ಸೋಮವಾರ, ಏಪ್ರಿಲ್ 28, 2025
HomeNationalAnsi Kabeer - Anjana Shajan : ಮಿಸ್‌ ಕೇರಳ ಸಾವಿನ ರಹಸ್ಯ ಬಯಲು :...

Ansi Kabeer – Anjana Shajan : ಮಿಸ್‌ ಕೇರಳ ಸಾವಿನ ರಹಸ್ಯ ಬಯಲು : ಆಡಿ ಕಾರು ಅಪಘಾತಕ್ಕೆ ಕಾರಣವಾಗಿದ್ದೇನು ?

- Advertisement -

ಕೊಚ್ಚಿ : ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಮಿಸ್‌ ಕೇರಳ (Miss Kerala) ಅನ್ಸಿ ಕಬೀರ್‌ (Ansi Kabeer ), ಅಂಜನಾ ಶಾಜಾನ್‌ (Anjana Shajan) ಸೇರಿ ಮೂರು ಮಂದಿ ಆಡಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಸಾವಿನ ಪ್ರಕರಣ ಕೇರಳದಾದ್ಯಂತ ಸಂಚಲನ ಮೂಡಿಸಿತ್ತು. ಐಶಾರಾಮಿ ಆಡಿ ಕಾರು ಅಪಘಾತದ ಕುರಿತು ತನಿಖೆಯನ್ನು ಕೈಗೆತ್ತಿಕೊಂಡಿದ್ದ ಕೇರಳ ಪೊಲೀಸರು ಕೊನೆಗೂ ಕಾರು ( Audi Car Accident ) ಅಪಘಾತದ ಹಿಂದಿನ ರಹಸ್ಯವನ್ನು ಬಯಲು ಮಾಡಿದ್ದಾರೆ.

ಮಿಸ್‌ ಕೇರಳ ಅನ್ಸಿ ಕಬೀರ್‌ ತನ್ನ ಸ್ನೇಹಿತರ ಜೊತೆಯಲ್ಲಿ ರಾತ್ರಿ ಬೈಪಾಸ್‌ನಲ್ಲಿ ಪಾರ್ಟಿ ಮುಗಿಸಿ ಮತ್ತಂಚೇರಿ ಹೊಟೇಲ್‌ನಿಂದ ಹಿಂತಿರುಗುತ್ತಿದ್ದಾಗ ಸಂಚರಿಸುತ್ತಿದ್ದ ಆಡಿ ಕಾರು ಅಪಘಾತಕ್ಕೆ ಒಳಗಾಗಿತ್ತು. ಅತ್ತಿಂಗಲ್ ಮೂಲದ ಅನ್ಸಿ ಕಬೀರ್, 2019 ರ ಸುಂದರಿ ಮತ್ತು ಮಿಸ್ ಕೇರಳ ರನ್ನರ್ ಅಪ್, ಕೆಎ ಮೊಹಮ್ಮದ್ ಆಶಿಕ್ ಅವರ ಸ್ನೇಹಿತೆ ಅಂಜನಾ ಶಾಜನ್ ಸಾವನ್ನಪ್ಪಿದ್ದರು. ಆದರೆ ಚಾಲಕ ಅಬ್ದುಲ್‌ ರೆಹಮಾನ್‌ ಅಪಾಯದಿಂದ ಪಾರಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರದಲ್ಲಿ ಅಬ್ದುಲ್‌ ರೆಹಮಾನ್‌ ಅಪಘಾತದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

ಆಡಿ ಕಾರು ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಎಡಪ್ಪಲ್ಲಿ ತಲುಪಿದ ನಂತರದಲ್ಲಿ ಕಾರು ವಾಪಾಸಾಗಿತ್ತು. ಅಲ್ಲದೇ ಅನ್ಸಿ ಕಬೀರ್‌ ಅವರ ಸ್ನೇಹಿತ ಜಾಯ್‌ ಕಾರಿನಿಂದ ಇಳಿಯುತ್ತಿರುವ ದೃಶ್ಯ ಸೆರೆಯಾಗಿತ್ತು. ಅತೀ ವೇಗದಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಕುಡಿದ ಅಮಲಿನಲ್ಲಿ ಅತಿವೇಗದ ಚಾಲನೆ ಆದರೆ ಸೀಟ್ ಬೆಲ್ಟ್ ಬಳಸದ ಕಾರಣಕ್ಕೆ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

Miss Kerala Ansi Kabir and runner-up Anjana Shajan
ಭೀಕರ ಅಪಘಾತಕ್ಕೆ ಮಿಸ್‌ ಕೇರಳ ಅನ್ಸಿ ಕಬೀರ್‌ ಮತ್ತು ರನ್ನರ್‌ ಅಪ್‌ ಅಂಜಾನಾ ಶಾಜನ್‌ ಬಲಿ

ಇದನ್ನೂ ಓದಿ : 2 Models death : ಭೀಕರ ಅಪಘಾತಕ್ಕೆ ಮಿಸ್‌ ಕೇರಳ ಅನ್ಸಿ ಕಬೀರ್‌ ಮತ್ತು ರನ್ನರ್‌ ಅಪ್‌ ಅಂಜಾನಾ ಶಾಜನ್‌ ಬಲಿ

ಇದನ್ನೂ ಓದಿ : ದುಬೈ ಈಜುಕೊಳದಲ್ಲಿ ಶ್ರೀಲಂಕಾ ಸುಂದರಿ : ಜಾಕ್ವಲಿನ್ ಹಾಟ್ ಪೋಟೋಗೆ ಮರುಳಾದ ಫ್ಯಾನ್ಸ್

ಇದನ್ನೂ ಓದಿ : ಖಾಸಗಿ ವಿಡಿಯೋ ಪೋಸ್ಟ್‌ : ಖ್ಯಾತ ನಟಿ ಹಾಗೂ ಸ್ನೇಹಿತ ಅರೆಸ್ಟ್‌

ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರು ಚಾಲಕ ಅಬ್ದುಲ್‌ ರೆಹಮಾನ್‌ ನ್ಯಾಯಾಂಗ ಬಂಧನದಲ್ಲಿದ್ದು, ಪಲರಿವಟ್ಟಂ ಮೆಡಿಕಲ್‌ ಸೆಂಟರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಾರು ಚಾಲಕ ಆರಂಭದಲ್ಲಿ ಪ್ರಕರಣದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಪ್ರಯತ್ನಿಸಿದ್ದಾನೆ ಅನ್ನೋ ಆರೋಪ ಕೇಳಿಬಂದಿದೆ.

( miss kerala Ansi Kabeer and Anjana Shajan Death Secret Revel, Audi Car Accident)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular