ಚೆನ್ನೈ: ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ಗೆಲುವು ಸಾಧಿಸಿದ್ರೆ ತಾನು ಪ್ರಾಣ ತ್ಯಾಗ ಮಾಡುವುದಾಗಿ ವ್ಯಕ್ತಿಯೋರ್ವ ಹರಿಕೆ ಹೊತ್ತಿದ್ದ. ಇದೀಗ ಡಿಎಂಕೆ ಗೆಲುವು ಸಾಧಿಸುತ್ತಲೇ ದೇವಸ್ಥಾನದ ಮುಂಭಾಗದಲ್ಲಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕರೂರು ಜಿಲ್ಲೆಯಲ್ಲಿ ನಡೆದಿದೆ.

ಉಲಗನಾಥನ್ (60 ವರ್ಷ) ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಸರಕಾರಿ ಉದ್ಯೋಗದಲ್ಲಿದ್ದ ಉಲಗನಾಥನ್ ಇತ್ತೀಚಿಗಷ್ಟೇ ಸೇವೆಯಿಂದ ನಿವೃತ್ತರಾಗಿದ್ದರು. ಕಳೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಅಧಿಕಾರಕ್ಕೆ ಬರಬೇಕು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದರು. ಅಲ್ಲದೇ ಡಿಎಂಕೆ ಗೆಲುವು ಸಾಧಿಸಿದ್ರೆ ತನ್ನನ್ನು ತ್ಯಾಗ ಮಾಡುವುದಾಗಿಯೂ ಹರಿಕೆ ಹೊತ್ತುಕೊಂಡಿದ್ದರು. ಇದೀಗ ತನ್ನ ಹರಿಕೆ ಈಡೇರಿದ್ದರಿಂದಾಗಿ ಈ ಕೃತ್ಯವೆಸಗಿದ್ದಾನೆ.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಉಲಗನಾಥನ್ ಡೆತ್ ನೋಟ್ ಬರೆದಿಟ್ಟಿದ್ದು, ಪತ್ರದಲ್ಲಿ ಡಿಎಂಕೆ ನಾಯಕ ಸೆಂಥಿಲ್ ಬಾಲಾಜಿ ಅವರ ಗೆಲುವಿಗೆ ಪ್ರಾರ್ಥನೆ ಮಾಡಿ ಡಿಕೆಎಂ ಅಧಿಕಾರಕ್ಕೆ ಬರುವ ಸಲುವಾಗಿ ಹರಿಕೆ ಹೊತ್ತುಕೊಂಡಿದ್ದೇನೆ. ಅನ್ನು ತೀರಿಸುತ್ತಿದ್ದೇನೆ ಅಂತಾ ಬರೆಯಲಾಗಿದೆ.