ಭಾನುವಾರ, ಏಪ್ರಿಲ್ 27, 2025
HomeNationalಕೇರಳದಲ್ಲಿ ನಿಫಾ ವೈರಸ್‌ ಪ್ರಕರಣ ಹೆಚ್ಚಳ : ಶಾಲೆ, ಕಾಲೇಜು ಬಂದ್‌, ಲಾಕ್‌ಡೌನ್‌ ಜಾರಿ ?

ಕೇರಳದಲ್ಲಿ ನಿಫಾ ವೈರಸ್‌ ಪ್ರಕರಣ ಹೆಚ್ಚಳ : ಶಾಲೆ, ಕಾಲೇಜು ಬಂದ್‌, ಲಾಕ್‌ಡೌನ್‌ ಜಾರಿ ?

- Advertisement -

Nipah Virus – Kerala Lockdown : ತಿರುವನಂತಪುರ : ದೇವರನಾಡು ಕೇರಳದಲ್ಲಿ ನಿಫಾ ವೈರಸ್‌ ಸೋಂಕು ಆರ್ಭಟಿಸುತ್ತಿದೆ. ನಿಫಾ ವೈರಸ್ ಸೋಂಕಿಗೆ ತುತ್ತಾಗಿದ್ದ ಕೇರಳದ ಮಲಪ್ಪುರಂ ಜಿಲ್ಲೆಯ 14 ವರ್ಷದ ಬಾಲಕ ಭಾನುವಾರ ಕೋಝಿಕ್ಕೋಡ್‌ನಲ್ಲಿ ಸಾವನ್ನಪ್ಪಿದ್ದಾನೆ. ಜೊತೆಗೆ ನಿಫಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಕೇರಳದಲ್ಲಿ ಹಲವು ನಿರ್ಬಂಧಗಳನ್ನು ಹೇರಲಾಗಿದೆ.

Nipah Virus Cases Rises In Kerala Lockdown Restrict Back In State
Image Credit to Original Source

ಮಲಪ್ಪುರಂನ ಬಾಲಕನ ಸಾವಿನ ಬೆನ್ನಲ್ಲೇ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯು ಫಾ ಸೋಂಕು ಸಾವಿಗೆ ಕಾರಣ ಅನ್ನೋದನ್ನು ಪತ್ತೆ ಹಚ್ಚಿದೆ. ನಿಫಾ ಸೋಂಕಿನಿಂದ ಸಾವನ್ನಪ್ಪಿರುವ ಬಾಲಕನ ಅಂತ್ಯಕ್ರೀಯೆಯನ್ನು ಸರಕಾರದ ಮಾರ್ಗಸೂಚಿಯಂತೆಯೇ ನಡೆಸಲಾಗಿದೆ. ಬಾಲಕ ಮಾತ್ರವಲ್ಲದೇ ಇನ್ನೂ ನಾಲ್ವರಲ್ಲಿ ನಿಫಾ ಸೋಂಕಿನ ಲಕ್ಷಣಗಳು ಪತ್ತೆಯಾಗಿದೆ. ಓರ್ವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸಯನ್ನು ಕೊಡಿಸಲಾಗುತ್ತಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಮಾಹಿತಿ ನೀಡಿದ್ದಾರೆ.

ನಿಫಾ ಸೋಂಕು ದೃಢಪಟ್ಟ ಬೆನ್ನಲ್ಲೇ ಮಲಪ್ಪುರಂನಲ್ಲಿ ಆರೋಗ್ಯ ಇಲಾಖೆ ಕಂಟ್ರೋಲ್ ರೂಂ ಆರಂಭಿಸಿದ್ದು, ಹೈ ಅಲರ್ಟ್ ಘೋಷಿಸಿದೆ. ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಸೂಚನೆಯನ್ನು ನೀಡಲಾಗಿದೆ. ಇನ್ನು ಬಾಲಕನ ನಿವಾಸ ಇರುವ ಪಂಡಿಕ್ಕಾಡ್‌ ಪಂಚಾಯತ್‌ ವ್ಯಾಪ್ತಿಯಲ್ಲಿ ಲಾಕ್ಡೌನ್‌ ಹೇರಿಕೆ ಮಾಡಿ ಜಿಲ್ಲಾಧಿಕಾರಿ ವಿಆರ್‌ ವಿನೋದ್‌ ಆದೇಶ ಹೊರಡಿಸಿದ್ದಾರೆ. ಅಲ್ಲದೇ ಪಂಡಿಕ್ಕಾಡ್‌ ಮತ್ತು ಅನಕ್ಕಯಂ ಪಂಚಾಯತ್‌ ವ್ಯಾಪ್ತಿಯಲ್ಲಿ ನಿರ್ಬಂಧ ಹೇರಿದ್ದು, ಶಿಕ್ಷಣ ಸಂಸ್ಥೆಗಳನ್ನು ಮುಚ್ಚಲಾಗಿದೆ.

Nipah Virus Cases Rises In Kerala Lockdown Restrict Back In State
Image Credit to Original Source

ಇದನ್ನೂ ಓದಿ : ಹೃದಯಾಘಾತ ತಡಿಯೋಕೆ ಉತ್ತಮ ಔಷಧ: ಎಳ್ಳಿನಿಂದ ಮಾಯವಾಗುತ್ತೆ ಹಲವು ರೋಗ

ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳದಂತೆ ಜನರಿಗೆ ಸೂಚಿಸಲಾಗಿದ್ದು, ಈಗಾಗಲೇ ನಿಗದಿ ಆಗಿರುವ ಮದುವೆ, ಸಮಾರಂಭಗಳಿಗೆ ಕನಿಷ್ಠ ಸಂಖ್ಯೆಯಲ್ಲಿ ಜನರು ಪಾಳ್ಗೊಳ್ಳಬೇಕೆಂದು ನಿರ್ಬಂಧ ಹೇರಲಾಗಿದೆ. ಪ್ರಕರಣ ಏರಿಕೆಯಾದ್ರೆ ಇನ್ನಷ್ಟು ಪ್ರದೇಶಗಳಿಗೆ ಲಾಕ್‌ಡೌನ್‌ ಹೇರಿಕೆ ಮಾಡುವ ಸಾಧ್ಯತೆಯೂ ಇದೆ.

ಇದನ್ನೂ ಓದಿ : ಬೇಸಿಗೆ ಬೇಗೆಗೆ ಮುಕ್ತಿ ನೀಡುತ್ತೆ ಈ ಬಟ್ಟೆ : ಇದನ್ನು ಬಳಸಿದ್ರೆ ಭೂಮಿ , ದೇಹ ಎರಡಕ್ಕೂ ಉತ್ತಮ

ಕೇರಳದ ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಅಲ್ಲದೇ ಮಲಪ್ಪುರಂನಲ್ಲಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ. ಮಂಜೇರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ 30 ಹಾಸಿಗೆಗಳ ಪ್ರತ್ಯೇಕ ವಾರ್ಡ್ ತೆರೆಯಲಾಗಿದೆ. ನಿಫಾ ಶಂಕಿತ ಪ್ರಕರಣಗಳ ಮೇಲಯೂ ಕೇರಳ ಆರೋಗ್ಯ ಇಲಾಖೆ ಹದ್ದಿನಕಣ್ಣು ಇರಿಸಿದೆ. ಇನ್ನು ಮೃತ ಬಾಲಕನ ಸಂಪರ್ಕದಲ್ಲಿ ಇರುವವರನ್ನು ತಪಾಸಣೆಗೆ ಒಳಪಡಿಸಿದ್ದು, ಪ್ರತ್ಯೇಕವಾಗಿ ಇರಿಸಲಾಗಿದೆ.

ಇದನ್ನೂ ಓದಿ : Heart Health Tips: ಹೃದ್ರೋಗದಿಂದ ದೂರವಿರಲು ಈ 5 ಹಾಲಿನ ಉತ್ಪನ್ನಗಳಿಂದ ದೂರವಿರಿ

Nipah Virus Cases Rises In Kerala Lockdown Restrict Back In State

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular