Nitin Gadkari visits : ಕುಲು-ಮನಾಲಿಯಲ್ಲಿ ಪ್ರವಾಹ, ಮಳೆ ಪೀಡಿತ ಪ್ರದೇಶಗಳಿಗೆ ನಿತಿನ್ ಗಡ್ಕರಿ ಭೇಟಿ

ನವದೆಹಲಿ : ದೇಶದಾದ್ಯಂತ ಮಳೆರಾಯ ಆರ್ಭಟ ಜೋರಾಗಿದ್ದು, ಹೆಚ್ಚಿನ ಪ್ರದೇಶಗಳಲ್ಲಿ ಜಲಾವೃತಗೊಂಡಿದೆ. ಹೀಗಾಗಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು, ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್ ಮತ್ತು ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಚಿವ ವಿಕ್ರಮಾದಿತ್ಯ ಸಿಂಗ್ ಅವರೊಂದಿಗೆ ನಿತಿನ್‌ ಗಡ್ಕರಿ (Nitin Gadkari visits) ಅವರು ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು.

ನಂತರ ಕೇಂದ್ರ ಸಚಿವರು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರೊಂದಿಗೆ ಸಂವಾದ ನಡೆಸಿದರು. ಸಂತ್ರಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಚಿವರಿಗೆ ಮನವಿ ಸಲ್ಲಿಸಿದರು. ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ ಜೂನ್ 24 ರಂದು ಮುಂಗಾರು ಪ್ರಾರಂಭವಾದಾಗಿನಿಂದ (ಜುಲೈ 31 ರವರೆಗೆ) ಪಿಡಬ್ಲ್ಯುಡಿಗೆ 1,962 ಕೋಟಿ ರೂಪಾಯಿ ಸೇರಿದಂತೆ ಇದುವರೆಗೆ ರಾಜ್ಯವು 5,692 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.

ಇದನ್ನೂ ಓದಿ : Haryana Nuh Violence : ನುಹ್ ಹಿಂಸಾಚಾರ : 3 ಮಂದಿ ಸಾವು, 45 ಜನರಿಗೆ ಗಾಯ, 35 ವಾಹನಗಳಿಗೆ ಬೆಂಕಿ : ಶಾಂತಿಗಾಗಿ ಸಿಎಂ ಮನವಿ

ಆದರೆ, ಸುಮಾರು 8 ಸಾವಿರ ಕೋಟಿ ನಷ್ಟವಾಗಿದೆ ಎಂದು ಮುಖ್ಯಮಂತ್ರಿ ಹೇಳಿಕೊಂಡಿದ್ದಾರೆ. ಕುಲು ಮತ್ತು ಮನಾಲಿ ಜಿಲ್ಲೆಗಳು ಇತ್ತೀಚಿನ ಪ್ರವಾಹದಲ್ಲಿ ಗರಿಷ್ಠ ಹಾನಿಯನ್ನು ಎದುರಿಸಿವೆ. NHAI ಮತ್ತು PWD ಯ ಹೆಚ್ಚಿನ ಸಂಖ್ಯೆಯ ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ. ಈ ಹಿಂದೆ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಕಲ್ಪಿಸುವ ಹಾನಿಗೊಳಗಾದ ಸೇತುವೆಗಳ ಪುನರ್ ನಿರ್ಮಾಣಕ್ಕೆ ಕೇಂದ್ರ ಸಚಿವರು ಸೇತು ಭಾರತಂ ಯೋಜನೆಯಡಿ 300 ಕೋಟಿ ರೂ. ಆಗಿದೆ.

Nitin Gadkari visits: Nitin Gadkari visits flood and rain affected areas in Kullu-Manali

Comments are closed.