೆ ಹೊಸ ರೂಪ ನೀಡಿದ್ದಾರೆ. ಇದರೊಂದಿಗೆ ಈಗ ಆಸ್ತಿಕ ಉತ್ಸವ ಮಹಾಕುಂಭಮೇಳದ ಮೂಲಕ ಅರ್ಥಿಕ ವ್ಯವಸ್ಥೆಗೆ ಹೊಸ ರೂಪ ನೀಡಲು ಮುಂದಾಗಿದ್ದಾರೆ. ಮಹಾಕುಂಭಮೇಳ ಕೇವಲ ಧಾರ್ಮಿಕ ಮಾತ್ರವಲ್ಲ ಆರ್ಥಿಕವಾಗಿಯೂ ಉತ್ತರ ಪ್ರದೇಶಕ್ಕೆ ಪುನಶ್ಚೇತನ ನೀಡಲಿದೆ.
ಕುಂಭಮೇಳ , ಮಹಾಕುಂಭಮೇಳ ಅಂದ್ರೆ ಏನು ಅನ್ನೋದನನು ನೋಡುವುದಾದ್ರೆ, ಸಾಮಾನ್ಯವಾಗಿ ಪ್ರತೀ 3 ವರ್ಷಗಳಿಗೊಮ್ಮೆ ಕುಂಭಮೇಳ ನಡೆಯಲಿದೆ. ಕುಂಭಮೇಳವನ್ನು ಪ್ರತಿ 6 ವರ್ಷಗಳಿಗೊಮ್ಮೆ ಮತ್ತು ಮಹಾ ಕುಂಭಮೇಳವನ್ನು ಪ್ರತಿ 12 ವರ್ಷಗಳಿಗೆ ಒಮ್ಮೆ ಆಯೋಜಿಸಲಾಗುತ್ತದೆ. ಈ ಹಿಂದೆ 2013ರಲ್ಲಿ ಮಹಾಕುಂಭಮೇಳ ನಡೆದಿತ್ತು. 2019ರಲ್ಲಿ ಅರ್ಧ ಕುಂಭ ಮೇಳ ಹಾಗೂ ಇದೀಗ 2025ರಲ್ಲಿ ಮಹಾಕುಂಭಮೇಳ ನಡೆಯುತ್ತಿದೆ. ಮಹಾಕುಂಭ ಮೇಳ 2025ನ್ನು ಸಿದ್ಧಿ ಯೋಗದಲ್ಲಿ ಜನವರಿ 29, 2025 ರಂದು ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯಲಿದೆ.
ಸನಾತನ ಧರ್ಮದಲ್ಲಿ ನಂಬಿಕೆ ಹೊಂದಿರುವ ಪ್ರತಿಯೊಬ್ಬರ ಪಾಲಿಗೂ ಮಹಾಕುಂಭ ಮೇಳ ದೊಡ್ಡ ಹಬ್ಬ. ವಿಶ್ವದಾದ್ಯಂತ ಸಂತರು ಪ್ರಯಾಗ್ ರಾಜ್‌ಗೆ ಆಗಮಿಸುತ್ತಾರೆ. ವಿಶ್ವಾದಾದ್ಯಂತ ನೆಲೆಸಿರುವ ಸನಾತನಿಗಳು ಮಹಾಕುಂಭದ ಪವಿತ್ರ ಮಹಾ ಸಂಗಮದಲ್ಲಿ ಸ್ನಾನ ಮಾಡುತ್ತಾರೆ. ಇದರಿಂದಲೇ ಮಹಾಕುಂಭ ಮೇಳವನ್ನು ಮಹಾ ಸಂಗಮ ಎಂದೂ ಕರೆಯುತ್ತಾರೆ. ಈ ಬಾರಿಯ ಮಹಾಕುಂಭ ಜನವರಿ 13 ರಂದು ಆರಂಭಗೊಂಡಿದ್ದು, ಫೆಬ್ರವರಿ 26 ರವರೆಗೆ ನಡೆಯಲಿದೆ.

