ಭಾನುವಾರ, ಏಪ್ರಿಲ್ 27, 2025
HomeNationalಗಂಗಾ ಶುದ್ಧೀಕರಣ : ವಿಶ್ವವಿದ್ಯಾನಿಲಯಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರೀಯ ಮಿಷನ್ 49

ಗಂಗಾ ಶುದ್ಧೀಕರಣ : ವಿಶ್ವವಿದ್ಯಾನಿಲಯಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರೀಯ ಮಿಷನ್ 49

- Advertisement -

ನವದೆಹಲಿ : (National Mission 49) ಜಲ ಸಂರಕ್ಷಣೆ ಮತ್ತು ನದಿ ಪುನರುಜ್ಜೀವನದತ್ತ ಯುವಕರನ್ನು ಉತ್ತೇಜಿಸಲು ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ 49 ವಿಶ್ವವಿದ್ಯಾನಿಲಯಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಜಲಶಕ್ತಿ ಸಚಿವಾಲಯದ ಹೇಳಿಕೆ ತಿಳಿಸಿದೆ. ತಿಳುವಳಿಕೆಯ ಜ್ಞಾಪಕ ಪತ್ರವು ನದಿಗಳ ಸುಸ್ಥಿರ ಪರಿಸರ ವ್ಯವಸ್ಥೆಯನ್ನು ರಚಿಸುವಲ್ಲಿ ವಿದ್ಯಾರ್ಥಿಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ.

ಧಾನ ಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಒಂದಾಗಿರುವ ಗಂಗಾ ನದಿ ಶುದ್ಧೀಕರಣಕ್ಕೆ ರಾಷ್ಟ್ರೀಯ ಮಿಷನ್ 49 ಜೊತೆಗೆ ವಿಶ್ವವಿದ್ಯಾನಿಲಯಗಳು ಸಹಭಾಗಿತ್ವವನ್ನು ವಹಿಸಿಕೊಂಡಿದೆ. ನ್ಯಾಷನಲ್​ ಮಿಷನ್ ಫಾರ್​ ಕ್ಲೀನಿಂಗ್ ಗಂಗಾ, ವಿಶ್ವವಿದ್ಯಾನಿಲಯಗಳ ಜೊತೆಗಿನ ಈ ಸಹಯೋಗದಿಂದಾಗಿ ವಿದ್ಯಾರ್ಥಿಗಳು ಹಾಗೂ ಜನಸಾಮನ್ಯರಿಗೂ ತಲುಪಿಸುವಂತಹ ಕಾರ್ಯಕ್ಕೆ ಮುಂದಾಗಿದೆ. ಇದರಿಂದಾಗಿ ಗಂಗಾ ಶುದ್ದೀಕರಣ ಯೋಜನೆಯು ನೇರವಾಗಿ ದೇಶದ ಎಲ್ಲಾ ವಿದ್ಯಾರ್ಥಿಗಳ ಮನಸ್ಸಿನ ಮೂಲೆ ಮೂಲೆಗೂ ತಲುಪಲಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಪರಿಣಾಮಕಾರಿ ನೀರು ನಿರ್ವಹಣೆಯ ಮಹತ್ವ ಮತ್ತು ಗಂಗಾ ನದಿಯ ಸ್ವಚ್ಛತೆ ಮತ್ತು ಶುದ್ಧತೆ ಮತ್ತು ನದಿಗಳ ಪುನರುಜ್ಜೀವನವನ್ನು ಖಚಿತಪಡಿಸಿಕೊಳ್ಳಲು ನಮಾಮಿ ಗಂಗಾ ಮಿಷನ್‌ನ ಉದ್ದೇಶವನ್ನು ಒತ್ತಿ ಹೇಳಿದರು. ಕೃಷಿ ಕ್ಷೇತ್ರವು ಭಾರತದ ಬಹುಪಾಲು ನೀರಿನ ಸಂಪನ್ಮೂಲಗಳನ್ನು ಬಳಸುತ್ತದೆ ಮತ್ತು ಬೇಡಿಕೆಯ ಬದಿಯ ನಿರ್ವಹಣೆಯು ನಿರ್ಣಾಯಕವಾಗಿದೆ ಎಂದು ಸಚಿವರು ಹೇಳಿದರು. ನೀರಿನ ಸಂರಕ್ಷಣೆ ಮತ್ತು ನೀರಿನ ಬಳಕೆಯ ದಕ್ಷತೆಯನ್ನು ಹೆಚ್ಚಿಸುವ ಸಮಾಜದ ಜವಾಬ್ದಾರಿಯನ್ನು ಅವರು ಒತ್ತಿ ಹೇಳಿದರು.

ಇದನ್ನೂ ಓದಿ : Summer Special Trains : ಬೇಸಿಗೆಯಲ್ಲಾಗುವ ಜನದಟ್ಟಣೆ ನಿರ್ವಹಿಸಲು 217 ವಿಶೇಷ ರೈಲುಗಳು

ಇದನ್ನೂ ಓದಿ : Jallianwal Bagh Massacre: ಭಾರತ ಕಂಡ ಘೋರ ದುರಂತ ಜಲಿಯನ್‌ ವಾಲ್‌ ಬಾಗ್‌ ಹತ್ಯಾಕಂಡಕ್ಕೆ ಇಂದಿಗೆ 104 ವರ್ಷ

ನಮಾಮಿ ಗಂಗೆ ಅಭಿಯಾನವು ಅತಿ ದೊಡ್ಡ ಸಮಗ್ರ ನದಿ ಸಂರಕ್ಷಣೆ ಅಭಿಯಾನವಾಗಿದ್ದು, ಇದು ಗಂಗಾನದಿಯ ಸ್ವಚ್ಛತೆಯ ಗುರಿಯನ್ನು ಮಾತ್ರ ಹೊಂದದೆ, ನದಿಯ ಸಮಗ್ರ ಪಾಲನೆಯ ಮೇಲೆ ಕೇಂದ್ರೀಕರಿಸುತ್ತದೆ. ಈ ಹೊಸ ಆಲೋಚನೆ ಮತ್ತು ವಿಧಾನವು ಗಂಗಾ ನದಿಗೆ ಮತ್ತೆ ಜೀವಕಳೆ ತಂದಿದೆ

National Mission 49 : Cleaning Ganga : National Mission 49 signed MoU with Universities

RELATED ARTICLES

Most Popular