ಮಂಗಳೂರು : ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇರಳದ ಸರಕಾರದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನಿಕಾರಿಸಿರುವುದು ಭಾರೀ ವಿವಾದವನ್ನು ಹುಟ್ಟುಹಾಕಿದೆ. ಕೇಂದ್ರ ಸರಕಾರದ ವಿರುದ್ದ ಕೇರಳ, ಕರ್ನಾಟಕದಲ್ಲೀಗ ಆಕ್ರೋಶ ವ್ಯಕ್ತವಾಗುತ್ತಿದೆ. ಆದ್ರೆ ನಾರಾಯಣ ಗುರುಗಳ ( Narayana guru tableau ) ಸ್ತಬ್ಧಚಿತ್ರದ ವಿವಾದದ ಬೆನ್ನಲ್ಲೇ ಕೇರಳ ಸರಕಾರದ ವಿರುದ್ದ ಗಂಭೀರ ಆರೋಪ ಕೇಳಿಬಂದಿದೆ. ಅದ್ರಲ್ಲೂ ಕೇರಳ ಸರಕಾರ ಸ್ತಬ್ಧಚಿತ್ರ ತಿರಸ್ಕಾರವಾಗುವ ಸಲುವಾಗಿಯೇ ನಿಯಮವನ್ನು ಗಾಳಿಗೆ ತೂರಿದೆ ಎಂಬ ಮಾತು ಕೇಳಿಬರುತ್ತಿದೆ.
ಗಣರಾಜ್ಯೋತ್ಸವಕ್ಕೆ ನಾರಾಯಣ ಗುರು ಸ್ತಬ್ಧಚಿತ್ರ ವಿವಾದ ಈಗ ತಾರಕಕ್ಕೇರಿದೆ. ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ನಾರಾಯಣಗುರು ಸಬ್ದ ಚಿತ್ರವನ್ನು ತಿರಸ್ಕರಿಸಿದೆ ಎಂದು ಕೇರಳದ ಕಮ್ಯುನಿಸ್ಟ್ ಪಕ್ಷ ಆರೋಪಿಸಿದೆ. ಆದರೆ ಸತ್ಯ ನಿಧಾನವಾಗಿ ಹೊರಬರುತ್ತಿದೆ ಎನ್ನಲಾಗುತ್ತಿದೆ. ನಾರಾಯಣ ಗುರು ಸ್ತಬ್ಧಚಿತ್ರ ತಿರಸ್ಕಾರ ಆಗಬೇಕು ಎಂಬ ಉದ್ದೇಶದಿಂದ ಕೇರಳ ಸರ್ಕಾರ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತ್ತು ಎನ್ನಲಾಗುತ್ತಿದೆ. ಕೇರಳ ಸರಕಾರ ಕಳುಹಿಸಿದ್ದ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದು, ಮತ್ತೆ ಪ್ರಸ್ತಾವನೆಯನ್ನು ಸರಿ ಮಾಡಿ ಕಳುಹಿಸುವಂತೆ ಹೇಳಿತ್ತು. ಆದರೆ ಕೇರಳ ಸರಕಾರ ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಸ್ತಬ್ಧಚಿತ್ರ ತಿರಸ್ಕಾರವಾಗಲೆಂದು ಉದ್ದೇಶ ಪೂರ್ವಕವಾಗಿ ನಡೆದುಕೊಂಡಿದೆ ಅನ್ನೋದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
ಕೇಂದ್ರ ಸರಕಾರ ಈ ಹಿಂದೆ ಮೂರು ಕೇರಳ ಸರಕಾರಕ್ಕೆ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಿತ್ತು. ಈ ಬಾರಿಯೂ ಮತ್ತೆ ಕೇರಳ ಸರಕಾರ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ಕಲ್ಪಿಸಿತ್ತು. ವಿವಾದ ಹುಟ್ಟುಹಾಕುವ ಸಲುವಾಗಿಯೇ ಕೇರಳ ಸರಕಾರ ನಿಯಮಾವಳಿಯನ್ನು ಗಾಳಿಗೆ ತೂರಿದೆ ಎನ್ನಲಾಗುತ್ತಿದೆ. ಸಮಾಜ ಸುಧಾರಕ, ಜಾತೀಯತೆಯ ಕ್ರಾಂತಿ ಮೊಳಗಿಸಿದ್ದ ನಾರಾಯಣ ಗುರುಗಳ ಹೆಸರನ್ನು ಇದೀಗ ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ನಿಜಕ್ಕೂ ದುರಂತವೇ ಸರಿ.
