ನವದೆಹಲಿ : ಆಪರೇಷನ್ ಸಿಂಧೂರ (operation sindoor) ಕಾರ್ಯಾಚರಣೆಯನ್ನು ಭಾರತ ಸೇನೆ ತೀವ್ರಗೊಳಿಸಿದೆ. ಆಫರೇಷನ್ ಸಿಂಧೂರ ಮೂಲಕ ಉಗ್ರರನ್ನು ಸೆದೆ ಬಡಿದಿರುವ ಭಾರತದ (india) ವಿರುದ್ದ ಪಾಕಿಸ್ತಾನ (Pakistan) ಪ್ರತಿದಾಳಿ ನಡೆಸಿದೆ. ಇದೀಗ ಭಾರತದ ಒಳಗೆ ನುಗ್ಗಿ ದಾಳಿ ನಡೆಸಲು ಮುಂದಾಗಿದ್ದ ಪಾಕಿಸ್ತಾನಕ್ಕೆ ಭಾರತ ಭರ್ಜರಿ ಏಟು ಕೊಟ್ಟಿದೆ. ಪಾಕಿಸ್ತಾನದ ಡ್ರೋನ್, ಕ್ಷಿಪಣಿ ಎಫ್ – 16 (F-16) ಯುದ್ದ ವಿಮಾನವನ್ನು ಧ್ವಂಸಗೊಳಿಸಿದೆ.
ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಭಾರತೀಯ ಸೇನಾ ನೆಲೆಯ ಮೇಲೆ ದಾಳಿ ನಡೆಸಿದೆ. ಆದರೆ ಭಾರತ ಸೇನೆ ಪಾಕಿಸ್ತಾನದ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಹೊಡೆದು ಉರುಳಿಸಿದೆ. ಪಠಾಣ್ ಕೋಟ್, ಜಮ್ಮುಕಾಶ್ಮೀರದ ವಾಯುನೆಲೆ, ಜೈಸಲ್ಮೇರ್, ರಾಜೌರಿ, ಪೂಂಚ್, ತಂಗಹಾರ್, ಅಖ್ನೋರ್ ಸೇರಿದಂತೆ ಗಡಿಭಾಗದ ಹಲವು ಪ್ರದೇಶಗಳ ಮೇಲೆ ಪಾಕಿಸ್ತಾನ ಡ್ರೋನ್ ದಾಳಿಯನ್ನು ನಡೆಸಿದೆ. ಆದರೆ ಭಾರತ ಪ್ರತಿದಾಳಿ ನಡೆಸಿದೆ.
ಜಮ್ಮುಕಾಶ್ಮೀರದ ವಿಮಾನ ನಿಲ್ದಾಣದ ಮೇಲೆಯೂ ಪಾಕಿಸ್ತಾನ ದಾಳಿ ನಡೆಸಲು ವಿಫಲ ಯತ್ನ ನಡೆಸಿತ್ತು. ಆದರೆ ಭಾರತದ ಎಸ್ 400 ಪಾಕಿಸ್ತಾನಕ್ಕೆ ಸೇರಿದ ಹಲವು ಡ್ರೋನ್‌ಗಳನ್ನು ಭಾರತೀಯ ಸೇನೆ ಹೊಡೆದು ಉರುಳಿಸಿದೆ. ಜಮ್ಮು ಕಾಶ್ಮೀರದ ರಚೌರಿಯಲ್ಲಿ ಆತ್ಮಾಹುತಿ ದಾಳಿಗೆ ಉಗ್ರರು ಯತ್ನ ನಡೆಸಿದ್ದಾರೆ.
ಭಾರತ – ಪಾಕ್ ಗಡಿಯಲ್ಲಿ ಯುದ್ದದ ಕಾರ್ಮೋಡ
ಉಗ್ರರ ವಿರುದ್ದ ಕಾರ್ಯಾಚರಣೆಗೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸುತ್ತಿದ್ದು, ಭಾರತ ಹಾಗೂ ಪಾಕಿಸ್ತಾನದ ಗಡಿಯಲ್ಲೀಗ ಯುದ್ದದ ಕಾರ್ಮೋಡ ಆವರಿಸಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ಜೊತೆಗೆ ನಿರಂತರವಾಗಿ ಚರ್ಚೆ ನಡೆಸುತ್ತಿದ್ದಾರೆ. ಅಲ್ಲದೇ ಕ್ಷಣ ಕ್ಷಣದ ಮಾಹಿತಿಯನ್ನು ನೀಡುತ್ತಿದ್ದಾರೆ.
ಐಪಿಎಲ್ ಪಂದ್ಯ ರದ್ದು
ಧರ್ಮಶಾಲಾ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ಐಪಿಎಲ್ ಪಂದ್ಯ ನಡೆಯುತ್ತಿತ್ತು. ಆದರೆ ಪಾಕಿಸ್ತಾನದ ಡ್ರೋನ್ ದಾಳಿಯ ಹಿನ್ನೆಲೆಯಲ್ಲಿ ಪಂದ್ಯಾಟವನ್ನು ಅರ್ಧದಲ್ಲಿಯೇ ರದ್ದುಗೊಳಿಸಲಾಗಿದೆ. ಭಾರತ ಪಾಕಿಸ್ತಾನದ ಸ್ಟೇಡಿಯಂಗಳ ಮೇಲೆ ದಾಳಿ ನಡೆಸಿದ್ದು, ಪಾಕಿಸ್ತಾನ ಕೂಡ ದಾಳಿ ನಡೆಸುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲೀಗ ಪಂದ್ಯ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
operation sindoor Inda and pakistan war