ತಿರುವನಂತಪುರಂ: (Milk Price Kerala) ಕರ್ನಾಟಕ ರಾಜ್ಯ ಸರಕಾರ ಹಾಲಿನ ದರ ಏರಿಕೆ ಮಾಡಿದ ಬೆನ್ನಲ್ಲೇ, ಕೇರಳ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಮಿಲ್ಮಾ ಹಾಲಿನ ದರ ಏರಿಕೆಗೆ ಮುಂದಾಗಿದೆ. ಡಿಸೆಂಬರ್ 1 ರಿಂದಲೇ ಜಾರಿಗೆ ಬರುವಂತೆ ಪ್ರತೀ ಲೀಟರ್ ಹಾಲಿನ ದರದಲ್ಲಿ 6 ರೂಪಾಯಿ ಏರಿಕೆ ಮಾಡುವುದಾಗಿ ಘೋಷಿಸಿದೆ.
Milk Price Kerala : ಯಾವ ಹಾಲಿಗೆ ಎಷ್ಟು ದರ ?
ಮಿಲ್ಮಾ ಹೋಮೊಜೆನೈಸ್ಡ್ ಟೋನ್ಡ್ ಮಿಲ್ಕ್ ರೂ 46/ಲೀ ನಿಂದ 52/ಲೀ
ಮಿಲ್ಮಾ ಸ್ಟ್ಯಾಂಡರ್ಡ್ ಹೋಮೊಜೆನೈಸ್ಡ್ ಹಾಲು ರೂ 50/ಲೀ ನಿಂದ ರೂ 56/ಲೀ
ಮಿಲ್ಮಾ ಸ್ಮಾರ್ಟ್ ಮಿಲ್ಕ್ ರೂ 44/ಲೀ ನಿಂದ ರೂ.50/ಲೀ
ಮಿಲ್ಮಾ ಶ್ರೀಮಂತ ಹಾಲು ರೂ 52/ಲೀ ನಿಂದ ರೂ 58/ಲೀ
ಕೇರಳದಲ್ಲಿ 2019 ರಲ್ಲಿ ಮಿಲ್ಮಾ ಪ್ರತಿ ಲೀಟರ್‌ಗೆ 4 ರೂ. ಹೆಚ್ಚಳ ಮಾಡಿತ್ತು. ಇದೀಗ ಬರೋಬ್ಬರಿ ಮೂರು ವರ್ಷಗಳ ನಂತರ ಮತ್ತೊಮ್ಮೆ ಮಿಲ್ಮಾ ಹಾಲಿನ ದರ ಏರಿಕೆಗೆ ಮುಂದಾಗಿದೆ. ಈ ಹಿಂದೆ ಹಾಲಿನ ದರ ಏರಿಕೆ ಮಾಡಿದ ಸಂದರ್ಭದಲ್ಲಿ 3.35ರೂ. ಹಣವನ್ನು ರಥತರಿಗೆ ನೀಡಿತ್ತು. ಈ ಬಾರಿಯೂ ಹಾಲಿನ ದರದಲ್ಲಿ 6 ರೂ. ಏರಿಕೆಯಾಗಲಿದ್ದು, 5.025 ರೂ. ರೈತನ ಕೈ ಸೇರಲಿದೆ ಎಂದು ಮಿಲ್ಮಾ ಫೆಡರೇಶನ್ ಅಧ್ಯಕ್ಷ ಕೆ.ಎಸ್. ಮಣಿ ತಿಳಿಸಿದ್ದಾರೆ.
ರಾಜ್ಯದ ಪಶುವೈದ್ಯಕೀಯ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳ ತಜ್ಞರನ್ನು ಒಳಗೊಂಡ ಮಿಲ್ಮಾ ನೇಮಿಸಿದ ಸಮಿತಿಯು ಹೈನುಗಾರರಿಗೆ ತಗಲುವ ವೆಚ್ಚಗಳ ಕುರಿತು ಅಧ್ಯಯನ ನಡೆಸಿದ ನಂತರ ಇತ್ತೀಚಿನ ನಿರ್ಧಾರಕ್ಕೆ ಬಂದಿದೆ. ಕಳೆದ ವಾರ ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ರೈತರು ಪ್ರತಿ ಲೀಟರ್ ಹಾಲಿಗೆ ಅಂದಾಜು 8.57 ರೂಪಾಯಿ ನಷ್ಟ ಅನುಭವಿಸುತ್ತಿದೆ ಎಂದು ಸಮೀತಿ ಹೇಳಿದೆ.
ಇದನ್ನೂ ಓದಿ : Suicide Case in railway track: ರೈಲ್ವೇ ಹಳಿಯಲ್ಲಿ ಪ್ರೇಮಿಗಳ ಮೃತದೇಹ ಪತ್ತೆ
Milk Price Kerala rs 6 Hike for liter from December 1