ಪ್ರತೀ 12 ವರ್ಷಕ್ಕೆ ಒಮ್ಮೆ ನಡೆಯುವ ಈ ಮಹಾ ಕುಂಭ ಮೇಳದಿಂದಾಗಿ ಪ್ರಯಾಗ್ ರಾಜ್‌ನಲ್ಲಿ ಹಬ್ಬದ ಸಂಭ್ರಮ ಮುಗಿಲು ಮುಟ್ಟಿದೆ. ಜನವರಿ 13ರಿಂದ ಬರೋಬ್ಬರಿ 45 ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಆಚರಣೆಯಲ್ಲಿ ಕೋಟ್ಯಾಂತರ ಮಂದಿ ಪಾಲ್ಗೊಂಡಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಹಾಕುಂಭ ಮೇಳದ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಬ್ಬ ಎನಿಸಿಕೊಂಡಿರುವ ಮಹಾಕುಂಭ ಮೇಳವನ್ನು ಇದೀಗ ಉತ್ತರ ಪ್ರದೇಶದ ಆರ್ಥಿಕ ಲಾಭದ ಅಸ್ತ್ರವಾಗಿ ಬಳಸಿಕೊಳ್ಳಲು ಭರ್ಜರಿ ಯೋಜನೆಯನ್ನು ರೂಪಿಸಲಾಗಿದೆ.
ಮಹಾಕುಂಭಮೇಳ (mahakumbh 2025 ) ಏನಿದು ಯೋಗಿ ಆದಿತ್ಯನಾಥ್ ಫ್ಲ್ಯಾನ್ ?
ಗಂಗಾ, ಸರಸ್ವತಿ , ಜಮುನಾ ನದಿಗಳ ಸಂಗಮ ನಗರಿ ಎನಿಸಿಕೊಂಡಿರುವ ಈ ಪ್ರಯಾಗರಾಜ್‌ನಲ್ಲಿ ಈ ಹಿಂದಿಗಿಂತಲೂ ಅತ್ಯಧಿಕ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಕಟ್ಟರ್ ಹಿಂದುತ್ವವಾದಿಗಳು, ಸನಾತನಿಗಳು, ಸಂತ, ಸನ್ಯಾಸಿಯಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪಾಲಿಗೆ ಈ ಮೇಳ ಅತ್ಯಂತ ಮಹತ್ವದ್ದಾಗಿದೆ. ಈ ಬಾರಿಯ ಮಹಾಕುಂಭ ಮೇಳದಲ್ಲಿ ಬರೋಬ್ಬರಿ 10 ಕೋಟಿಗೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆರಂಭದಿಂದಲೇ ವಿಶ್ವದ ನಾನಾ ದೇಶಗಳಿಂದಲೂ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪ್ರಯಾಗ್ ರಾಜ್‌ಗೆ ಆಗಮಿಸುತ್ತಿದ್ದಾರೆ.
ಮಕರ ಸಂಕ್ರಾಂತಿಯ ದಿನದಂದು ಪವಿತ್ರ ಸಂಗಮದಲ್ಲಿ ಮಿಂದೇಳುವ ಜನರು ಮಹಾಶಿವರಾತ್ರಿಯ ವರೆಗೂ ನಡೆಯುವ ಮೇಳದಲ್ಲಿ ಇಲ್ಲಿನ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಕೃಥಾರ್ತರಾಗುತ್ತಾರೆ. ಸ್ನಾನ ಪರ್ವ ಅನ್ನೋ ಶೀರ್ಷಿಕೆಯ ಅಡಿಯಲ್ಲಿ ಇಲ್ಲಿಗೆ ಬರುವ ಜನರನ್ನು ಆಹ್ವಾನಿಸುವ ಕಾರ್ಯವೂ ನಡೆದಿದೆ. ಸಬ್ ಪುಣ್ಯ ಫಲೆ, ಆವೋ ಕುಂಭಮೇಳ ಚಲೇ’ (ಎಲ್ಲ ಪುಣ್ಯಗಳು ಫಲಿಸಲಿ ಎಲ್ಲರೂ ಕುಂಭ ಮೇಳಕ್ಕೆ ನಡೆಯಿರಿ) ಎಂಬ ಧ್ಯೇಯವಾಕ್ಯದಡಿ ಜನರನ್ನು ಮೇಳಕ್ಕೆ ಸೆಳೆಯುವ ಯತ್ನವನ್ನು ಸರಕಾರ ಮಾಡುತ್ತಿದೆ.
