ಶನಿವಾರ, ಏಪ್ರಿಲ್ 26, 2025
HomeCrimeಯುಗಾದಿ ದಿನವೇ ಚಿನ್ನದ ವ್ಯಾಪಾರಿ ಕುಟುಂಬ ಸಾಮೂಹಿಕ ಆತ್ಮಹತ್ಯೆ : ಸೈನೆಡ್‌ ಬಾಟಲಿ ಪತ್ತೆ

ಯುಗಾದಿ ದಿನವೇ ಚಿನ್ನದ ವ್ಯಾಪಾರಿ ಕುಟುಂಬ ಸಾಮೂಹಿಕ ಆತ್ಮಹತ್ಯೆ : ಸೈನೆಡ್‌ ಬಾಟಲಿ ಪತ್ತೆ

ಚಿನ್ನದ ಕೆಲಸಕ್ಕಾಗಿ ಸೈನೈಡ್‌ ಬಳಕೆ ಮಾಡುತ್ತಿದ್ದ ಕುಟುಂಬ ಸೈನೈಡ್‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎನ್ನಲಾಗುತ್ತಿದೆ. ಶನಿವಾರ ರಾತ್ರಿಯೇ ಇಡೀ ಕುಟುಂಬ ವಿಷ ಸೇವನೆ ಮಾಡಿರಬಹುದು.

- Advertisement -

gold merchant Mass suicide : ಹೈದ್ರಾಬಾದ್‌: ಯುಗಾದಿ ಹಬ್ಬದ ದಿನದಂದೇ ಚಿನ್ನದ ವ್ಯಾಪಾರಿ ತನ್ನ ಪತ್ನಿ ಮತ್ತು ಇಬ್ಬರು ಪುತ್ರರ ಜೊತೆಗೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶ (Andra Pradesh) ದ ಶ್ರೀ ಸತ್ಯಸಾಯಿ ಜಿಲ್ಲೆಯಲ್ಲಿ ನಡೆದಿದೆ. ಘಟನಾ ಸ್ಥಳದಲ್ಲಿ ಸೈನೆಡ್‌ ಬಾಟಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಚಿನ್ನದ ಅಂಗಡಿ ಮಾಲೀಕ ಮತ್ತು ಅವರ ಮೂವರು ಕುಟುಂಬ ಸದಸ್ಯರು ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಮಡಕಸಿರಾದ ಗಾಂಧಿ ಬಜಾರ್ ಪ್ರದೇಶದ ಚಿನ್ನದ ಅಂಗಡಿ ಮಾಲೀಕ ಕೃಷ್ಣ ಚಾರಿ (55), ಅವರ ಪತ್ನಿ ಸರಳಾ ಮತ್ತು ಅವರ ಇಬ್ಬರು ಪುತ್ರರಾದ ಸಂತೋಷ್ ಮತ್ತು ಭುವನೇಶ್ ಎಂದು ಗುರುತಿಸಲಾಗಿದೆ.

ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಮೃತ ಚಿನ್ನದ ವ್ಯಾಪಾರಿ ಕೃಷ್ಣಾಚಾರಿ ಅವರ ಮಕ್ಕಳಾದ ಸಂತೋಷ್‌ 10 ನೇ ತರಗತಿಯಲ್ಲಿ ಮತ್ತು ಭುವನೇಶ್ 6 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ಆರ್ಥಿಕ ಸಂಕಷ್ಟದಿಂದಲೇ ಕುಟುಂಬ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡಿದೆ ಎಂದು ಶಂಕಿಸಲಾಗುತ್ತಿದೆ.

Also Read : ಬಿಎಸ್‌ಎನ್‌ಎಲ್‌ ಗ್ರಾಹಕರಿಗೆ ಭರ್ಜರಿ ಸಿಹಿ ಸುದ್ದಿ, ಈ ನಗರಗಳಲ್ಲಿ ಸಿಗಲಿದೆ BSNL 5G

