Uddhab Bharali :ಆಸ್ಸಾಂನ ಪದ್ಮಶ್ರೀ ಪುರಸ್ಕೃತ ಉದ್ಧಭ್ ಭಾರಾಲಿ ವಿರುದ್ಧ ಅತ್ಯಾಚಾರ ಆರೋಪ ಎದುರಾಗಿದ್ದು ಈ ಸಂಬಂಧ ಉತ್ತರ ಲಖೀಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉದ್ದಭ್ ಭಾರಾಲಿ ತಮ್ಮದೇ ಪೋಷಣೆಯಲ್ಲಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ.
ಉದ್ದಭ್ ಭಾರಾಲಿ ವಿರುದ್ಧ ಪೋಸ್ಕೋ ಕಾಯ್ದೆ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ಐಆರ್ ದಾಖಲಾದ ಬಳಿಕ ಉದ್ಧಭ್ ಭಾರಾಲಿ ತಮ್ಮ ಬಂಧನಕ್ಕೂ ಮುನ್ನವೇ ಜಾಮೀನು ಕೋರಿ ಗುವಾಹಟಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. ನ್ಯಾಯಮೂರ್ತಿ ಅರುಣ್ ದೇವ್ ಚೌಧರಿ ಅವರಿದ್ದ ಗುವಾಹಟಿ ಹೈಕೋರ್ಟ್ನ ನ್ಯಾಯಪೀಠವು ವಿವಿಧ ಷರತ್ತುಗಳನ್ನು ನೀಡಿದ ನಿರೀಕ್ಷಣಾ ಜಾಮೀನು ನೀಡಿದೆ.
ನಿರೀಕ್ಷಣಾ ಜಾಮೀನು ನೀಡಿದ ಗುವಾಹಟಿ ಹೈಕೋರ್ಟ್ 25 ಸಾವಿರ ರೂಪಾಯಿಗಳ ಜಾಮೀನು ಬಾಂಡ್ ಒದಗಿಸುವಂತೆ ಹೇಳಿದೆ. ಅಲ್ಲದೇ ಲಿಖಿತ ಅನುಮತಿಯಿಲ್ಲದೇ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಯಾವುದೇ ಕಾರಣಕ್ಕೂ ಹೊರಗೆ ಹೋಗುವಂತಿಲ್ಲ ಎಂದು ಭಾರಾಲಿಗೆ ಷರತ್ತು ವಿಧಿಸಲಾಗಿದೆ.
ಆಸ್ಸಾಂನ ನವೋದ್ಯಮಿಯಾಗಿರುವ ಉದ್ಧಬ್ ಬಾರಾಲಿ 460 ಯಂತ್ರೋಪಕರಣಗಳ ಪೇಟೆಂಟ್ ಹೊಂದಿದ್ದಾರೆ. ಭತ್ತ ಒಕ್ಕಣೆ, ದಾಳಿಂಬೆ ಡಿ – ಸಿಡರ್, ಕಬ್ಬು ತೆಗೆಯುವ ಯಂತ್ರ ಸೇರಿದಂತೆ ವಿವಿಧ ಆವಿಷ್ಕಾರಗಳನ್ನು ಮಾಡಿದ್ದರು. ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಉದ್ದಬ್ ಬಾರಾಲಿ ಸಾಧನೆ ಗಮನಿಸಿದ ಕೇಂದ್ರ ಸರ್ಕಾರ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.ರಾಷ್ಟ್ರಪತಿ ರಾಮನಾಥ್ ಕೋವಿಂದ್ ನವ ಉದ್ಯಮಿ ಉದ್ಧಭ್ ಬಾರಾಲಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು.
Padma awardee Uddhab Bharali booked for rape of minor in Assam
ಇದನ್ನು ಓದಿ : Sindhutai Sapkal : ಅನಾಥ ಮಕ್ಕಳ ತಾಯಿ , ಪದ್ಮಶ್ರೀ ಪುರಸ್ಕೃತೆ ಸಿಂಧುತಾಯಿ ಸಪ್ಕಾಲ್ ನಿಧನ
ಇದನ್ನೂ ಓದಿ : Omicron cases : ಹೊಸ ರೂಪಾಂತರಿಯ ಹುಟ್ಟಿಗೆ ಕಾರಣವಾಗಲಿದೆ ಓಮಿಕ್ರಾನ್ : ಡಬ್ಲುಹೆಚ್ಓ ಎಚ್ಚರಿಕೆ