ಮಂಗಳವಾರ, ಏಪ್ರಿಲ್ 29, 2025
HomeNationalQatar : ಜನ್ಮ ದಿನದಂದೇ ಶಾಲಾ ಬಸ್​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಬಾಲಕಿ

Qatar : ಜನ್ಮ ದಿನದಂದೇ ಶಾಲಾ ಬಸ್​ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ಬಾಲಕಿ

- Advertisement -

ಕತಾರ್​ :Qatar Malayali girl found dead :ತನ್ನ ಜನ್ಮದಿನದಂದೇ ನಾಲ್ಕು ವರ್ಷದ ಪುಟ್ಟ ಬಾಲಕಿ ಸಾವನ್ನಪ್ಪಿದ ದಾರುಣ ಘಟನೆಯು ಕತಾರ್​ನಲ್ಲಿ ಸಂಭವಿಸಿದೆ. ಬಿಸಿಲಿನ ತಾಪಕ್ಕೆ ತುತ್ತಾಗಿ ಬಾಲಕಿಯು ಶಾಲಾ ಬಸ್​ನಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. ಮೃತಪಟ್ಟ ಬಾಲಕಿಯನ್ನು ಸ್ಪ್ರಿಂಗ್‌ಫೀಲ್ಡ್ ಕಿಂಡರ್‌ಗಾರ್ಟನ್‌ನ ಕೆಜಿ-1 ವಿದ್ಯಾರ್ಥಿನಿ ಮಿಂಜಾ ಮರಿಯಮ್ ಜೇಕಬ್ ಎಂದು ಗುರುತಿಸಲಾಗಿದೆ . ಮೃತ ಬಾಲಕಿ ಮಿಂಜಾ ಮರಿಯಮ್​ ಜೇಕಬ್​​ ಅನಿವಾಸಿ ಭಾರತೀಯ ನಿವಾಸಿಗಳಾದ ಅಭಿಲಾಷ್​​ ಚಾಕೋ ಹಾಗೂ ಸೌಮ್ಯ ದಂಪತಿಯ ಕಿರಿಯ ಪುತ್ರಿ ಎಂದು ತಿಳಿದು ಬಂದಿದೆ.

ಆಗಿದ್ದೇನು ?
ಜನ್ಮದಿನದ ಸಂಭ್ರಮದಲ್ಲಿದ್ದ ನಾಲ್ಕು ವರ್ಷದ ಪುಟಾಣಿ ಬಾಲಕಿ ಮಿಂಜಾ ಮರಿಯಮ್​ ಜೇಕಬ್​ ಶಾಲೆಗೆ ಕೂಡ ತೆರಳಿದ್ದಳು . ಶಾಲಾ ಬಸ್​ ಮೂಲಕ ಶಾಲೆಗೆ ತೆರಳಿದ್ದ ಈಕೆ ಶಾಲೆ ತಲುಪಿದರೂ ಸಹ ಬಸ್​ನಿಂದ ಇಳಿದಿರಲಿಲ್ಲ. ನಿದ್ದೆಗೆ ಜಾರಿದ್ದ ಬಾಲಕಿ ಶಾಲಾ ಬಸ್​ನಲ್ಲಿಯೇ ಮಲಗಿದ್ದಾಳೆ. ಬಸ್​ನ ಸಿಬ್ಬಂದಿ ಕೂಡ ಇದನ್ನು ಗಮನಿಸದೇ ಬಸ್​ಗೆ ಲಾಕ್​ ಹಾಕಿ ತೆರಳಿದ್ದಾರೆ. ಬಸ್​ನ್ನು ಶಾಲಾ ಮೈದಾನದಲ್ಲಿ ನಿಲ್ಲಿಸಲಾಗಿತ್ತು. ಬಿಸಿಲಿನ ಧಗೆ ಹೆಚ್ಚುತ್ತಿದ್ದಂತೆಯೇ ಬಾಲಕಿಗೆ ಎಚ್ಚರವಾಗಿದೆ.

ಬಸ್​ನಿಂದ ಇಳಿಯಲು ಬಾಲಕಿ ಮಿಂಜಾ ಮರಿಯಮ್​ ಯತ್ನಿಸಿದಳಾದರೂ ಡೋರ್​ ಲಾಕ್​ ಆಗಿದ್ದರಿಂದ ಅದರಿಂದ ಹೊರಬರಲು ಸಾಧ್ಯವಾಗಲಿಲ್ಲ. ಅತಿಯಾದ ಬಿಸಿಲಿನಿಂದ ನಿತ್ರಾಣಗೊಂಡಿದ್ದ ಬಾಲಕಿ ಬಸ್​ನಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಮಧ್ಯಾಹ್ನದ ಸುಮಾರಿಗೆ ಬಸ್​ನ ಸಿಬ್ಬಂದಿ ಬಸ್​ನೆಡೆಗೆ ಬಂದು ನೋಡುತ್ತಿದ್ದಂತೆಯೇ ಈ ಪ್ರಕರಣ ಬೆಳಕಿಗೆ ಬಂದಿದೆ. ಕೂಡಲೇ ಈಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ವೈದ್ಯರು ಈಕೆ ಸಾವನ್ನಪ್ಪಿದ್ದಾಳೆ ಎಂದು ಘೋಷಿಸಿದ್ದಾರೆ.

ಬಾಲಕಿ ಬಿಸಿಲಿನ ಧಗೆಯಿಂದಲೇ ಮೃತಪಟ್ಟಿರಬಹುದು ಎನ್ನುವುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ. ಬಾಲಕಿಯ ಸಾವಿಗೆ ನಿಖರವಾದ ಕಾರಣ ಇನ್ನೂ ನಿಗೂಢವಾಗಿಯೇ ಇದೆ. ಕತಾರ್ ಶಿಕ್ಷಣೆ ಇಲಾಖೆಯು ಬಾಲಕಿಯ ಸಾವಿಗೆ ವಿಷಾದ ವ್ಯಕ್ತಪಡಿಸಿದ್ದು ಈ ಸಂಬಂಧ ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದೆ.

ಇದನ್ನು ಓದಿ : Dhoni Factor in Sri Lanka’s Asia Cup Victory: ನಂಬರ್ 7 ‘D’ ಮೋಡಿ.. ಶ್ರೀಲಂಕಾ ಏಷ್ಯಾ ಕಪ್ ಗೆಲುವಿನ ಹಿಂದೆ ಧೋನಿ ಜರ್ಸಿ ನಂಬರ್ ಮೋಡಿ

ಇದನ್ನೂ ಓದಿ : Asia Cup Final : ಪಾಕಿಸ್ತಾನ ಸೋತ ಬೆನ್ನಲ್ಲೇ ಭಾರತದ ಪತ್ರಕರ್ತನ ಫೋನ್ ಕಸಿದುಕೊಂಡ PCB ಚೀಫ್ ರಮೀಜ್ ರಾಜಾ

Malayali girl found dead inside school bus in Qatar

RELATED ARTICLES

Most Popular