ಇದಕ್ಕೆ ನಗರದಾದ್ಯಂತ ರೈಲು ನಿಲ್ದಾಣ, ವಿಮಾನ ನಿಲ್ದಾಣ ಹಾಗೂ ಪ್ರಮುಖ ವೃತ್ತಗಳಲ್ಲಿ ಹಾಕಿರುವ ಡಿಜಿಟಲ್ ಸೈನೇಜ್‌ಗಳೇ ಸಾಕ್ಷಿ. ಮಹಾಕುಂಭ ಮೇಳ ಇಲ್ಲಿ ಮುಂಚೆಯಿಂದಲೂ ಅದ್ಧೂರಿಯಾಗಿ ನಡೆಯುತ್ತ ಬಂದಿದೆಯಾದರೂ, ಯೋಗಿ ಆದಿತ್ಯನಾಥರ ಸರಕಾರ ಬಂದ ಮೇಲೆ ಇದಕ್ಕೆ ಹೆಚ್ಚಿನ ಪ್ರಚಾರ ಮತ್ತು ಅನುದಾನದ ಬಲ ಸಿಕ್ಕಿದೆ ಎಂಬುದು ಸ್ಥಳೀಯರ ಅಭಿಪ್ರಾಯ.
ದೇಶದಾದ್ಯಂತ ಚಳಿಯೂ ಜೋರಾಗಿದ್ದು ಉತ್ತರ ಪ್ರದೇಶದಲ್ಲಿ ಮೈನಡುಗಿಸುವ ಚಳಿ ಇದೆ. ಕಳೆದ ನಾಲ್ಕು ದಿನಗಳಿಂದ ಇಲ್ಲಿ ಭರ್ಜರಿ ಚಳಿ ಇದ್ದು, ತಾಪಮಾ 4 ಡಿಗ್ರಿ ಇರುವುದು ಒಂದೆಡೆಯಾದರೆ, ಮಹಾಕುಂಭಮೇಳದ ಆಹ್ವಾನ ಕ್ಕೆ ಚಳಿಯ ನಡುವೆಯೂ ಉತ್ತರ ಪ್ರದೇಶ ಸಜ್ಜಾಗಿದೆ. 12 ವರ್ಷಕ್ಕೊಮ್ಮೆ ಉತ್ತರ ಪ್ರದೇಶದಲ್ಲಿ ಮಹಾಕುಂಭಮೇಳ ನಡೆಯುತ್ತದೆ. ಆದರೆ ಹಲವು ಕೊರತೆಗಳು ಸಾಧುಸಂತರನ್ನು ಹೈರಾಣಾಗಿಸುತ್ತಿತ್ತು. ಅಲ್ಲದೇ ಹದಗೆಟ್ಟ ಕಾನೂನು ವ್ಯವಸ್ಥೆಯೂ ಮಹಾಕುಂಭಮೇಳದ ಸಂಭ್ರಮಕ್ಕೆ ಅಡ್ಡಿಯಾಗುತ್ತಿತ್ತು. ಆದರೆ ಈಗ ಉತ್ತರ ಪ್ರದೇಶದಲ್ಲಿ ರೌಡಿಗಳ, ಪುಂಡಪೋಕರಿಗಳ ಅಬ್ಬರ ತಗ್ಗಿದೆ. ಉಗ್ರರಿಂದ ಆರಂಭಿಸಿ ಪುಡಿ ರೌಡಿಗಳ ತನಕ ಎಲ್ಲರಿಗೂ ಬುಲ್ಡೋಜರ್ ಬಾಬಾ ಎನ್ನಿಸಿರುವ ಸಿಎಂ ಯೋಗಿ ಆದಿತ್ಯನಾಥ್ ಭಯ ಕಾಡುತ್ತಿದೆ.
ಯೋಗಿ ಆದಿತ್ಯನಾಥ್ ಅಧಿಕಾರ ವಹಿಸಿಕೊಂಡಾಗಿನಿಂದ ಉತ್ತರ ಪ್ರದೇಶಕ್ಕೆ ಅಂಟಿದ ಕಳಂಕವನ್ನು ತೊಡೆದು ಹಾಕುವತ್ತ ಹೆಚ್ಚು ಗಮನ ನೀಡುತ್ತಿದ್ದಾರೆ. ಜಾಗತಿಕವಾಗಿ ಒಂದು ರಾಜ್ಯ ಮಹತ್ವ ಪಡೆದುಕೊಳ್ಳಲು ಅದರ ಇತಿಹಾಸ ಮುಖ್ಯವಾಗುತ್ತದೆ. ಅರಾಜಕತೆ,ಅತಂತ್ರ ಸ್ಥಿತಿ,ಕಾನೂನು ಸುವ್ಯವಸ್ಥೆ ಕುಸಿತ ಎಂದಿಗೂ ಹೂಡಿಕೆದಾರರನ್ನು ಸೆಳೆಯುವುದಿಲ್ಲ. ಹೀಗಾಗಿ ಉತ್ತರ ಪ್ರದೇಶದ ಚಿತ್ರಣ ಬದಲಾಯಿಸಲು ಖಾವಿಯ ಸಂತ ಪಣತೊಟ್ಟಿದ್ದಾರೆ.

ಹೀಗಾಗಿ ಉತ್ತರ ಪ್ರದೇಶದ ಈ ಬಾರಿಯ ಮಹಾಕುಂಭಮೇಳವನ್ನು ಜಾಗತಿಕ ಇವೆಂಟ್ ಮಾದರಿ ಮಾಡಲು ಹೊರಟಿರುವ ಯೋಗಿ ಅವರು ಕಳೆದ 15 ದಿನದಲ್ಲಿ ಸ್ವತಃ ಮೂರು ಬಾರಿ ಭೇಟಿ ನೀಡಿ, ಎಲ್ಲ ಸಿದ್ದತೆ ಪರಿಶೀಲಿಸಿದ್ದಾರೆ. ಯಾವುದೇ ಲೋಪವಾಗದಂತೆ ಎಲ್ಲವನ್ನೂ ಸಮರೋಪಾದಿಯಲ್ಲಿ ಅಚ್ಚುಕಟ್ಟಾಗಿ ಮಾಡಲು ಕಟ್ಟಪ್ಪಣೆ ಹೊರಡಿಸಿದ್ದಾರೆ. ಆಧಿಕಾರಿಗಳ ಸಭೆ, ಸ್ಥಳಪರಿಶೀಲನೆ, ನೀಲನಕ್ಷೆ ಎಲ್ಲವನ್ನು ತಾವೇ ತಯಾರಿಸಿ ಕಾರ್ಯತತ್ಪರರಾಗಿದ್ದಾರೆ.
ಮಹಾಕುಂಭ ಮೇಳವು ಕೇವಲ ಆಧ್ಯಾತ್ಮಿಕ ಕಾರ್ಯಕ್ರಮವಲ್ಲ ಆದರೆ ಆರ್ಥಿಕ ವೇಗ ವರ್ಧಕವೂ ಆಗಿದೆ. ಉತ್ತರ ಪ್ರದೇಶದಲ್ಲಿನ ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ ಬಾಡಿಗೆ ಕಟ್ಟಡ, ತೆರಿಗೆ, ಸೇವಾ ಶುಲ್ಕಗಳ ಮೂಲಕ ಮಹಾಕುಂಭ ಮೇಳದ ಮೂಲಕ ಉತ್ತರ ಪ್ರದೇಶಕ್ಕೆ 25,000 ಕೋಟಿ ರೂಪಾಯಿ ಆದಾಯ ಹರಿದು ಬರುವ ನಿರೀಕ್ಷೆಯಿದೆ. ಸಂತರ ಸಭೆಯಿಂದ 2 ಲಕ್ಷ ಕೋಟಿ ರೂಪಾಯಿಂದ 3 ಲಕ್ಷ ಕೋಟಿ ರೂಪಾಯಿ ವರೆಗೆ ಹಣಕಾಸಿನ ವಹಿವಾಟುಗಳಿಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ. ಅಷ್ಟೇ ಅಲ್ಲದೇ ಅಯೋಧ್ಯೆ, ವಾರಣಾಸಿ, ಮಥುರಾ, ವಿಂದ್ಯಾ ವಾಸಿನಿ ಧಾಮ್ ನಂತಹ ಆಧ್ಯಾತ್ಮಿಕ ಕ್ಷೇತ್ರಗಳಿಗೆ ಉತ್ತೇಜನ ನೀಡಲಾಗುತ್ತಿದೆ.