ಚಿನ್ನದ ಕೆಲಸಕ್ಕಾಗಿ ಸೈನೈಡ್‌ ಬಳಕೆ ಮಾಡುತ್ತಿದ್ದ ಕುಟುಂಬ ಸೈನೈಡ್‌ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎನ್ನಲಾಗುತ್ತಿದೆ. ಶನಿವಾರ ರಾತ್ರಿಯೇ ಇಡೀ ಕುಟುಂಬ ವಿಷ ಸೇವನೆ ಮಾಡಿರಬಹುದು. ಮನೆಯಲ್ಲಿ ಸೈನೈಡ್‌ ಬಾಟಲಿ ಪತ್ತೆಯಾಗಿದೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿರಬಹುದು ಎನ್ನಲಾಗುತ್ತಿದೆ. ಆದರೆ ಚಿನ್ನಾಭರಣ ವ್ಯಾಪಾರಿಯ ಸಾಮೂಹಿಕ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಇನ್ನು ಆಂಧ್ರಪ್ರದೇಶದಲ್ಲಿ ಈ ಹಿಂದೆ ಕೂಡ ಇಂತಹದ್ದೇ ಘಟನೆಯೊಂದು ನಡೆದಿದ್ದು, ಡಿಸೆಂಬರ್ 2024 ರ ಕೊನೆಯ ವಾರದಲ್ಲಿ, ವೈಎಸ್ಆರ್ ಜಿಲ್ಲೆಯ ದಿಡ್ಡೆಕುಂಟ ಗ್ರಾಮದಲ್ಲಿ 41 ವರ್ಷದ ರೈತ ನಾಗೇಂದ್ರ, ಅವರ ಪತ್ನಿ ವಾಣಿ ಮತ್ತು ಇಬ್ಬರು ಮಕ್ಕಳಾದ ಗಾಯತ್ರಿ ಮತ್ತು ಭಾರ್ಗವ್ ಮೃತಪಟ್ಟಿರುವುದು ಪತ್ತೆಯಾಗಿತ್ತು.

ರೈತ 10 ಎಕರೆ ಗುತ್ತಿಗೆ ಭೂಮಿಯಲ್ಲಿ ಸಿಹಿ ಕಿತ್ತಳೆ ತೋಟ ಬೆಳೆಸಲು ಬಡ್ಡಿದಾರರಿಂದ ₹20 ಲಕ್ಷ ಸಾಲ ಪಡೆದಿರುವುದು ವಿಚಾರಣೆಯಲ್ಲಿ ತಿಳಿದುಬಂದಿದೆ. ಆದರೆ, ಇಳುವರಿಗೆ ಯಾವುದೇ ಪ್ರತಿಫಲ ಸಿಗಲಿಲ್ಲ. ಶುಕ್ರವಾರ ತಡರಾತ್ರಿ, ಅವರು ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ತಮ್ಮ ಹೊಲಗಳಿಗೆ ಕರೆದುಕೊಂಡು ಹೋದರು, ಅಲ್ಲಿ ಅವರು ಈ ಹೆಜ್ಜೆ ಇಟ್ಟರು,” ಎಂದು ಪೊಲೀಸ್ ಅಧಿಕಾರಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Also Read : Nandini Milk Price Hike : ನಂದಿನಿ ಹಾಲಿನ ದರ 4ರೂ. ಏರಿಕೆ ಬೆನ್ನಲ್ಲೇ ವಿದ್ಯುತ್‌ ಶಾಕ್‌ …!

ಸಿಂಹಾದ್ರಿಪುರಂ ಪೊಲೀಸರ ಪ್ರಾಥಮಿಕ ತನಿಖೆಯು ಕಳೆದ 8 ವರ್ಷಗಳಿಂದ ನಾಗೇಂದ್ರಗೆ ಸತತ ನಷ್ಟವಾಗಿದೆ ಎಂದು ಸೂಚಿಸಿದೆ ಮತ್ತು ಇದು ಅವರ ಸಾಲಕ್ಕೆ ಕಾರಣವಾಗಿದೆ. ಅವರ ಸಾಲಗಳು ₹20 ಲಕ್ಷಕ್ಕೆ ಏರಿತು ಮತ್ತು ಲೇವಾದೇವಿದಾರರು ನಾಗೇಂದ್ರ ಅವರಿಗೆ ಒತ್ತಡ ಹೇರಿದ್ದರು. ಇದೇ ಕಾರಣದಿಂದಲೇ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ.

gold merchant Mass suicide : Mass suicide of gold merchant family in Andra Pradesh on Ugadi day Kannada News

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular