ಸೋಮವಾರ, ಏಪ್ರಿಲ್ 28, 2025
HomeNationalNo Toll Tax : ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿಮೀ ವ್ಯಾಪ್ತಿಯೊಳಗೆ ಟೋಲ್‌ ತೆರಿಗೆ ಇಲ್ಲ...

No Toll Tax : ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿಮೀ ವ್ಯಾಪ್ತಿಯೊಳಗೆ ಟೋಲ್‌ ತೆರಿಗೆ ಇಲ್ಲ : ಸಚಿವ ನಿತಿನ್‌ ಗಡ್ಕರಿ

- Advertisement -

ನವದೆಹಲಿ : ರಾಷ್ಟ್ರೀಯ ಹೆದ್ದಾರಿಗಳಲ್ಲಿ 60 ಕಿಮೀ ವ್ಯಾಪ್ತಿಯಲ್ಲಿ ಟೋಲ್ ಪ್ಲಾಜಾ (No Toll Tax ) ಇರಬಾರದು ಎಂಬ ನಿಯಮವಿದೆ. ಮುಂದಿನ ಮೂರು ತಿಂಗಳಲ್ಲಿ ನಿಯಮಗಳು ಸಂಪೂರ್ಣವಾಗಿ ಜಾರಿಗೆ ಬರುವಂತೆ ನೋಡಿಕೊಳ್ಳುವುದಾಗಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 60 ಕಿಮೀ ಒಳಗೆ ಟೋಲ್ ತೆರಿಗೆ ಇಲ್ಲ ಎನ್ನುವ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ.

Nitin Gadkari big announcement No toll tax within 60 km

“60 ಕಿ.ಮೀ ವ್ಯಾಪ್ತಿಯಲ್ಲಿ ಕೇವಲ ಒಂದು ಟೋಲ್ ಪ್ಲಾಜಾ ಇರುವುದನ್ನು ನಾನು ಖಚಿತಪಡಿಸಿಕೊಳ್ಳುತ್ತೇನೆ ಮತ್ತು ಒಂದೊಮ್ಮೆ ಎರಡನೇ ಟೋಲ್ ಪ್ಲಾಜಾ ಇದ್ದರೆ, ಅಂತಹ ಟೋಲ್‌ ಪ್ಲಾಜಾಗಳನ್ನು ಮುಂದಿನ ಮೂರು ತಿಂಗಳ ಒಳಗಾಗಿ ಅವುಗಳನ್ನು ಮುಚ್ಚಲಾಗುವುದು ಎಂದು ಗಡ್ಕರಿ ಲೋಕಸಭೆಯಲ್ಲಿ ಹೇಳಿದ್ದಾರೆ. ಲೋಕಸಭಾ ಅಧಿವೇಶನದ ವೇಳೆಯಲ್ಲಿ ಚರ್ಚೆಗೆ ಉತ್ತರಿಸಿದರು ಕೇಂದ್ರ ಸಚಿವರು ಭಾರತದ ರಸ್ತೆ ಜಾಲಕ್ಕೆ ಸಂಬಂಧಿಸಿದಂತೆ ಹಲವಾರು ಹೊಸ ನಿಯಮಗಳನ್ನು ಜಾರಿಗೆ ತರುತ್ತಿರುವುದರ ಕುರಿತು ಮಾಹಿತಿ ನೀಡಿದ್ದಾರೆ. ಮುಂಬೈನಿಂದ ದೆಹಲಿಗೆ ಪ್ರಯಾಣಿಸುವುದರಿಂದ ಈ ದೂರವನ್ನು ಕೇವಲ 12 ಗಂಟೆಗಳಲ್ಲಿ ಕ್ರಮಿಸಲು ಸಾಧ್ಯವಾಗಲಿದೆ ಎಂದಿದ್ದಾರೆ.

Nitin Gadkari big announcement No toll tax within 60 km

ಅಲ್ಲದೇ ಮುಂಬೈನಿಂದ ಶ್ರೀನಗರಕ್ಕೆ ಪ್ರಯಾಣಿಸಲು ಬಯಸುವ ಜನರು ಈ ದೂರವನ್ನು 20 ಗಂಟೆಗಳಲ್ಲಿ ಕ್ರಮಿಸಲು ಸಾಧ್ಯವಾಗುತ್ತದೆ. ದೆಹಲಿ-ಅಮೃತಸರ-ಕತ್ರಾ ಹೆದ್ದಾರಿ ಕಾಮಗಾರಿ ಆರಂಭವಾಗಿದೆ. ಈ ವರ್ಷದ ಅಂತ್ಯದ ವೇಳೆಗೆ, ನಾವು 20 ಗಂಟೆಗಳಲ್ಲಿ ಶ್ರೀನಗರದಿಂದ ಮುಂಬೈ ತಲುಪಲು ಸಾಧ್ಯವಾಗುತ್ತದೆ. ಇನ್ನು ದೆಹಲಿ ಮತ್ತು ಅಮೃತಸರ ನಡುವಿನ ಅಂತರವನ್ನು ನಾಲ್ಕು ಗಂಟೆಗಳಲ್ಲಿ ಕ್ರಮಿಸಲಾಗುವುದು ಎಂದು ಗಡ್ಕರಿ ತಿಳಿಸಿದ್ದಾರೆ.

Nitin Gadkari big announcement No toll tax within 60 km

ಜಮ್ಮು ಮತ್ತು ಕಾಶ್ಮೀರದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ ಸಚಿವರು, ಪ್ರಸ್ತುತ ಝೋಜಿಲಾ ಸುರಂಗ ಯೋಜನೆಯಲ್ಲಿ ಸುಮಾರು 1,000 ಜನರು ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ”ಜಮ್ಮು ಮತ್ತು ಕಾಶ್ಮೀರದಲ್ಲಿ 7,000 ಕೋಟಿ ರೂಪಾಯಿಗಳ ಯೋಜನೆಗಳು ನಡೆಯುತ್ತಿವೆ. ಸುಮಾರು 1,000 ಜನರು ಝೋಜಿಲಾ ಸುರಂಗದೊಳಗೆ -8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಗಡ್ಕರಿ ಹೇಳಿದ್ದಾರೆ.

ಇದನ್ನೂ ಓದಿ :‌ ಸಂಬಳಕ್ಕಾಗಿ ಸಾಲ, ಬಸ್‌ ನಿಲ್ದಾಣಗಳನ್ನೇ ಅಡವಿಡುತ್ತಿದೆ ಕೆಎಸ್‌ಆರ್‌ಟಿಸಿ

ಇದನ್ನೂ ಓದಿ : ಪಾರ್ವತಮ್ಮ ಹಾಗೂ ಪುನೀತ್ ಹೆಸರಲ್ಲಿ ಚಿನ್ನದ ಪದಕ : ಡಾಕ್ಟರೇಟ್ ಸ್ವೀಕರಿಸಿದ ಆಶ್ವಿನಿ ಘೋಷಣೆ

( Nitin Gadkari big announcement No toll tax within 60 km)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular