ಭಾರತೀಯ ನೌಕಾಪಡೆಯ ಮಹತ್ವವನ್ನು ಸಾರುವ ಸಲುವಾಗಿ ಪ್ರತಿ ವರ್ಷ ಡಿಸೆಂಬರ್ 4ರಂದು ಭಾರತೀಯ ನೌಕಾ ದಿನವನ್ನು( Indian Navy Day 2021) ಆಚರಣೆ ಮಾಡಲಾಗುತ್ತೆ. ಭಾರತೀಯ ನೌಕಾ ಸೇನೆಯು ಪಾಕಿಸ್ತಾನದ ವಿರುದ್ಧ ಜಯಭೇರಿ ಬಾರಿಸಿದ ದಿನ ಇದಾಗಿದೆ. ಹೀಗಾಗಿ ಭಾರತೀಯ ಇತಿಹಾಸದಲ್ಲಿ ಈ ದಿನಕ್ಕೆ ತುಂಬಾನೇ ಮಹತ್ವವಿದೆ.
1971ರಲ್ಲಿ ಭಾರತೀಯ ನೌಕಾಪಡೆಯು ಪಾಕಿಸ್ತಾನದ ವಿರುದದಧ ನಡೆಸಿದ ಯುದ್ಧದಲ್ಲಿ ಕರಾಚಿಯ ಸಮುದ್ರದಲ್ಲಿ ಹಡಗು ನಿಗ್ರಹ ಕ್ಷಿಪಣಿಗಳನ್ನು ಬಳಕೆ ಮಾಡಿ ಪಾಕ್ನ ಮೂರು ಯುದ್ಧ ಹಡಗುಗಳನ್ನು ಹೊಡೆದುರುಳಿಸಿತ್ತು. ಈ ವಿಜಯೋತ್ಸವದ ಸಂಭ್ರಮದ ನಿಮಿತ್ತ ಡಿಸೆಂಬರ್ನ್ನು ಭಾರತೀಯ ನೌಕಾಸೇನಾ ದಿನವೆಂದು ಗುರುತಿಸಲಾಗಿದೆ. ಪ್ರತಿ ವರ್ಷದ ಒಂದೊಂದು ಘೋಷವಾಕ್ಯಗಳೊಂದಿಗೆ ಭಾರತೀಯ ನೌಕಾ ಸೇನಾ ದಿನವನ್ನು ಆಚರಿಸಲಾಗುತ್ತೆ. ಈ ಬಾರಿ ಯುದ್ಧ ಸಿದ್ಧ, ವಿಶ್ವಾಸಾರ್ಹ ಹಾಗೂ ಒಗ್ಗೂಡುವಿಕೆ ಎಂಬ ಥೇಮ್ನ್ನು ಇಟ್ಟುಕೊಳ್ಳಲಾಗಿದೆ.
ಇಂದಿನ ದಿನವನ್ನು ಭಾರತೀಯ ನೌಕಾಪಡೆಯು ಸ್ವರ್ಣಿಂ ವಿಜಯ ವರ್ಷ ಎಂಬ ಹೆಸರಿನಲ್ಲಿ ಆಚರಿಸುತ್ತಾ ಬಂದಿದೆ. ಈ ಬಾರಿಯ ಪಾಕಿಸ್ತಾನದ ವಿರುದ್ಧ ಭಾರತೀಯ ನೌಕಾ ಸೇನೆಯ ಯುದ್ಧಕ್ಕೆ 50 ವರ್ಷಗಳು ಸಂದಿದೆ. 1612ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಭಾರತೀಯ ನೌಕಾ ಸೇನೆಯನ್ನು ಸ್ಥಾಪಿಸಿತಯ. ಮೊದಲು ಇದನ್ನು ರಾಯಲ್ ಇಂಡಿಯಾ ನೇವಿ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರ್ಯಾನಂತರದಲ್ಲಿ ಅಂದರೆ 1950ರಲ್ಲಿ ಇದನ್ನು ಭಾರತೀಯ ನೌಕಾ ಸೇನೆ ಎಂದು ಮರುನಾಮಕರಣ ಮಾಡಲಾಗಿದೆ.
1971ರಲ್ಲಿ ಡಿಸೆಂಬರ್ ಮೂರರಂದು ಆರಂಭವಾದ ಯುದ್ಧವು ಡಿಸೆಂಬರ್ 16ರವರೆಗೂ ನಡೆದಿತ್ತು. ಇದರಲ್ಲಿ ಬಾಂಗ್ಲಾದೇಶವು ಭಾರತದಿಂದ ಸ್ವತಂತ್ರ್ಯಗೊಂಡು ಬಳಿಕ ತನ್ನದೇ ಸರ್ಕಾರವನ್ನ ರಚಿಸಿತು. ಭಾರತೀಯ ನೌಕಾ ಸೇನೆಯು ಆಪರೇಷನ್ ಟ್ರೈಡೆಂಟ್ ಹೆಸರಿನಲ್ಲಿ ಪಾಕಿಸ್ತಾನದ ಕರಾಚಿಯ ಮೇಲೆ ದಾಳಿ ನಡೆಸಿತ್ತು. ಕರಾಚಿಯ ಬಂದರನ್ನು ಭಾರತೀಯ ನೌಕಾ ಸೇನೆಯು ಸಂಪೂರ್ಣವಾಗಿ ಸುತ್ತುವರಿದಿತ್ತು. ಐಎನ್ಎಸ್ ನಿಪತ್, ಐಎನ್ಎಸ್ ನೀರ್ಘಾಟ್ ಹಾಗೂ ಐಎನ್ಎಸ್ ವೀರ್ ಪಾಕಿಸ್ತಾನದ ಬಂದರುಗಳನ್ನು ಗುರಿಯಾಗಿಸಿ ಈ ದಾಳಿ ನಡೆದಿತ್ತು.
ಭಾರತೀಯ ನೌಕಾ ಸೇನೆಯ ಪರಾಕ್ರಮ ಪಾಕ್ ಸೈನಿಕರಿಗೆ ನಡುಕವನ್ನೇ ಹುಟ್ಟಿಸಿಬಿಟ್ಟಿತ್ತು. ಕಮಾಂಡರ್ ಬಿ ಬಿ ಯಾದವ್ ನೇತೃತ್ವದಲ್ಲಿ ನಡೆದ ಆಪರೇಷನ್ ಟ್ರೈಡೆಂಟ್ ಕಾರ್ಯಾಚರಣೆಯಲ್ಲಿ ಪಾಕ್ನ ವಿರುದ್ಧ ಭಾರತೀಯ ನೌಕಾಪಡೆ ದಿಗ್ವಿಜಯ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಭಾರತೀಯ ನೌಕಾಪಡೆಯ ಈ ಸಾಧನೆಯ ಸ್ಮರಣಾರ್ಥವಾಗಿ ಪ್ರತಿ ವರ್ಷ ಈ ದಿನದಂದು ಭಾರತೀಯ ನೌಕಾ ಸೇನೆಯ ದಿನವನ್ನು ಆಚರಿಸಲಾಗುತ್ತದೆ.
ಇದನ್ನು ಓದಿ : Maharashtra Omicron Blast : ಮುಂಬೈ 10, ಮಹಾರಾಷ್ಟ್ರದಲ್ಲಿ ಒಟ್ಟು 28 ಶಂಕಿತ ಓಮಿಕ್ರಾನ್ ಪ್ರಕರಣ ಪತ್ತೆ
Indian Navy Day 2021: History, theme, here’s all you need know