ಇದನ್ನೂ ಓದಿ : ಬಿಪಿಎಲ್ ಕಾರ್ಡುದಾರರಿಗೆ ಬಿಗ್ ರಿಲೀಫ್ : ಜಾರಿಯಾಯ್ತು ಹೊಸ ರೂಲ್ಸ್
ಮಹಾಕುಂಭ 2025 ರ ಸಿದ್ಧತೆಗಳು ಈಗಾಗಲೇ ಸುಮಾರು 45,000 ಕುಟುಂಬಗಳಿಗೆ ಉದ್ಯೋಗವನ್ನು ಒದಗಿಸಿವೆ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆ ತಿಳಿಸಿದೆ. ಆತಿಥ್ಯ, ಸಾರಿಗೆ, ಪ್ರವಾಸೋದ್ಯಮ ಮತ್ತು ಚಿಲ್ಲರೆ ಕ್ಷೇತ್ರಗಳು ಗಣನೀಯವಾಗಿ ಲಾಭ ಪಡೆಯುತ್ತವೆ, ಇದು ಧಾರ್ಮಿಕ ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯ ಸರ್ಕಾರದ ಪ್ರಯತ್ನಗಳನ್ನು ಒತ್ತಿಹೇಳುತ್ತದೆ. ಮಹಾಕುಂಭಕ್ಕೆ ಕ್ಷಣಗಣನೆ ಪ್ರಾರಂಭವಾಗುತ್ತಿದ್ದಂತೆ, ಆಧ್ಯಾತ್ಮಿಕತೆ ಮತ್ತು ಆರ್ಥಿಕ ಅವಕಾಶಗಳ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ಸಿದ್ಧವಾಗಿದೆ. ಅಲ್ಲದೇ, ಪ್ರಯಾಗರಾಜ್ ಅನ್ನು ಜಾಗತಿಕ ಗಮನದ ಕೇಂದ್ರಬಿಂದುವನ್ನಾಗಿ ಮಾಡಲು ಯೋಗಿ ಸಿದ್ಧತೆ ನಡೆಸಿದ್ದಾರೆ.
ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ಮಹಾಕುಂಭ ಮೇಳ 2025ರಲ್ಲಿ ಪಾಲ್ಗೊಳ್ಳುವಂತೆ ಆಹ್ವಾನಿಸಿದ್ದು, ಇದರೊಂದಿಗೆ ಉಪರಾಷ್ಟ್ರಪತಿ ಜಗದೀಪ್ ಧನಕರ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರಿಗೆ ಪ್ರಯಾಗ್ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭ ಮೇಳಕ್ಕೆ ಮುಖ್ಯಮಂತ್ರಿ ಆಹ್ವಾನ ನೀಡಿದ್ದಾರೆ.
ಪ್ರವಾಸೋದ್ಯಮ ಇಲಾಖೆ ಮಹಾಕುಂಭಮೇಳಕ್ಕಾಗಿ ಮಾಡಿಕೊಂಡ ಸಿದ್ಧತೆಗಳ ಬಗ್ಗೆ ಪ್ರಯಾಗ್ ರಾಜ್ ನ ಜಿಲ್ಲಾ ಪ್ರವಾಸೋದ್ಯಮ ಅಧಿಕಾರಿ ಅಪರಾಜಿತಾ ಸಿಂಗ್ ಮಾಹಿತಿ ನೀಡಿದ್ದಾರೆ. “ಕಾರ್ಯಕ್ರಮದ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದ ವೇಳೆ ಪವಿತ್ರ ಸಂಗಮದಲ್ಲಿ ಡ್ರೋನ್ ಪ್ರದರ್ಶನ ನಡೆಯಲಿದೆ ಯೋಗಿ ನೇತೃತ್ವದಲ್ಲಿ ನಡೆಯುತ್ತಿರುವ ಮಹಾಕುಂಭಮೇಳವು ವಿವಾದಗಳಿಂದ ಮುಕ್ತವಾಗಿಲ್ಲ. ಯೋಗಿ ಮಹಾಕುಂಭಮೇಳದ ವ್ಯಾಪಾರ,ವಹಿವಾಟಿನಿಂದ ಮುಸ್ಲಿಂರನ್ನು ದೂರ ಇಟ್ಟಿದ್ದಾರೆ. ಯೋಗಿ ಈ ನಿರ್ಧಾರ ಹಾಗೂ ವರ್ತನೆ ಸಾಕಷ್ಟು ಟೀಕೆಗೆ ಗುರಿಯಾಗಿದೆ. ಮುಸ್ಲಿರ ಸಹಭಾಗಿತ್ವವಿಲ್ಲದೇ ಮಹಾಕುಂಭಮೇಳ ನಡೆಸೋದು ಸರಿಯೇ? ಇದು ಹಿಂದುತ್ವದ ಕಾರ್ಯಕ್ರಮವೇ ಎಂಬೆಲ್ಲ ಪ್ರಶ್ನೆಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿದೆ. ಆದರೆ ಯೋಗಿ ಮಾತ್ರ ಮಹಾಕುಂಭಮೇಳದ ಐತಿಹಾಸಿಕ ಯಶಸ್ಸಿನ ಕಡೆಗೆ ಗಮನ ನೀಡಿದ್ದು ಟೀಕೆಗಳಿಗೆ ಉತ್ತರಿಸುವ ಪ್ರಯತ್ನವನ್ನೂ ಮಾಡಿಲ್ಲ.
mahakumbh 2025 Special Story in Kannada News