Shashi Tharoor : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಪ್ರಧಾನಿ ಮೋದಿ ತಮ್ಮ ಭಾಷಣದ ವೇಳೆ ಬಳಕೆ ಮಾಡುವ ಮಿತ್ರೋ ಎಂಬ ಪದದ ಬಗ್ಗೆ ಲೇವಡಿ ಮಾಡಿದ್ದಾರೆ. ಓ ಮಿತ್ರೋ ಎಂಬುದು ಓಮಿಕ್ರಾನ್ಗಿಂತಲೂ ಹೆಚ್ಚು ಅಪಯಾಕರಿ ಎಂದು ಶಶಿ ತರೂರ್ ಕುಟುಕಿದ್ದಾರೆ.
ಓಮಿಕ್ರಾನ್ ರೂಪಾಂತರಿಗಿಂತಲೂ ಹೆಚ್ಚು ಅಪಾಯಕಾರಿದದ್ದು ಈ ‘ ಓ ಮಿತ್ರೋ’ ಎಂಬ ಪದವಾಗಿದೆ. ದ್ವೇಷ, ಧರ್ಮಾಂಧತೆಯ ಪ್ರಚಾರ, ಸಂವಿಧಾನದ ಮೇಲಿನ ಕಪಟ ದಾಳಿ ಇವೆಲ್ಲವೂ ನಮ್ಮ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿರೋದನ್ನು ನಾವು ಪ್ರತಿದಿನ ಕಾಣುತ್ತಿದ್ದೇವೆ . ಈ ವೈರಸ್ಗೆ ಯಾವುದೇ ಸೌಮ್ಯ ರೂಪಾಂತರಗಳು ಇಲ್ಲ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
Far more dangerous than #Omicron is “O Mitron”! We are measuring the consequences of the latter every day in increased polarisation, promotion of hatred & bigotry, insidious assaults on the Constitution & the weakening of our democracy. There is no “milder variant” of this virus.
— Shashi Tharoor (@ShashiTharoor) January 31, 2022
ಸಂಸದ ಶಶಿ ತರೂರ್ ಕಳೆದ ಕೆಲವು ದಿನಗಳಿಂದ ಬಿಜೆಪಿ ನಾಯಕರಿಗೆ ಟಾಂಗ್ ನೀಡುತ್ತಲೇ ಇದ್ದಾರೆ. ಜನವರಿ 29ರಂದು ಯೋಗಿ ಆದಿತ್ಯನಾಥ್ ವಿಡಿಯೋವನ್ನು ಟ್ವಿಟರ್ನಲ್ಲಿ ಶೇರ್ ಮಾಡಿದ್ದ ತಿರುವನಂತಪುರಂ ಸಂಸದ ಶಶಿ ತರೂರ್ ಉತ್ತರ ಪ್ರದೇಶದ ಮುಖ್ಯಮಂತ್ರಿಗೆ ಅವರು ದೇಶಕ್ಕೆ ಎಷ್ಟು ಹಾನಿ ಮಾಡಿದ್ದಾರೆ ಎಂಬುದು ತಿಳಿದಿಲ್ಲ . ಈ ದೇಶವನ್ನು ಸ್ಮಶಾನವನ್ನಾಗಿ ಬದಲಾಯಿಸಲಾಗಿದೆ ಎಂದು ಶಶಿ ತರೂರ್ ಕುಟುಕಿದ್ದರು.
तुम्हे इल्म नही तुमने कितना नुक्सान किया है
— Shashi Tharoor (@ShashiTharoor) January 29, 2022
इस मुल्क को शमशान-ओ-कब्रिस्तान किया है
गंगा-जमनी तहजीब का अपमान किया है
भाई-भाई को हिंदू-मुसलमान किया है #InclusiveIndia #weWillNotRetreat pic.twitter.com/QoY2IJ7Vja
छोड़कर जा रहे हैं घर अपना
— Shashi Tharoor (@ShashiTharoor) January 26, 2022
शायद उनके कुछ और सपने हैं
अब उधर भी सब अपना सा है
अब उधर भी तो सभी अपने हैं
(काँग्रेस युक्त भाजपा!)
ಇದಕ್ಕೂ ಮುನ್ನ ಅಂದರೆ ಜನವರಿ 26ರಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದ ಶಶಿ ತರೂರ್ ಕಾಂಗ್ರೆಸ್ ನಾಯಕರಿಂದ ಕೂಡಿದ ಪಕ್ಷವೇ ಬಿಜೆಪಿ ಎಂದು ವ್ಯಂಗ್ಯವಾಡಿದ್ದರು.
ಕಾಂಗ್ರೆಸ್ ನಾಯಕರಿಂದ ಕೂಡಿದ ಬಿಜೆಪಿ ಎಂಬ ಪದವನ್ನು ಶಶಿ ತರೂರ್ ಬಳಕೆ ಮಾಡಿದ್ದರು. ಪ್ರಧಾನಿ ಮೋದಿಯ ಕಾಂಗ್ರೆಸ್ ಮುಕ್ತ ಭಾರತ ಎಂಬ ಘೋಷಣೆಯನ್ನು ಟೀಕಿಸುತ್ತಾ ಶಶಿ ತರೂರ್ ಈ ಪದ ಬಳಕೆ ಮಾಡಿದ್ದರು .
‘O Mitron’ much more dangerous than Omicron: Shashi Tharoor
ಇದನ್ನು ಓದಿ : Gungun Upadhyay : ಹೋಟೆಲ್‌ನ 6ನೇ ಮಹಡಿಯಿಂದ ಜಿಗಿದು ಖ್ಯಾತ ಮಾಡೆಲ್ ಗುಂಗುನ್ ಉಪಾಧ್ಯಾಯ ಆತ್ಮಹತ್ಯೆ ಯತ್ನ
ಇದನ್ನೂ ಓದಿ : Badava Rascal : ಕನ್ನಡದ ಬಳಿಕ ತೆಲುಗಿಗೆ ಬಡವ ರಾಸ್ಕಲ್ : ಡಾಲಿ ಧನಂಜಯ್ ಸಿನಿಮಾ ಪೋಸ್ಟರ್ ರಿಲೀಸ್