ಸ್ತಬ್ಧಚಿತ್ರ ತಿರಸ್ಕಾರ ವಿವಾದ ಕುರಿತು ಸ್ಪಷ್ಟನೆ ಕೊಟ್ಟ ಕೇಂದ್ರ ಸರಕಾರ
ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಪಾಲ್ಗೊಳ್ಳುವ ಸ್ತಬ್ಧಚಿತ್ರಗಳಿಗೆ ಅವಕಾಶ ನೀಡುವ ವಿಚಾರದಲ್ಲಿ ಕೇರಳ, ತಮಿಳುನಾಡು ಹಾಗೂ ಪಶ್ವಿಮ ಬಂಗಾಳದಲ್ಲಿ ವಿವಾದ ತಲೆದೋರಿದೆ. ಮೂರು ರಾಜ್ಯಗಳ ಸ್ತಬ್ದಚಿತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರೇ ತಿರಸ್ಕಾರ ಮಾಡಿದ್ದಾರೆ ಅನ್ನೋ ರೀತಿಯಲ್ಲಿಯೂ ಬಿಂಬಿಸಲಾಗಿತ್ತು. ಆದರೆ ವಾಸ್ತವವಾಗಿ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಯಾವ ಸ್ತಬ್ಧಚಿತ್ರ ಭಾಗಿಯಾಗಬೇಕು ಅಂತಾ ನಿರ್ಧಾರ ಮಾಡುವುದು ಕೇಂದ್ರ ಸರಕಾರವಲ್ಲ ಬದಲಾಗಿ ತಜ್ಞರ ಸಮಿತಿ.
ಈ ಬಾರಿ ಕೇರಳ ಸರಕಾರ ನಾರಾಯಣಗುರು, ಪಶ್ಚಿಮ ಬಂಗಾಳ ಸುಭಾಷ್ ಚಂದ್ರಬೋಸ್ ಸ್ತಬ್ಧಚಿತ್ರಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿತ್ತು. ಆದರೆ ಕೇಂದ್ರ ಸರಕಾರ ಇದನ್ನು ತಿರಸ್ಕರಿಸಿದೆ ಎಂಬ ಆರೋಪ ಕೇಳಿಬಂಇದೆ. ಆದರೆ ಈ ಬಾರಿಯ ಗಣರಾಜ್ಯೋತ್ಸವ ಪೆರೇಡ್ ನಲ್ಲಿ ಭಾಗಿಯಾಗುಲು ಸುಮಾರು 56 ಸ್ತಬ್ಧಚಿತ್ರಗಳ ಮನವಿ ಬಂದಿತ್ತು. ಈ ಪೈಕಿ ತಜ್ಞರ ಸಮಿತಿ 21 ಮನವಿಗಳನ್ನು ಪುರಸ್ಕರಿಸಿದೆ. ಪ್ರಮುಖವಾಗಿ ಮಾನದಂಡಗಳ ಆಧಾರದಲ್ಲಿಯೇ ತಿರಸ್ಕಾರ ಮಾಡಲಾಗಿದೆ. ದೇಶದಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದ ನಂತರದಲ್ಲಿಯೇ 2018 ಮತ್ತು 2021ರಲ್ಲಿ ಕೇರಳ ಸರಕಾರದ ಸ್ತಬ್ಧಚಿತ್ರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಕೇಂದ್ರ ಸರಕಾರ ಈ ವಿಚಾರವಾಗಿ ಯಾವುದೇ ತಾರತಮ್ಯವನ್ನು ಮಾಡುತ್ತಿಲ್ಲ ಎಂದು ಕೇಂದ್ರ ಸರಕಾರ ಹೇಳಿದೆ. ಕೇವಲ ಕೇರಳ ಸರಕಾರಕ್ಕಷ್ಟೇ ಅಲ್ಲಾ ಪಶ್ವಿಮ ಬಂಗಾಲ ಸರಕಾರ 2016ರಿಂದ ನಾಲ್ಕು ಬಾರಿ ಹಾಗೂ ತಮಿಳುನಾಡು ಸರಕಾರ 2018 ರಿಂದ ಐದು ಬಾರಿ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಸ್ತಬ್ದಚಿತ್ರ ಪ್ರದರ್ಶನಕ್ಕೆ ಅವಕಾಶವನ್ನು ಕೇಂದ್ರ ಸರಕಾರ ಅವಕಾಶವನ್ನು ನೀಡಿದೆ.
ಇದನ್ನೂ ಓದಿ : ಬುಧನ ವಕ್ರಗತಿಯ ಚಲನೆ ಆರಂಭ; ಸಂವಹನ-ಸಂವಾದಗಳಲ್ಲಿ ಎಚ್ಚರಿಕೆ ಅತ್ಯಗತ್ಯ – ಸಂಪರ್ಕ ಸಾಧನಗಳೂ ತೊಂದರೆ ಕೊಡಬಹುದು
ಇದನ್ನೂ ಓದಿ : ಟೆಸ್ಟಿಂಗ್ ಹೆಚ್ಚಳವೂ ಇಲ್ಲ: ಸದ್ಯ ನಿಯಮದಲ್ಲಿ ಸಡಿಲಿಕೆಯೂ ಇಲ್ಲ: ಇಲ್ಲಿದೆ ಸಿಎಂ ಮೀಟಿಂಗ್ ಹೈಲೈಟ್ಸ್
(Narayana guru tableau controversy clarification central Government, Kerala government violated the rule)