PM Narendra Modi : ನರೇಂದ್ರ ಮೋದಿ 3.0 : ಪ್ರಧಾನಿಯಾಗಿ ಮೋದಿ ಪ್ರಯಾಣ ವಚನ : ಹೊಸ ದಾಖಲೆ ಬರೆದ ನಮೋ

PM Narendra Modi Oath Taking ceremony Live : ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

PM Narendra Modi Oath Taking ceremony Live : ನವದೆಹಲಿ : ಪ್ರಧಾನಿ ನರೇಂದ್ರ ಮೋದಿ  (PM Narendra Modi ) ಅವರು ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ಜವಹರಲಾಲ್‌ ನೆಹರು ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ. ಮೋದಿ ಸಂಪುಟದಲ್ಲಿ ಈ ಬಾರಿ ಕರ್ನಾಟಕದ ಐದು ಮಂದಿಗೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಿದೆ.

Narendra Modi Oath Taking ceremony Live. here is Final List of Modi Cabinet Ministers
Image Credit to Original Source

ನರೇಂದ್ರ ಮೋದಿ ಅವರು 2014, 2019 ಹಾಗೂ 2024 ರ ಲೋಕಸಭಾ ಚುನಾವಣೆಯಲ್ಲಿ ಜಯಗಳಿಸುವ ಮೂಲಕ ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾದ ಖ್ಯಾತಿಗೆ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ. ಈ ಹಿಂದೆ ಕಾಂಗ್ರೆಸ್‌ ಪಕ್ಷದ ಜವಹರಲಾಲ್‌ ನೆಹರು ಅವರು 1952, 1957 ಮತ್ತು 1962ರ ಸಾರ್ವತ್ರಿಕ ಚುನಾವಣೆಗಳಲ್ಲಿ ಜಯಗಳಿಸಿ ಮೂರು ಬಾರಿ ಪ್ರಧಾನಿ ಅನ್ನೋ ಖ್ಯಾತಿಗೆ ಪಾತ್ರರಾಗಿದ್ದರು. ಆದರೆ ನರೇಂದ್ರ ಮೋದಿ ಅವರು ಜವಹರಲಾಲ್‌ ನೆಹರು ಅವರ ಸಾಧನೆಯನ್ನು ಮೋದಿ ಸರಿಗಟ್ಟಿದ ಸಾಧನೆ ಮಾಡಿದ್ದಾರೆ.

ನರೇಂದ್ರ ಮೋದಿ ಅವರು ಬಿಜೆಪಿ ಬಹುಮತದೊಂದಿಗೆ ಎರಡು ಪೂರ್ಣ ಅವಧಿಯನ್ನು ಪೂರ್ಣಗೊಳಿಸಿದ್ದರು. ಆದರೆ ಈ ಬಾರಿ ದೇಶದಲ್ಲಿ ಎನ್‌ಡಿಎ ನೇತೃತ್ವದಲ್ಲಿ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಿದೆ. ಇಂದು ಸಂಜೆ 7.15 ಕ್ಕೆ ಪ್ರಧಾನಿ ನರೇಂದ್ರ ದಾಮೋದರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ : KSRTC Bus Problems : ಕೆಎಸ್‌ಆರ್‌ಟಿಸಿ ಬಸ್‌ ವ್ಯವಸ್ಥೆ ಕಲ್ಪಿಸಲು ಆಗ್ರಹ : ಕುಂದಾಪುರದಲ್ಲಿ ಎಬಿವಿಪಿ ಪ್ರತಿಭಟನೆ

ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡುವ ಮೊದಲು, ರಾಜ್ ಘಾಟ್‌ನಲ್ಲಿ ಮಹಾತ್ಮ ಗಾಂಧಿ, ಸದೈವ್ ಅಟಲ್‌ನಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸೈನಿಕರಿಗೆ ನಮನ ಸಲ್ಲಿಸಿದ್ದಾರೆ. ಪ್ರಧಾನ ಮಂತ್ರಿಗಳ ಪ್ರಮಾಣವಚನ ಸ್ವೀಕಾರ ಮಾಡುವ ಹಿನ್ನೆಲೆಯಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ.

Narendra Modi Oath Taking ceremony Live. here is Final List of Modi Cabinet Ministers
Image Credit to Original Source

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನರೇಂದ್ರ ಮೋದಿ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದು, ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ ಲೋಕಸಭೆಯಲ್ಲಿ ಮೋದಿಯವರನ್ನು ತನ್ನ ನಾಯಕನನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಎರಡು ದಿನಗಳ ನಂತರ ಪ್ರಮಾಣವಚನ ಸ್ವೀಕಾರ ನಡೆಯುತ್ತಿದೆ. ಭಾರತದ ನೆರೆಯ ರಾಷ್ಟ್ರಗಳು ಮತ್ತು ಹಿಂದೂ ಮಹಾಸಾಗರ ಪ್ರದೇಶದ ಮುಖ್ಯಸ್ಥರು ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ.

ಇದನ್ನೂ ಓದಿ : Udupi News : ಮಣಿಪಾಲದ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ : ಆರೋಪಿ ಬಂಧನ

ಮೋದಿ 3.0 ಸಂಪುಟದಲ್ಲಿ ಸೇರ್ಪಡೆಗೊಳ್ಳಲಿರುವ ಸಂಸದರ ಪಟ್ಟಿ ಇಲ್ಲಿದೆ
ಅಮಿತ್ ಶಾ
ಮನ್ಸುಖ್ ಮಾಂಡವಿಯಾ
ಅಶ್ವಿನಿ ವೈಷ್ಣವ್
ನಿರ್ಮಲಾ ಸೀತಾರಾಮನ್
ಎಸ್ ಜೈಶಂಕರ್
ಪಿಯೂಷ್ ಗೋಯಲ್
ಜಿತೇಂದ್ರ ಸಿಂಗ್
ಶಿವರಾಜ್ ಸಿಂಗ್ ಚೌಹಾಣ್
ಹರ್ದೀಪ್ ಸಿಂಗ್ ಪುರಿ
ಹೆಚ್ ಡಿ ಕುಮಾರಸ್ವಾಮಿ
ಚಿರಾಗ್ ಪಾಸ್ವಾನ್
ನಿತಿನ್ ಗಡ್ಕರಿ
ರಾಜನಾಥ್ ಸಿಂಗ್
ಜ್ಯೋತಿರಾದಿತ್ಯ ಸಿಂಧಿಯಾ
ಕಿರಣ್ ರಿಜಿಜು
ಗಿರಿರಾಜ್ ಸಿಂಗ್
ಜಯಂತ್ ಚೌಧರಿ
ಅಣ್ಣಾಮಲೈ
ಎಂಎಲ್ ಖಟ್ಟರ್
ಸುರೇಶ್ ಗೋಪಿ
ಜಿತನ್ ರಾಮ್ ಮಾಂಝಿ
ರಾಮನಾಥ್ ಠಾಕೂರ್
ಜಿ ಕಿಶನ್ ರೆಡ್ಡಿ
ಬಂಡಿ ಸಂಜಯ್
ಅರ್ಜುನ್ ರಾಮ್ ಮೇಘವಾಲ್
ಪ್ರಹ್ಲಾದ್ ಜೋಶಿ
ಚಂದ್ರಶೇಖರ ಚೌಧರಿ
ಚಂದ್ರಶೇಖರ್ ಪೆಮ್ಮಸಾನಿ
ರಾಮ್ ಮೋಹನ್ ನಾಯ್ಡು ಕಿಂಜರಾಪು
ರವನೀತ್ ಸಿಂಗ್ ಬಿಟ್ಟು
ಜಿತಿನ್ ಪ್ರಸಾದ್
ಪಂಕಜ್ ಚೌಧರಿ
ಬಿ ಎಲ್ ವರ್ಮಾ
ಲಾಲನ್ ಸಿಂಗ್
ಸೋನೋವಾಲ್
ಅನುಪ್ರಿಯಾ ಪಟೇಲ್
ಪ್ರತಾಪ್ ರಾವ್ ಜಾಧವ್
ಅನ್ನಪೂರ್ಣ ದೇವಿ
ರಕ್ಷಾ ಖಡ್ಸೆ
ಶೋಭಾ ಕರಂದ್ಲಾಜೆ
ಕಮಲಜೀತ್ ಸೆಹ್ರಾವತ್
ರಾವ್ ಇಂದರ್ಜೀತ್ ಸಿಂಗ್
ರಾಮ್ ದಾಸ್ ಅಠವಳೆ
ಹರ್ಷ್ ಮಲ್ಹೋತ್ರಾ

PM Narendra Modi Oath Taking ceremony Live. here is Final List of Modi Cabinet Ministers

Comments are closed.