ಆಹಾರ ಸೇವನೆ ಮಾಡುವ ವೇಳೆಯಲ್ಲಿ ಎಷ್ಟು ಎಚ್ಚರವಾಗಿದ್ರೂ ಕಡಿಮೆಯೇ. ಸ್ವಲ್ಪ ಎಚ್ಚರ ತಪ್ಪಿದ್ರು ಅನಾಹುತವೇ ನಡೆಯುತ್ತೆ ಅನ್ನೋದಕ್ಕೆ ಈ ಘಟನೆಯೇ ಬೆಸ್ಟ್ ಎಕ್ಸಾಂಪಲ್. ಯಾಕೆಂದ್ರೆ ವ್ಯಕ್ತಿಯೋರ್ವ ದೋಸೆ ತಿನ್ನುವ ವೇಳೆಯಲ್ಲಿ ಮಾಡಿಕೊಂಡ ಸಣ್ಣ ಎಡವಟ್ಟು ಇದೀಗ ಪ್ರಾಣಕ್ಕೆ ಕುತ್ತು ತಂದಿದೆ. ದೋಸೆ ತಿನ್ನುವಾಗ ಉಸಿರುಗಟ್ಟಿ ವ್ಯಕ್ತಿ ಸಾವನ್ನಪ್ಪಿರುವ ಧಾರುಣ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

ನಾಗರ್ ಕರ್ನೂಲ್ ಜಿಲ್ಲೆಯ ಕಲ್ವಕುರ್ತಿಯ ನಿವಾಸಿ ವೆಂಕಟಯ್ಯ (41 ವರ್ಷ) ಎಂಬವರೇ ದೋಸೆ ಸೇವಿಸಿ ಮೃತಪಟ್ಟ ದುರ್ದೈವಿ. ಎಂದಿನಂತೆ ವೆಂಕಟಯ್ಯ ಮದ್ಯಪಾನ ಮಾಡುವ ಚಟವಿತ್ತು. ಎಂದಿನಂತೆಯೇ ಮದ್ಯ ಸೇವನೆ ಮಾಡಿದ ಬಳಿಕ ತನ್ನ ಬಳಿಯಲ್ಲಿದ್ದ ದೋಸೆಯನ್ನು ತಿನ್ನಲು ಮುಂದಾದ. ದೋಸೆ ತಿನ್ನುವ ವೇಳೆಯಲ್ಲಿ ದೋಸೆ ಇದ್ದಕ್ಕಿದ್ದಂತೆಯೇ ಗಂಟಲಿನಲ್ಲಿ ದೋಸೆ ಸಿಲುಕಿಕೊಂಡಿದೆ.
ಇದನ್ನೂ ಓದಿ : Personal Loan : ವೈಯಕ್ತಿಕ ಸಾಲ ಪಡೆಯುವ ಮುನ್ನ EMI ಯಾಕೆ ಲೆಕ್ಕ ಹಾಕಬೇಕು ?
ಇದರಿಂದ ವೆಂಕಟಯ್ಯಗೆ ಉಸಿರುಗಟ್ಟಿದೆ. ಉಸಿರಾಟ ಸಮಸ್ಯೆ ಎದುರಾದ ಸ್ವಲ್ಪ ಸಮಯದಲ್ಲಿಯೇ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಯ್ತು. ಆದರೆ ಆಸ್ಪತ್ರೆಗೆ ದಾಖಲಿಸುವ ಮೊದಲೇ ವೆಂಕಟಯ್ಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ದೋಸೆ ತಿಂದು ಪ್ರಾಣ ಕಳೆದುಕೊಂಡಿರುವ ವೆಂಕಟಯ್ಯ ಕುಟುಂಬಸ್ಥರು ಕಣ್ಣೀರು ಸುರಿಸಿದ್ದಾರೆ. ಸಾಮಾನ್ಯವಾಗಿ ಚಿಕನ್, ಮಟನ್ ಸೇವಿಸುವ ವೇಳೆಯಲ್ಲಿ ಗಂಟಲಲ್ಲಿ ಸಿಲುಕಿಕೊಳ್ಳುವುದು ಮಾಮೂಲು. ಜೊತೆಗೆ ಇಡ್ಲಿ, ದೋಸೆ ಸೇವನೆ ಮಾಡುವಾಗ ಚಟ್ನಿ ಅಥವಾ ಸಾಂಬಾರ್ ಬಳಸದೇ ಇದ್ದಾಗ ಉಸಿರುಗಟ್ಟುವ ಸಾಧ್ಯತೆ ಇರುತ್ತೆ.

ಕೇರಳದಲ್ಲಿ ನಡೆದ ಆಹಾರ ಸ್ಪರ್ಧೆಯಲ್ಲಿ ಇಡ್ನಿ ತಿನ್ನುವ ವೇಳೆ ಗಂಟಲಿನಲ್ಲಿ ಸಿಲುಕಿಕೊಂಡು ವ್ಯಕ್ತಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಇದೀಗ ದೋಸೆಯ ಸರದಿ. ಸಾಮಾನ್ಯವಾಗಿ ಅಗತ್ಯಕ್ಕಿಂತ ಹೆಚ್ಚಿನ ಆಹಾರವನ್ನು ವೇಗವಾಗಿ ತಿನ್ನಲು ಯತ್ನಿಸಿದ ವೇಳೆಯಲ್ಲಿ ಇಂತಹ ಘಟನೆಗಳು ನಡೆಯುವುದು ಸಾಮಾನ್ಯ. ಜೊತೆಗೆ ಯಾವುದೇ ಆಹಾರವನ್ನು ಸೇವನೆ ಮಾಡುವ ವೇಳೆಯಲ್ಲಿ ಮಾತನಾಡುವುದರಿಂದಲೂ ಇಂತಹ ಘಟನೆಗಳು ನಡೆಯುತ್ತವೆ.
ಇದನ್ನೂ ಓದಿ : BPL Card Holders Alert : ಬಿಪಿಎಲ್ ಕಾರ್ಡ್‌ದಾರರಿಗೆ ಗುಡ್‌ನ್ಯೂಸ್
ಆಹಾರ ಸೇವಿಸುವ ವೇಳೆಯಲ್ಲಿ ಶ್ವಾಸನಾಳ ಮುಚ್ಚಿಕೊಳ್ಳುತ್ತದೆ. ಈ ವೇಳೆಯಲ್ಲಿ ಮಾತನಾಡುವುದರಿಂದ ಆಹಾರ ಬಾಯಲ್ಲಿ ಇರುವುದರಿಂದ ಆಮ್ಲಜನಕ ಕೊರತೆ ಉಂಟಾಗಿ ಅಪಾಯ ಎದುರಾಗುವ ಸಾಧ್ಯತೆಯಿದೆ. ನೀವೂ ಆಹಾರ ಸೇವನೆ ಮಾಡುವ ವೇಳೆಯಲ್ಲಿ ಎಚ್ಚರವಾಗಿ ಇರುವುದು ಒಳಿತು.
Man dies after getting stuck in throat while eating dosa in Kurnool