ಲೋನ್ ಬೇಕಾದ್ರೆ ಲೈಂಗಿಕ ಸುಖ ಕೊಡ್ಬೇಕು : ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ಬ್ಯಾಂಕ್ ಮ್ಯಾನೇಜರ್ ಬಣ್ಣ

ವಿಜಯವಾಡ : ಮಹಿಳಾ ಗ್ರಾಹಕರಿಗೆ ಲೋನ್​ ಬೇಕಾದರೆ ಅದಕ್ಕೆ ಪ್ರತಿಯಾಗಿ ಬ್ಯಾಂಕ್​ ಮ್ಯಾನೇಜರ್​ಗೆ ಲೈಂಗಿಕ ಸುಖ ನೀಡಬೇಕಂತೆ. ಈ ರೀತಿ ಕಿರುಕುಳ ಪ್ರಕರಣ ಆಂಧ್ರದ ನೆಲ್ಲೂರು ಜಿಲ್ಲೆಯ ಪೊದಲಕುರ್​ ಶಾಖೆಯಲ್ಲಿ ಬೆಳಕಿಗೆ ಬಂದಿದೆ. ಮ್ಯಾನೇಜರ್ ನಿಜ ಬಣ್ಣ ಸಿಸಿ ಕ್ಯಾಮರಾ ದಲ್ಲಿ ಸೆರೆಯಾಗಿದೆ.

ಆಂಧ್ರ ಪ್ರದೇಶದ ಪೊದಲಕುರ್ ನಲ್ಲಿರುವ ಎಸ್ ಬಿಐ ಶಾಖೆಯ ಮ್ಯಾನೇಜರ್​ ಆಗಿರುವ ನಾಗೇಶ್, ಕಚೇರಿಯಲ್ಲಿನ ಮಹಿಳಾ ಸಹೋದ್ಯೋಗಿಗಳಿಗೆ ಮಾತ್ರವಲ್ಲದೆ, ಮಹಿಳಾ ಗ್ರಾಹಕರ ಮೇಲೂ ತನ್ನ ಕಾಮದೃಷ್ಟಿ ಬೀರಿರುವ ಘಟನೆ ವರದಿಯಾಗಿದೆ. ಆರೋಪಿ ನಾಗೇಶ್​ ವಿರುದ್ಧ ಮಹಿಳಾ ಸಹೋದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿರುವ ಆರೋಪವಿದೆ. ಈತನ ಕಿರುಕುಳ ತಾಳದೇ ಕೆಲವು  ಉದ್ಯೋಗಿಗಳು ಸ್ವಯಂ ವರ್ಗಾವಣೆ ತೆಗೆದುಕೊಂಡಿದ್ದಾರಂತೆ.

ಇದೀಗ ಗ್ರಾಹಕ ಮಹಿಳೆಯ ಜೊತೆ ಮ್ಯಾನೇಜರ್ ನಡೆಸಿದ ಚೆಲ್ಲಾಟ ಸಿಸಿ ಕ್ಯಾಮರಾದಲ್ಲಿ ಬಯಲಾಗಿದೆ. ಅಲ್ಲದೇ ವಿಡಿಯೋ ವೈರಲ್ ಆಗಿದ್ದು, ಮ್ಯಾನೇಜರ್ ‌ನಾಗೇಶ್ ನಾಪತ್ತೆಯಾಗಿದ್ದಾನೆ. ಇದೀಗ‌‌‌ ನಾಗೇಶನ ರಾಸಲೀಲೆ ಒಂದೊಂದಾಗಿಯೇ ಬಯಲಿಗೆ ಬರುತ್ತಿದ್ದು, ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

Comments are closed.